More

    ದುಡಿವ ಜನರು ಕೇಂದ್ರದಿಂದ ಸಂಕಷ್ಟಕ್ಕೆ

    ಸಿಂಧನೂರು: ದೇಶದಲ್ಲಿ ಕಳೆದ 40 ವರ್ಷಗಳಿಂದ ಕಂಡು ಕೇಳರಿಯದಂಥ ನಿರುದ್ಯೋಗ ಸಮಸ್ಯೆ ಉಂಟಾಗಿದ್ದು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಮತ್ತು ನಿರುದ್ಯೋಗಿ ಯುವಕರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಿಪಿಐಎಂಎಲ್ (ಆರ್‌ಐ) ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಹೇಳಿದರು.

    ನಗರದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ದೇಶದ ಸಾಲ 200 ಲಕ್ಷ ಕೋಟಿಗೆ ಹೇರಿಕೆಯಾಗಿದೆ. ಕಳೆದ 9 ವರ್ಷಗಳ ಅವಧಿಯಲ್ಲಿ ಉದ್ಯಮಿಗಳ 10 ಲಕ್ಷ ಕೋಟಿ ರೂ. ಸಾಲ ಮನ್ನ ಮಾಡಲಾಗಿದೆ. 14.56 ಲಕ್ಷ ಕೋಟಿ ರೂ. ಸಾಲವನ್ನು ವಸೂಲಾಗದ ಪಟ್ಟಿಗೆ ಸೇರಿಸಿ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ದೇಶದ ಶೇ.90 ದುಡಿಯುವ ಜನರನ್ನು ಅಪಾಯಕ್ಕೆ ತಳ್ಳುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ದೂರಿದರು.

    ಪ್ರಮುಖರಾದ ರೇಣುಕಾ ಬೂದಿವಾಳ ಕ್ಯಾಂಪ್, ಬಸನಗೌಡ ಮಾಂಪೂರ, ಯಮನೂರಪ್ಪ, ಛತ್ರಗೌಡ, ಮಹ್ಮದ್ ಸಾಬ್, ಪರಶುರಾಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts