More

    ಕಂಡ ಕಂಡಲ್ಲೇ ನಿದ್ರೆ; ನಿದ್ರೆ ಎಂದರೆ ಹೆದರುವ ಏಕೈಕ ಗ್ರಾಮವಿದು…

    ನೂರ್​ ಸುಲ್ತಾನ್​: ನಿದ್ರೆಯೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಏನೂ ಕೆಲಸವಿಲ್ಲದೆ ನೆಮ್ಮದಿಯಾಗಿ ನಿದ್ರಿಸಿಬಿಡಿ ಎಂದರೆ ಅತ್ಯಂತ ಖುಷಿಯಿಂದ ಮಲಗಿಬಿಡುತ್ತಾರೆ. ಆದರೆ ಈ ಒಂದು ಗ್ರಾಮದ ಜನರಿಗೆ ನಿದ್ರೆಯೆಂದರೆ ಹೆದರಿಕೆ.

    ಹೌದು! ಈಗ ನಾವು ಹೇಳಲೊರಟಿರುವುದು ಕಜಕಿಸ್ತಾನದ ಕಲಾಚಿ ಗ್ರಾಮದ ಬಗ್ಗೆ. ಈ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಜನರು ನಿದ್ರೆಯೆಂದರೆ ಭಯಭೀತರಾಗುತ್ತಿದ್ದರಂತೆ. ಎಷ್ಟೋ ಮಂದಿ ಕಂಡ ಕಂಡಲ್ಲೇ ನಿದ್ರೆಗೆ ಜಾರಿ ವಾರಗಟ್ಟಲೆ ನಿದ್ರೆ ಮಾಡಿಬಿಡುತ್ತಿದ್ದರಂತೆ.

    ಅಂದ ಹಾಗೆ ಕಲಾಚಿ ಗ್ರಾಮದ ಪಕ್ಕದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದಾಗಿ ಆ ವಾತಾವರಣದಲ್ಲಿ ಕಾರ್ಬನ್​ ಮೊನಾಕ್ಸೈಡ್​ ಹೆಚ್ಚಿತ್ತಂತೆ. ಎಷ್ಟರ ಮಟ್ಟಿಗೆಂದರೆ ಸಾಮಾನ್ಯ ಪ್ರದೇಶದಲ್ಲಿ ಇರುವ ಕಾರ್ಬನ್​ ಮೊನಾಕ್ಸೈಡ್​ಗಿಂತ 10 ಪಟ್ಟಿನಷ್ಟು ಹೆಚ್ಚಾಗಿತ್ತಂತೆ. ಇದರಿಂದಾಗಿ ಗ್ರಾಮಕ್ಕೆ ಗ್ರಾಮವೇ ಒಂದು ರೀತಿಯ ಕಾಯಿಲೆಗೆ ತುತ್ತಾಗಿದೆ. ಯಾವುದಕ್ಕೂ ಆಸಕ್ತಿ ಇಲ್ಲದಿರುವುದು, ನಿದ್ರೆ ಮಾಡಿದರೆ ವಾರಗಟ್ಟಲೆ ಎಚ್ಚರವೇ ಆಗದಿರುವಂತಹ ವಿಚಿತ್ರ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಿವೆ.

    ಈ ವಿಚಾರ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಈ ಕಾಯಿಲೆಗೆ ಕಾರಣವನ್ನು ಹುಡುಕಿದೆ. ಅದಾದ ನಂತರ ಅಲ್ಲಿದ್ದ ಸಾಕಷ್ಟು ಕುಟುಂಬಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಈಗಲೂ 100ಕ್ಕೂ ಅಧಿಕ ಕುಟುಂಬಗಳು ಅಲ್ಲಿ ವಾಸಿಸುತ್ತಿದ್ದು, ಗಣಿಗಾರಿಕೆ ನಡೆಯುತ್ತಿಲ್ಲವಾದ್ದರಿಂದ ಆರೋಗ್ಯವಾಗಿ ಬದುಕುತ್ತಿದ್ದಾರೆ. (ಏಜೆನ್ಸೀಸ್​)

    16 ತಾಸು ನೀರೊಳಗೇ ಇದ್ದ ಮಹಿಳೆ! ಹೊರಬಂದವಳಿಗೆ ಈಗ ಬೇಕಂತೆ ನಿಮ್ಮೆಲ್ಲರ ಸಹಾಯ

    ಹಣ್ಣು ಬೇಕಾ ಮಾವಿನಹಣ್ಣು…. ರೀಲ್‌ ಅಲ್ಲ ಇದು ರಿಯಲ್‌: ತೋಟದಲ್ಲಿ ಫುಲ್‌ ಬಿಜಿ ಈ ತುಮಕೂರು ಬೆಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts