More

    ನೆಲದೊಳಗಿನಿಂದ ಒಂದೇ ದಿನ 3 ಸಲ ಕೇಳಿಬಂತು ಭಾರಿ ಸದ್ದು, ಭೂಕಂಪನದ ಅನುಭವ; ಗಡಿಕೇಶ್ವರ ಗ್ರಾಮದಲ್ಲಿ ಗಡಗಡ

    ಕಲಬುರಗಿ: ಇಂದು ರಾತ್ರಿ ಈ ಗ್ರಾಮದ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ನೆಲದೊಳಗಿನಿಂದ ಒಂದೇ ದಿನದಲ್ಲಿ ಮೂರು ಸಲ ಭಾರಿ ಸದ್ದು ಕೇಳಿ ಬಂದಿದ್ದಷ್ಟೇ ಅಲ್ಲದೆ, ಭೂಕಂಪನದ ಅನುಭವ ಕೂಡ ಆಗಿದೆ. ಒಟ್ಟಿನಲ್ಲಿ ಗಡಿಕೇಶ್ವರ ಗ್ರಾಮಸ್ಥರು ಗಡಗಡ ಎಂಬಂತಿದ್ದು, ಊರಲ್ಲಿ ಗಡಿಬಿಡಿಯ ವಾತಾವರಣ ಸೃಷ್ಟಿಯಾಗಿದೆ.

    ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ 7.30, 7.35 ಮತ್ತು 7.50ರ ಹಾಗೆ ಭಾರಿ ನೆಲದೊಳಗಿನಿಂದ ಭಾರಿ ಸದ್ದು ಕೇಳಿಬಂದಿದ್ದು, ಜನರಿಗೆ ಭೂಕಂಪನದ ಅನುಭವವಾಗಿದೆ. ಮನೆಯೊಳಗಿನ ವಸ್ತುಗಳ ಗಡಗಡ ಅಲ್ಲಾಡಿ ಬಿದ್ದಿದ್ದು, ಕೆಲವೆಡೆ ಬಿರುಕುಗಳೂ ಉಂಟಾಗಿವೆ. ಈ ರಾತ್ರಿ ಎಲ್ಲರೂ ಜಾಗ್ರತೆಯಿಂದ ಇರಬೇಕು ಎಂದು ಹಳ್ಳಿಯಲ್ಲಿ ಡಂಗುರ ಕೂಡ ಸಾರಲಾಗಿದೆ.

    ಗಡಿಕೇಶ್ವರ ಸಮೀಪದ ಕೇರಳ್ಳಿ ಗ್ರಾಮದಲ್ಲೂ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದೆ. ಪಾತ್ರೆ ಮತ್ತಿತರ ವಸ್ತುಗಳು ಅಲುಗಾಡಿ ಬಿದ್ದಿದ್ದನ್ನು ನೋಡಿ ಬೆಚ್ಚಿಬಿದ್ದ ಜನರೆಲ್ಲ ಮನೆಯಿಂದ ರಸ್ತೆಗೆ ಓಡಿಬಂದು ಜಮಾಯಿಸಿದ್ದಾರೆ. ಕಾಳಗಿ ಮತ್ತು ಚಿಂಚೋಳಿ ತಾಲ್ಲೂಕಿನಲ್ಲೂ ಭೂಕಂಪನದ ಅನುಭವ ಆಗಿದೆ ಎಂದು ಜನರು ಹೇಳಿಕೊಂಡಿದ್ದಾರೆ. ಚಿಂಚೋಳಿ ತಾಲ್ಲೂಕಿನ ನಿಡಗುಂದಾ, ಶಿರೋಳ್ಳಿ, ಸುಲೆಪೇಟ್, ಕಾಳಗಿ ತಾಲ್ಲೂಕಿನ ಹೊಸಹಳ್ಳಿ ಹಲಚೇರಾದಲ್ಲಿ ಭೂಮಿ ಕಂಪಿಸಿದ್ದು, ಮನೆಮಂದಿ ಎಲ್ಲ ಹೊರಗೆ ಬಂದು ರಸ್ತೆ ಬದಿಯಲ್ಲಿ ಆತಂಕದಿಂದ ಕಾಲಕಳೆಯುವಂತಾಗಿದೆ.

    ನೆಲದೊಳಗಿನಿಂದ ಒಂದೇ ದಿನ 3 ಸಲ ಕೇಳಿಬಂತು ಭಾರಿ ಸದ್ದು, ಭೂಕಂಪನದ ಅನುಭವ; ಗಡಿಕೇಶ್ವರ ಗ್ರಾಮದಲ್ಲಿ ಗಡಗಡ
    ಭೂಕಂಪನಕ್ಕೆ ಹೆದರಿ ರಸ್ತೆಗೆ ಬಂದು ನಿಂತಿರುವ ಜನರು

    ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

    ಹೆದ್ದಾರಿಯಲ್ಲಿ ಸೃಷ್ಟಿಯಾಯಿತು ಕಾವೇರಿ ಕಾರಂಜಿ; ನದಿಯಂತಾದ ಬೆಂಗಳೂರು-ಮೈಸೂರು ರಸ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts