More

    ತಿರಂಗಾ ಕಲರವದಲ್ಲಿ ಮಿಂದೆದ್ದ ಜನತೆ : ಎಲ್ಲೆಲ್ಲೂ ಮೊಳಗಿದ ದೇಶಭಕ್ತಿಯ ಝೇಂಕಾರ

    ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ, ನೈಷ್ಟಿಕ ಬ್ರಹ್ಮಚಾರಿ, ಸಮಾಜಮುಖಿಯ ಅದಮ್ಯಚೇತನ, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ಕರ್ಮಭೂಮಿಯಲ್ಲಿ ಶುಕ್ರವಾರ ಐತಿಹಾಸಿಕ ದೇಶಭಕ್ತಿಯ ನಿನಾದ ಮೊಳಗಿದವು. ಯುವ ಜನತೆ ತಿರಂಗಾ ಕಲರವದಲ್ಲಿ ಮಿಂದೆದ್ದು ದೇಶಾಭಿಮಾನದ ವಿರಾಟರೂಪ ಪ್ರದರ್ಶಿಸಿದರು. ಜನಪದ ಸೊಗಡಿನ ಝೇಂಕಾರದ ಸದ್ದು ಮಾರ್ಧನಿಸಿದವು.

    ಆಲಮಟ್ಟಿಯ ಹರ್ಡೇಕರ ಮಂಜಪ್ಪ ಸ್ಮಾರಕದ ಅಂಗಳದಲ್ಲಿ ಶುಕ್ರವಾರ ಕಂಡು ಬಂದ ವೈಭವಯುತ ದೃಶ್ಯಗಳು ನಿಜಕ್ಕೂ ಮೈಮನಗಳು ನಿಬ್ಬೆರಾಗುವಂತೆ ಬೆರಗುಗೊಳಿಸಿದವು. ದೇಶಭಕ್ತಿಯ ಭಾವದೊಂದಿಗೆ ಅಪಾರ ಸಂಖ್ಯೆಯ ಯುವ ಸಮೂಹ ಸೇರಿ ಅಸಂಖ್ಯಾತ ಜನತೆ ತೇಲುವಂತೆ ಮಾಡಿದವು.

    ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು 75ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ನಿಮಿತ್ತ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಅಭೂತಪೂರ್ವ ಸವಿಭಾವಗಳು ಮೂಡಿಬಂದವು.

    ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು.

    ಸಾವಿರಾರು ಸಂಖ್ಯೆಯಲ್ಲಿ ಯುವಕ, ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣ ಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು. ರಾಷ್ಟ್ರ ನಾಯಕರ ಸ್ತಬ್ಧ ಚಿತ್ರಗಳು, ಕರಾವಳಿ ಭಾಗದ ಜನಾಕರ್ಷಕ ಕಂಸಾಳೆ ಸೇರಿ ವಿವಿಧ ಯಕ್ಷಗಾನಗಳ ನೃತ್ಯ, ದೇಶಾಭಿಮಾನದ ಗೀತರಾಗಗಳು ಗಮನ ಸೆಳೆದವು. ಮಂಜಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು.

    ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಉದ್ಯಮಿ ಭರತಗೌಡ ಪಾಟೀಲ, ಶಿವಾನಂದ ಪಟ್ಟಣಶೆಟ್ಟಿ, ನಿಡಗುಂದಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ, ಶಿವಾನಂದ ಅವಟಿ, ಚೆನ್ನಬಸು ಚೆನ್ನಿಗಾವಿ ಮಾಜಿ ಸೈನಿಕರು ಮತ್ತಿತರರಿದ್ದರು.

    ನಿಡಗುಂದಿಯ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಿ ಬಳಿಕ ಮಣಗೂರ ಸರ್ಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಮಾಗಡಿ ಸುತ್ತಮುತ್ತಲಿನ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದವು.

    ಪೂಜಾ ಕುಣಿತ, ವೀರಗಾಸೆ, ತಮಟೆ ವಾದನ, ಕಂಸಾಳೆ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ, ಗೀಗಿಪದ, ಜನಪದ ಗೀತೆಗಳು ಗಮನ ಸೆಳೆದವು. ಯಕ್ಷಗಾನದ ದೃಶ್ಯಗಳು ನಡಿಗೆಗೆ ಇಂಬು ತಂದವು.

    ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಶಾಲೆ, ಕಾಲೇಜು ಮಕ್ಕಳು ಮೊದಲು ದಿನದ ಆರಂಭ ನಡಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸ್ಕೌಟ್, ಗೈಡ್ಸ್, ಶಿಕ್ಷಕರು, ಮಾಜಿ ಸೈನಿಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿವಿಧ ಶಾಲೆಗಳ ಪಥಸಂಚಲನದ ಬ್ಯಾಂಡ್‌ಗಳು ಗಮನಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts