More

    VIDEO| ಇಲ್ಲಿಯ ಜನ ಬಿಯರ್ ಕುಡಿಯುತ್ತಾ ಮಾಡುತ್ತಾರೆ ಯೋಗ !

    ಡೆನ್ಮಾರ್ಕ್​​​: ನಮ್ಮ ದೇಹವು ಆರೋಗ್ಯವಾಗಿದ್ದರೆ ಮಾತ್ರವೇ ನಮ್ಮ ಮನಸ್ಸೂ ಕೂಡ ಸಂತೋಷವಾಗಿರುತ್ತದೆ. ದೈಹಿಕ ಸದೃಢತೆ, ಮಾನಸಿಕ ನೆಮ್ಮದಿಗಾಗಿ ಯೋಗ ಮಾಡಲಾಗುತ್ತದೆ. ಯೋಗ ಭಾರತದ ಹೆಮ್ಮೆ. ನಮ್ಮ ದೇಶದ ಮೂಲದ್ದಾಗಿರುವ ಯೋಗವನ್ನು ಇದೀಗ ವಿದೇಶಗಳು ಕೂಡ ಪಾಲಿಸುತ್ತಿವೆ. ಆದರೆ ಡೆನ್ಮಾರ್ಕ್‌ನಲ್ಲಿ ಬಿಯರ್‌ ಕುಡಿಯುತ್ತಾ ಯೋಗ ಮಾಡಲಾಗಿದೆ.

    ಬಿಯರ್‌ ಕುಡಿಯುತ್ತಾ ಯೋಗ:
    ಬಿಯರ್ ಯೋಗ ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಬಿಯರ್ ಸೇವಿಸುತ್ತಾ ಯೋಗ ಮಾಡಲಾಗುತ್ತದೆ. ಈ ಬಿಯರ್ ಯೋಗದ ಟ್ರೆಂಡ್ ಕೆಲವು ಸಮಯದಿಂದ ವಿದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಡೆನ್ಮಾರ್ಕ್ ನ ರಾಜಧಾನಿ ಕೋಪನ್ ಹೆಗನ್ ನಲ್ಲಿ ರಸ್ತೆ ಬದಿಯಲ್ಲಿ ಕೆಲವರು ಬೀಯರ್​​ ಸೇವಿಸುತ್ತಾ ಯೋಗ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ವೈರಲ್​​ ಆಗಿದೆ.

    ಇದನ್ನೂ ಓದಿ: ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಬಯೋಪಿಕ್​​​ನಲ್ಲಿ ಶ್ರದ್ಧಾ ಕಪೂರ್ !

    ವಿಡಿಯೋದಲ್ಲಿ ಏನಿದೆ?: ಯೋಗ ಮಾಡಲು ರಸ್ತೆ ಬದಿಯಲ್ಲಿ ಸಾವಿರಾರು ಜನರು ಸೇರಿದ್ದಾರೆ. ಇಲ್ಲಿ ಎಲ್ಲರೂ ಕೈಯಲ್ಲಿ ಬಿಯರ್ ಡಬ್ಬಿ ಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲರೂ ಯೋಗ ಭಂಗಿಯಲ್ಲಿದ್ದಾರೆ. ಆದರೆ ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದು ಕುಡಿಯುತ್ತಾ, ಯೋಗ ಮಾಡುತ್ತಿದ್ದಾರೆ. ಕೆಲವು ಆಸನಗಳು ಆದ ನಂತರ, ಕೆಲವು ಆಸನಗಳ ಮಧ್ಯದಲ್ಲಿ ಬಿಯರ್‌ ಕುಡಿಯುವುದೇ ಈ ʼಬಿಯರ್‌ ಯೋಗʼ ವಿಶೇಷತೆಯಂತೆ.

    ಬಿಯರ್ ಯೋಗದ ಟ್ರೆಂಡ್ ವಿದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಮೊದಲು ಇದು ಜರ್ಮನಿಯಲ್ಲಿ ಜನಪ್ರಿಯವಾಯಿತು. ಆ ನಂತರ ಕ್ರಮೇಣ ಆಸ್ಟ್ರೇಲಿಯಾ ಮತ್ತು ಅಮೆರಿಕ ಕೂಡ ಈ ಟ್ರೆಂಡ್ ಅನುಸರಿಸಿದವು. ಕಳೆದ ನಾಲ್ಕು ವರ್ಷಗಳಿಂದಲೂ ಇದೇ ರೀತಿಯಲ್ಲಿ ಬಿಯರ್‌ ಯೋಗ ಕಾರ್ಯಕ್ರಮ ನಡೆಸಲಾಗುತ್ತಿದೆಯಂತೆ. ದೇಹಕ್ಕೆ ವ್ಯಾಯಾಮ ಆಗುವುದರ ಜತೆ ಬಿಯರ್‌ ಕೂಡ ಸಿಗುತ್ತದೆಯೆಂದು ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

    ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts