More

    ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ


    ಯಾದಗಿರಿ: ಸರಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ಸಕಾಲಕ್ಕೆ ಅವರಿಗೆ ನ್ಯಾಯ ಒದಗಿಸುವ ಕರ್ತವ್ಯ ಸಂಬಂಧಿಸಿದ ಅಧಿಕಾರಿಗಳದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸೂಚಿಸಿದರು.

    ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣ ಸ್ಪಂದಿಸುವ ಸದುದ್ದೇಶದೊಂದಿಗೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಹಮ್ಮಿಕೊಂಡಿದೆ. ಜನರ ತೊಂದರೆ ನಿವಾರಣೆಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಸದುಪಯೋಗ ಪಡೆಯಬೇಕು. ಅದರಂತೆ ಅಧಿಕಾರಿಗಳು ಕೂಡ ಸಕಾಲಕ್ಕೆ ಮತ್ತು ಆದ್ಯತೆಯ ಮೇಲೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸರಕಾರ ಜನರ ಸಮಸ್ಯೆಗಳನ್ನು ಅರಿತಿದೆ. ಈ ದಿಸೆಯಲ್ಲಿ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಗಳನ್ನು ಜಾರಿಗೊಳಿಸಿದೆ. ಶೇ.95 ರಷ್ಟು ಜನ ನೋಂದಣಿ ಮಾಡಿಕೊಂಡಿದ್ದು, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗಳ ಮೂಲಕ ಜನರ ಮನೆ ಬಾಗಿಲಿಗೆ ಇವುಗಳ ಲಾಭ ತಲುಪಿಸಿದೆ. ಶೀಘ್ರದಲ್ಲಿಯೇ ಯುವನಿಧಿ ಯೋಜನೆ ಜಾರಿಗೆಗೂ ಸಕರ್ಾರ ಕ್ರಮ ಕೈಗೊಳ್ಳಲಿದೆ ಎಂದರು.

    ಹಲವು ವರ್ಷಗಳಿಂದ ವಿವಿಧ ಸರಕಾರಿ ಇಲಾಖೆಗಳಲ್ಲಿ ಇತ್ಯರ್ಥವಾಗದೆ ಇರುವಂಥ ಅರ್ಜಿಗಳಿಗೆ ಜನತಾ ದರ್ಶನ ಮೂಲಕ ಪರಿಹಾರ ದೊರೆಯುತ್ತಿದೆ. ಕಾಲಮಿತಿಯೊಳಗೆ ಅರ್ಜಿಗಳ ಇತ್ಯರ್ಥಕ್ಕೂ ಕ್ರಮ ಕೈಗೊಂಡಿದ್ದು, ತಹಸಿಲ್, ಪುರಸಭೆ ಮತ್ತು ನಗರಸಭೆಗಳಲ್ಲಿ ಇ-ಆಫೀಸ್ ಮೂಲಕ ಅಜರ್ಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

    ನಮ್ಮ ಸರಕಾರ ನುಡಿದಂತೆ ನಡೆದಿದೆ. ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಬೇಳೆಕಾಳು, ಎಣ್ಣೆ, ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಹಾಗೂ ಹಸಿವಿನಿಂದ ಬಳಲುತ್ತಿದ್ದ ಬಡ ಜನರಿಗೆ ನೆರವಾಗಲು ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹರಿಗೆ ಸವಲತ್ತುಗಳು ಸಕಾಲಕ್ಕೆ ಅಧಿಕಾರಿಗಳು ತಲುಪಿಸಿದಾಗ ಮಾತ್ರ ಸಕರ್ಾರದ ಧ್ಯೇಯೋದ್ದೇಶಗಳು ಈಡೇರಲಿವೆ. ಕಷ್ಟದಿಂದ ಬರುವ ಜನರ ಅಜರ್ಿಗಳ ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ನೀಡಿ ಇತ್ಯರ್ಥಪಡಿಸುವಂತೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts