More

    ಕರೊನಾ ಸೋಂಕಿತರ ದೇಹದಲ್ಲೇ ಉತ್ಪತ್ತಿಯಾಗುತ್ತೆ ಪ್ರತಿರೋಧಕ ಶಕ್ತಿ, ಮತ್ತೊಮ್ಮೆ ಅಂಟಲ್ಲ ವೈರಸ್​

    ನವದೆಹಲಿ: ಸಣ್ಣದಾಗಿ ಕರೊನಾ ಸೋಂಕಿಗೆ ಒಳಗಾದ ವ್ಯಕ್ತಿಗಳ ದೇಹದಲ್ಲಿಯೇ ವೈರಸ್​ಅನ್ನು ಎದುರಿಸುವ ಶಕ್ತಿ ಉತ್ಪತ್ತಿಯಾಗಲಿದೆ. ಅಂಥವರಿಗೆ ಮತ್ತೊಮ್ಮೆ ಕೋವಿಡ್​19 ಕಾಣಿಸಿಕೊಳ್ಳುವುದಿಲ್ಲ…!

    ಫ್ರಾನ್ಸ್​ನಲ್ಲಿ ಕರೊನಾ ವಿರುದ್ಧ ಮುಂಚೂಣಿ ಪಡೆಯಲ್ಲಿದ್ದು ಹೋರಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಕಂಡುಬಂದಿದೆ.

    ಲಘುವಾಗಿ ಕರೊನಾ ಸೋಂಕಿಗೆ ಒಳಗಾದ ವೈದ್ಯರು ಸೇರಿ ಆಸ್ಪತ್ರೆ ಸಿಬ್ಬಂದಿಯ ದೇಹದಲ್ಲಿ ವೈರಸ್​ ನಿಗ್ರಹಿಸುವ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈಶಾನ್ಯ ಫ್ರಾನ್ಸ್​ನ ಸ್ಟ್ರಾಸ್​ಬರ್ಗ್​ನಲ್ಲಿರುವ ಪಾಶ್ಚರ್​ ಸಂಸ್ಥೆ ಹಾಗೂ ವಿಶ್ವವಿದ್ಯಾಲಯ ಆಸ್ಪತ್ರೆ ಜಂಟಿಯಾಗಿ ನಡೆಸಿದ ಪ್ರಯೋಗದಲ್ಲಿ ಈ ಫಲಿತಾಂಶ ಗೋಚರವಾಗಿದೆ.

    ಇದನ್ನೂ ಓದಿ; ‘ನೋ ಸೀಟ್​’ ಇರುತ್ತಿದ್ದ ಜಾಗದಲ್ಲಿ ಬಂದಿವೆ ‘ ಫಾರ್​ ಸೇಲ್​ ‘ ಬೋರ್ಡ್​ಗಳು

    ಪರೀಕ್ಷೆಗೊಳಗಾದ ಎಲ್ಲ 160 ಜನರಲ್ಲೂ ರೋಗ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಅದರಲ್ಲೂ ಒಬ್ಬರಿಗೆ ಸೋಂಕು ಕಾಣಿಸಿಕೊಂಡ ಕೇವಲ 15 ದಿನಗಳಲ್ಲಿ ವೈರಸ್​ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿವೆ. medrxiv ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

    ಕರೊನಾ ವೈರಸ್​ನ ಲಘು ಸೋಂಕಿಗೆ ಒಳಗಾದ ಉತ್ತರ ಫ್ರಾನ್ಸ್​ ಆಸ್ಪತ್ರೆ ಸಿಬ್ಬಂದಿಯ ರಕ್ತ ಮಾದರಿಯ ಪರೀಕ್ಷೆಯ ಫಲಿತಾಂಶಗಳು ಎಂದು ಸಂಶೋಧನಾ ವರದಿಗೆ ಶೀರ್ಷಿಕೆ ನೀಡಲಾಗಿದೆ. ಕರೊನಾ ಸೋಂಕಿಗೆ ಒಳಗಾದ ಪರೀಕ್ಷಾರ್ಥಿಗಳ ಪೈಕಿ ಶೇ.98 ಜನರಲ್ಲಿ 28- 41 ದಿನಗಳ ಒಳಗಾಗಿ ರೋಗ ನಿರೋಧಕ ಶಕ್ತಿಯ ಕಣಗಳು ಕಂಡುಬಂದಿವೆ. ರಕ್ತದ ಮಾದರಿಯನ್ನು ಆಧರಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

    ಇದನ್ನೂ ಓದಿ; ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ 

    ಕಾಲ ಕಳೆದಂತೆ ದೇಹದಲ್ಲಿ ವೈರಸ್​ಅನ್ನು ನಿಗ್ರಹಿಸುವ ಕಣಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಈ ಸಂಶೋಧನೆಯಿಂದಾಗಿ ಕರೊನಾ ವೈರಸ್​ಅನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯುವುದು ಸಾಧ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಪ್ರಯೋಗಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ರಷ್ಯಾದಲ್ಲಿ ಇನ್ನಿಲ್ಲ ಕೋವಿಡ್​ ಭೀತಿ, ವಿಜಯೋತ್ಸವಕ್ಕೆ ಆದೇಶಿಸಿದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts