More

    ಕೃಷ್ಣಾ ನದಿ ದಂಡೆಯಲ್ಲಿ ಪುಣ್ಯಸ್ನಾನ

    ಆಲಮಟ್ಟಿ: ಯುಗಾದಿ ನಿಮಿತ್ತ ಕೃಷ್ಣಾ ನದಿ ದಂಡೆಯಲ್ಲಿ ಸೋಮವಾರ ಜನಸಾಗರ ಎಲ್ಲೆಡೆಯೂ ಕಂಡು ಬಂದಿತು.

    ಸಹಸ್ರಾರು ಜನರು ಕೃಷ್ಣಾ ನದಿ ಹಾಗೂ ದಂಡೆಯಲ್ಲಿ ಪುಣ್ಯ ಸ್ನಾನ ಮಾಡಿದರು. ನಾನಾ ದೇವರುಗಳ ಪಲ್ಲಕ್ಕಿಗಳನ್ನು ತೊಳೆಯುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಕೆಲವೆಡೆ ನದಿಯ ದಂಡೆಯಲ್ಲಿ ಜಾಗ ಸಿಗದೆ ಪರದಾಡಿದ ದೃಶ್ಯ ಕಂಡುಬಂದಿತು.

    ಎತ್ತಿನ ಬಂಡಿ, ಆಟೋ, ಟ್ಯಾಕ್ಟರ್, ಕಾರು, ರೈಲು, ಬಸ್‌ಗಳ ಮೂಲಕ ಬೆಳಗ್ಗೆಯಿಂದಲೇ ಜನ ಸಾಗರೋಪಾದಿಯಲ್ಲಿ ಹರಿದು ಬಂದಿತ್ತು. ಸ್ನಾನದ ನಂತರ ನದಿ ದಂಡೆ, ವಿವಿಧ ಉದ್ಯಾನಗಳಲ್ಲಿ ಜನತೆ ಬುತ್ತಿ ಊಟ ಮಾಡಿ ಸಂಭ್ರಮಿಸಿದರು.

    ಶೇಂಗಾ ಹೋಳಗಿ, ಖಡಕ್ ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬದನೆಕಾಯಿ ಪಲ್ಲೆ ಮೊದಲಾದವುಗಳನ್ನು ಬಹುತೇಕ ಜನ ತಂದು ಮೃಷ್ಟಾನ್ನ ಭೋಜನ ಸೇವಿಸಿದ್ದು ಕಂಡು ಬಂತು. ಮಕ್ಕಳಂತೂ ನದಿ ತೀರದಲ್ಲಿ ಆಟ ಆಡಿ ಖುಷಿಪಟ್ಟರು.

    ಕೃಷ್ಣಾ ಸೇತುವೆ ಹತ್ತಿರ, ಪಾರ್ವತಿಕಟ್ಟಾ ಸೇತುವೆ ಹತ್ತಿರ, ಅಣೆಕಟ್ಟಿನ ಅರ್ಧ ಕಿ.ಮೀ. ನಂತರದ ಹಿಂಭಾಗದಲ್ಲಿ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಮನಹಳ್ಳಿ, ಸೀತಿಮನಿ ಬಳಿ ಸಹಸ್ರಾರು ಜನತೆ ಸ್ನಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಬಸವೇಶ್ವರ, ಮುಚಖಂಡವ್ವ, ದುರ್ಗವ್ವ, ದ್ಯಾಮವ್ವ, ಮರಗವ್ವ, ಹುಚ್ಚಮ್ಮ, ಲಕ್ಷ್ಮೀ, ಬೀರಪ್ಪ, ಆಂಜನೇಯ, ಶಿವ, ಮಾಳಿಂಗರಾಯ, ಮರಗಮ್ಮ, ಬನಶಂಕರಿ, ಅಂಬಾಭವಾನಿ, ಹುಚ್ಚಯ್ಯಸ್ವಾಮಿ, ವೆಂಕಟೇಶ, ಮಲ್ಲಯ್ಯ, ಹನಮಂತ, ಕಾಳವ್ವ, ಅಮೋಘಸಿದ್ದ, ಮಡಿವಾಳಪ್ಪ, ಸಂಗಮೇಶ್ವರ ಸೇರಿ ವಿವಿಧ ದೇವರುಗಳನ್ನು ನೂರಾರು ಗ್ರಾಮಗಳಿಂದ ತಂದು ಸ್ನಾನ ಮಾಡಿಸಿದರು. ಪೂಜೆಯ ವಿವಿಧ ವಾದ್ಯಗಳೊಂದಿಗೆ ನದಿಯಿಂದ ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಿತ್ತು.

    ಇಲ್ಲಿನ ಚಂದ್ರಮ್ಮದೇವಿ ದೇವಸ್ಥಾನ, ಯಲ್ಲಮ್ಮನ ಬೂದಿಹಾಳ ಗ್ರಾಮದ ಯಲ್ಲಮ್ಮದೇವಿ, ಯಲಗೂರ ಗ್ರಾಮದ ಯಲಗೂರೇಶನ ದರ್ಶನಪ ಡೆಯಲು ಭಕ್ತರು ಸಾಲಾಗಿ ನಿಂತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts