More

    ಜನಸಾಮಾನ್ಯರ ಆಶಯದಂತೆ ಬದುಕಿದ್ದ ಮಹಾನ್ ನಾಯಕ

    ಕಾನಹೊಸಹಳ್ಳಿ: ವೀರ ಮದಕರಿ ಚಿತ್ರದುರ್ಗ ಸಂಸ್ಥಾನದಲ್ಲಿ ಶೌರ್ಯ ಮತ್ತು ಶೂರತ್ವಕ್ಕೆ ಹೆಸರದ ನಾಯಕ. ಅಷ್ಟೆಯಲ್ಲದೆ ಜನಸಾಮಾನ್ಯರ ಆಶಯದಂತೆ ಅಳ್ವಿಕೆ ನಡೆಸಿದ್ದಾನೆ ಎಂದು ಶ್ರೀ ಶರಣಬಸವೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಬೊಮ್ಮಯ್ಯ ಹೇಳಿದರು.

    ಇದನ್ನೂ ಓದಿ: ಮಹಾನ್ ನಾಯಕರ ತತ್ವಾದರ್ಶ ಅಳವಡಿಸಿಕೊಳ್ಳಿ

    ಕಾನಹೊಸಹಳ್ಳಿ ಮದಕರಿ ವೃತ್ತದಲ್ಲಿ ಗುರುವಾರ ವಾಲ್ಮೀಕಿ ಯುವಕರ ಸಂಘ ಆಯೋಜಿಸಿದ್ದ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಜಯನಗರ ಸಾಮ್ರಾಜ್ಯಕ್ಕೆ ಚಿತ್ರದುರ್ಗ ಪಾಳೇಗಾರರು ಸಾಮಂತ ರಾಜರಾಗಿದ್ದರೆಂದು ಇತಿಹಾಸಪುಟಗಳಲ್ಲಿ ಉಲ್ಲೇಖವಿದೆ. ಸಂಸ್ಥಾನದ ಮೇಲೆ ಹೈದರ ಅಲಿ ದಾಳಿ ಮಾಡಿದಾಗ ಅವರ ವಿರುದ್ಧ ಹೋರಾಡಿದ ಮದಕರಿ ನಾಯಕನ ಶೌರ್ಯದ ಬಗ್ಗೆ ದಾಖಲೆ ಜತೆಯಲ್ಲಿ ಜನಪದರು ಹಾಡಿತ್ತಿರುವ ಕಥನ ಕಾವ್ಯ ಮತ್ತು ಲಾವಣಿಗಳು ಹಾಡುವ ಮೂಲಕ ಜೀವಂತವಾಗಿ ಇಟ್ಟಿದ್ದಾರೆ.

    ಅಲ್ಲದೆ, ಓರ್ವ ಕಾವಲುಗಾರ ಮಡದಿ ಒನಕೆ ಓಬವ್ವಳಿಗೆ ಚರಿತ್ರೆಯಲ್ಲಿ ಸ್ಥಾನ ನೀಡಿದ್ದು ಇತಿಹಾಸವೆಂದರು. ಮುಖಂಡರಾದ ಬಿ.ಪಿ.ಚಂದ್ರಮೌಳಿ ಮಾತನಾಡಿ, ಮದಕರಿ ನಾಯಕರು ಅಳ್ವಿಕೆ ವರ್ಣರಂಜಿತವಾಗಿತ್ತು, ಹುಟ್ಟಿನಿಂದಲೆ ಪರಾಕ್ರಮಿಶಾಲಿಯಾಗಿ ಬೆಳೆದ ಕಾರಣ ಗಂಡುಗಲಿ ಎಂಬ ಬಿರುದು ಪಡೆದರು.

    ಇಂತಹ ಮಹಾನ್ ನಾಯಕ ಜರಿಮಲೆ, ಗುಡೇಕೋಟೆ ಸಂಸ್ಥಾನದ ವೈವಾಹಿಕ ಸಂಬಂಧ ಬೆಳೆಸುವ ಮೂಲಕ ಕೂಡ್ಲಿಗಿ ತಾಲೂಕಿಗೆ ಅಳಿಯಾಗಲು ಸಾದ್ಯವಾಯಿತು ಎಂದರು. ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಉಪಾಧ್ಯಕ್ಷೆ ನೇತ್ರಾವತಿ, ವಾಲ್ಮೀಕಿ ಸಮುದಾಯದ ಮುಖಂಡರಾದ ಕುಲುಮೆಹಟ್ಟಿ ವೆಂಕಟೇಶ್,

    ಅಮಲಾಪುರ ಅಂಜಿನಪ್ಪ, ಪಿಎಸೈ ಎರಿಯಪ್ಪ ಅಂಗಡಿ, ಎಎಸೈ ಗೋವಿಂದಪ್ಪ, ಕೆ.ಜಿ. ನಾಗರಾಜ್, ಕಿಟ್ಟಪ್ಪರ ವೀರೇಶ್, ಯು.ನಾಗೇಶ್, ನಿಜಲಿಂಗಪ್ಪ, ವಿಭೂತಿ ಸಿದ್ದಪ್ಪ, ಗುರುಸಿದ್ದಯ್ಯ, ತೋಪಿನ ಬೊಮ್ಮಯ್ಯ, ಕತ್ತೇರು ಬೋರಪ್ಪ, ತಿಪ್ಪೆರುದ್ರಪ್ಪ, ಕತ್ತೇರು ನಾಗರಾಜ್, ರಾಕೇಶ್ ವಾಲ್ಮೀಕಿ,

    ಶಾಮಿಯಾನ ಹನುಮಂತಪ್ಪ ಹಾಗೂ ಮಂಜು, ರಾಘವೇಂದ್ರ, ಕೆ.ಎಸ್.ವಿಶ್ವನಾಥ್, ಬಸವರಾಜಯ್ಯ, ಎಳ್ನೀರ್ ಮಂಜಣ್ಣ, ಕರೀವೀರಪ್ಪ, ಏನ್.ಕೆ.ನಾಗೇಂದ್ರಪ್ಪ, ಹಾಲಪ್ಪರ ಶಿವರಾಜ್, ಕುಲುಮೆಹಟ್ಟಿ ರಾಜಣ್ಣ, ಸಿಡೆಗಲ್ಲು ತಿಪ್ಪೇಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts