More

  ಬಲಿಷ್ಠವಾಗಿದೆ ಭಾರತದ ನ್ಯಾಯಾಂಗ ವ್ಯವಸ್ಥೆ

  ಯಲ್ಲಾಪುರ: ಭಾರತೀಯ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು, ಬೇರೆ ಬೇರೆ ಹಂತಗಳಲ್ಲಿ ನ್ಯಾಯ ವಿತರಿಸುವ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತ ಬಂದಿದೆ ಎಂದು ಹಿರಿಯ ವಕೀಲ ಜಿ.ಎಸ್. ಭಟ್ಟ ಹಳವಳ್ಳಿ ಹೇಳಿದರು.

  ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ಭಾರತದ ನ್ಯಾಯಾಂಗ ವ್ಯವಸ್ಥೆ: ಒಂದು ಅವಲೋಕನ’ ಕುರಿತು ಅವರು ಮಾತನಾಡಿದರು.

  ಬ್ರಿಟೀಷ್ ಆಳ್ವಿಕೆಯ ಕಾರಣಕ್ಕಾಗಿ ಅವರ ಕಾನೂನಿನ ವ್ಯವಸ್ಥೆಯ ಪ್ರಭಾವ ನಮ್ಮ ಕಾನೂನಿನ ಮೇಲೆ ಸಹಜವಾಗಿ ಬೀರಿದೆ. ಅದನ್ನು ಸ್ಥಳೀಯ ಜನಜೀವನ, ಸಂಸ್ಕೃತಿಯ ಅನುಗುಣವಾಗಿ ಬದಲಿಸುವ ಪ್ರಯತ್ನ ಜಾರಿಯಲ್ಲಿದೆ. ಭಾರತದಲ್ಲಿ ಪತ್ರಿಕಾರಂಗ ಸಶಕ್ತವಾಗಿರುವ ಕಾರಣ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯ, ವ್ಯಾಪ್ತಿ ತಿಳಿದು ಕಾರ್ಯನಿರ್ವಹಿಸಿದರೆ ಯಾವ ಕಾನೂನಾತ್ಮಕ ಸಮಸ್ಯೆ ಉಂಟಾಗದು ಎಂದರು.

  ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ನ್ಯಾಯಾಲಯಗಳು ಕಾರ್ಯನಿರ್ವಹಿಸುವ ರೀತಿ, ನ್ಯಾಯಾಂಗ ವ್ಯವಸ್ಥೆಯ ಕುರಿತಾಗಿ ವಿಸ್ತೃತವಾಗಿ ಉಪನ್ಯಾಸ ನೀಡಿದರು. ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
  ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ, ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಇದ್ದರು. ಮೇಘನಾ ಆಚಾರಿ ಪ್ರಾರ್ಥಿಸಿದರು. ವಾಣಿ ಭಟ್ಟ ಸ್ವಾಗತಿಸಿದರು. ವಿದ್ಯಾ ಶೆಟ್ಟನಗೌಡ ನಿರ್ವಹಿಸಿದರು. ಪೂಜಾ ಹುನಕುಪ್ಪಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts