More

    ಜಿಮ್​ ಮಾಡಬೇಕಾ ಬೇಡ್ವಾ? ಹೃದಯದ ಆರೋಗ್ಯಕ್ಕೆ ತಜ್ಞರ ಸಲಹೆ ಇಲ್ಲಿದೆ

    ಬೆಂಗಳೂರು: ಸೆಡೆಂಟರಿ ಲೈಫ್​ಸ್ಟೈಲ್ ಅಂದರೆ ಸೋಮಾರಿತನದ ಜೀವನಶೈಲಿಯೂ ಹೃದಯಾಘಾತವಾಗಲು ಒಂದು ಪ್ರಮುಖ ಕಾರಣ. ಆದ್ದರಿಂದ ಜಿಮ್​ಗೆ ಹೋಗಿ ವ್ಯಾಯಾಮ ಮಾಡುವುದು ತಪ್ಪು ಎನ್ನಲಾಗುವುದಿಲ್ಲ. ಆದರೆ, ಮಾಡರೇಟ್​ ಆಗಿ ಮಧ್ಯಮ ಮಟ್ಟದಲ್ಲಿ ಅಥವಾ ಅಲ್ಪಮಟ್ಟದಲ್ಲಿ ವರ್ಕ್​ಔಟ್​ ಮಾಡುವುದು ಸೂಕ್ತ. ಅವರವರ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಜಿಮ್​ನಲ್ಲಿ ವ್ಯಾಯಾಮ ಮಾಡಬೇಕು. ಹೈ ಇಂಟೆನ್ಸಿಟಿ ವರ್ಕ್​ಔಟ್​ ಮಾಡುವುದು ಸೂಕ್ತವಲ್ಲ. ಜೊತೆಗೆ, ಜಿಮ್​ಗೆ ಸೇರುವ ಮುನ್ನ ಹೃದಯದ ಆರೋಗ್ಯವನ್ನು ಪರಿಶೀಲಿಸಿಕೊಂಡು ನಂತರ ಆರಂಭಿಸುವುದು ಒಳ್ಳೆಯದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

    ಅವರು ಭಾನುವಾರ(ಅ.31) ವಿಜಯವಾಣಿ ಕ್ಲಬ್​ಹೌಸಿನಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಬಗೆಗೆ ನಡೆದ ಸಂವಾದದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಜಿಮ್​ ಮಾಡುವುದು ತಪ್ಪಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಇನ್ನೊಬ್ಬರು ಮಾಡುತ್ತಾರೆ ಎಂದು ಸ್ಪರ್ಧಾತ್ಮಕ ಭಾವನೆಯಿಂದ 40 ಕೆಜಿ ವೇಯ್ಟ್ಸ್​ ಎತ್ತುವ ಸಾಮರ್ಥ್ಯ ಇರುವವರು 80 ಕೆಜಿ ಎತ್ತಲು ಪ್ರಯತ್ನಿಸಿದರೆ, ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಹೃದಯದ ಆರೋಗ್ಯ ಕೆಡುತ್ತದೆ ಎಂದು ವಿವರಿಸಿದ್ದಾರೆ.

    ಫಿಟ್​ನೆಸ್​ ಆಕಾಂಕ್ಷೆಯಲ್ಲಿ ಡಯಟ್​ನಲ್ಲಿ ಈಗ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಹೈಪ್ರೋಟೀನ್​ ಡಯಟ್​ನಲ್ಲಿ ರಕ್ತದ ನಾಳಗಳು ರಪ್ಚರ್​ ಆಗುತ್ತೆ. ಆದ್ದರಿಂದ ಪ್ರೋಟೀನ್​ ಸಪ್ಲಿಮೆಂಟುಗಳನ್ನು ಅನಿಯಮಿತವಾಗಿ ಸೇವಿಸಬಾರದು. ರಾಸಾಯನಿಕ ಆಹಾರಗಳಿಗಿಂತ ನೈಸರ್ಗಿಕ ಆಹಾರಗಳನ್ನು ಸೇವಿಸಬೇಕು ಎಂದು ಡಾ.ಮಂಜುನಾಥ್​ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts