More

    ಪುನೀತ್​​ ಅಕಾಲಿಕ ಸಾವು: ಹೃದಯ ತಪಾಸಣೆಗೆ ಮುಗಿಬಿದ್ದ ಜನ

    ಮೈಸೂರು/ಬಾಗಲಕೋಟೆ: ಯುವನಟ ಪುನೀತ್ ರಾಜ್​​ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ಯುವ ಜನರಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಮೈಸೂರಿನ ಜಯದೇವ ಆಸ್ಪತ್ರೆಗೆ ಹೃದಯ ತಪಾಸಣೆ ಮಾಡಿಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ.

    ಆತಂಕದಲ್ಲಿ ಹೃದಯ ಪರೀಕ್ಷೆಗೆ ಮುಂದಾಗಿರುವ ಜನಸಮೂಹದಿಂದಾಗಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ ದಿನಗಳಿಗೆ ಹೋಲಿಸಿದರೆ ಜನರ ಆಸ್ಪತ್ರೆ ಭೇಟಿಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. 60 ಮಂದಿಯನ್ನು ನೋಡುತ್ತಿದ್ದ ಜಾಗದಲ್ಲಿ 800 ಮಂದಿಯ ತಪಾಸಣೆ ಮಾಡಬೇಕಾಗಿ ಬಂದಿದೆ.

    ಇದನ್ನೂ ಓದಿ: ಜಿಮ್​ ಮಾಡಬೇಕಾ ಬೇಡ್ವಾ? ಹೃದಯದ ಆರೋಗ್ಯದ ಬಗ್ಗೆ ತಜ್ಞರ ಮಾಹಿತಿ ಇಲ್ಲಿದೆ

    ಬಾಗಲಕೋಟೆಯಲ್ಲಿ ಕೂಡ ಹೃದ್ರೋಗ ತಪಾಸಣೆಗೆ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಬಾಗಲಕೋಟೆ ನಗರದ ಸುಭಾಷ್ ಪಾಟಿಲ್ ಆಸ್ಪತ್ರೆ, ಕೆರೂಡಿ ಹೃದಯರೋಗ ಆಸ್ಪತ್ರೆ, ಸೊಲಬಣ್ಣವರ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಆತಂಕಕ್ಕೆ ಒಳಗಾಗಿ ವೈದ್ಯರ ಬಳಿಗೆ ಬರುತ್ತಿದ್ದಾರೆ.

    ಈ ಮೊದಲು ಪ್ರತಿದಿನ ಒಂದು ಆಸ್ಪತ್ರೆಯಲ್ಲಿ ಐದರಿಂದ ಹತ್ತು ಮಧ್ಯ ವಯಸ್ಕ ರೋಗಿಗಳು ತಪಾಸಣೆಗೆ ಬರುತ್ತಿದ್ದರು. ಈಗ ಮೂರು ಪಟ್ಟು ಹೆಚ್ಚಳವಾಗಿದ್ದು, ಆಸ್ಪತ್ರೆಗಳಲ್ಲಿ ಇಸಿಜಿ, ಹಾರ್ಟ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಯುವ ವಯಸ್ಸಿನವರು ಸಹ ತಪಾಸಣೆಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಪುನೀತ್​ ಕಣ್ಣು ಇಬ್ಬರಿಗಲ್ಲ, ನಾಲ್ವರ ಬದುಕಿಗೆ ಬೆಳಕಾಯ್ತು! ಆ ನಾಲ್ವರೂ ಕರ್ನಾಟಕದವರೇ…

    ಆತಂಕ ಬೇಡ: ದಿಗ್ವಿಜಯ ನ್ಯೂಸ್‌ನೊಂದಿಗೆ ಮಾತನಾಡಿರುವ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸದಾನಂದ, “ಕ್ರೌಡ್‌ನಿಂದ ನಿಜಕ್ಕೂ ಚಿಕಿತ್ಸೆ ಪಡೆಯಬೇಕಿರುವ ರೋಗಿಗಳಿಗೆ ತೊಂದರೆ ಆಗಿದೆ. ಯಾರೂ ಕೂಡ ಆತಂಕ ಒಳಗಾಗಬೇಡಿ. ಆ ರೀತಿ ಲಕ್ಷಣಗಳು ಕಂಡು ಬಂದರೆ ಮೊದಲು ತಕ್ಷಣದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಿ. ಆ ವೈದ್ಯರು ರೆಫರ್ ಮಾಡಿದರೆ ಹೃದಯ ಸಂಬಂಧಿತ ಆಸ್ಪತ್ರೆಗಳಿಗೆ ಭೇಟಿ ನೀಡಿ. ಆತಂಕಪಟ್ಟು ಆಸ್ಪತ್ರೆ ಬರುವುದರಿಂದ ನಿಜವಾಗಿ ಹೃದಯ ಖಾಯಿಲೆ‌ ಇರುವವರಿಗೆ ಟ್ರೀಟ್ ಮಾಡಲು ತೊಂದರೆ ಆಗುತ್ತಿದೆ” ಎಂದಿದ್ದಾರೆ.

    ಸದ್ಯ ಬರುತ್ತಿರುವ ಶೇಕಡ 90 ರಷ್ಟು ಜನರಲ್ಲಿ ಯಾವುದೇ ಸಮಸ್ಯೆ ಇಲ್ಲ. ಭಯಪಟ್ಟು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಯಮಿತ ಮತ್ತು ಸೀಮಿತ ವ್ಯಾಯಾಮ, ಉತ್ತಮ ಆಹಾರ ಕ್ರಮ ರೂಢಿಸಿಕೊಳ್ಳಿ ಎಂದು ಡಾ.ಸದಾನಂದ ಸಲಹೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)

    ಜಿಮ್​, ಫಿಟ್ನೆಸ್​ ಸೆಂಟರ್​ಗಳಿಗೆ ಮಾರ್ಗಸೂಚಿ ರಚನೆ: ಆರೋಗ್ಯ ಸಚಿವ ಸುಧಾಕರ್

    ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೇ ಒದಗಿಸಲು ಬರಲಿದ್ದಾನೆ, ‘ಜನಸೇವಕ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts