More

    ಉತ್ಸವಗಳು ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿ

    ಸಿಂಧನೂರು: ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿ ಯುಗಾದಿ ಅಂಗವಾಗಿ ದ್ಯಾವಮ್ಮದೇವಿ ಜೋಡು ಪಲ್ಲಕ್ಕಿ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

    ಸೋಮವಾರ ರಾತ್ರಿ ಭಜನೆ ಕಾರ್ಯಕ್ರಮ, ಮಂಗಳವಾರ ಬೆಳಗ್ಗೆ ಬಾಹ್ಮೀ ಮುಹೂರ್ತದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಜೋಡಿ ಪಲ್ಲಕ್ಕಿಯಲ್ಲಿ ಎರಡೂ ದೇವರಮೂರ್ತಿ ಪಲ್ಲಕ್ಕಿ ಉತ್ಸವ ವಿವಿಧ ರಸ್ತೆ ಮುಖಾಂತರ ಗಂಗೆ ಸ್ಥಳಕ್ಕೆ ತೆರಳಿ ಪೂಜಾ ಕೈಕಂರ್ಯಗಳು ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಗಮನಸೆಳೆಯಿತು. ಜೋಡು ಪಲ್ಲಕ್ಕಿ ಉತ್ಸವದಲ್ಲಿ ಸುಮಂಗಲೆಯರು ಕಳಸದೊಂದಿಗೆ ಭಾಗವಹಿಸಿದ್ದರು.


    ಅರ್ಚಕ ಮಾನಯ್ಯ ವಿಶ್ವಕರ್ಮ ಮಾತನಾಡಿ, ಹಬ್ಬ ಜಾತ್ರೆಗಳು ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ದ್ಯೋತಕವಾಗಿದ್ದು, ಈ ಆಚರಣೆಗಳ ಮೂಲಕ ಪರಸ್ಪರ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಉತ್ಸವ ಆಚರಿಸುವ ಮೂಲಕ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts