More

    ರಾಯಲ್​ ಎನ್​ಫೀಲ್ಡ್​ಗೆ ಪ್ರತಿನಿತ್ಯ ವಿಶೇಷ ಪೂಜೆ! ಬುಲೆಟ್​ ದೇವಸ್ಥಾನದ ಹಿಂದಿದೆ ಭಯಾನಕ ಕತೆ

    ರಾಜಸ್ಥಾನ: ನೆಚ್ಚಿನ ಸೆಲೆಬ್ರಿಟಿಗಳ ದೇವಸ್ಥಾನವನ್ನು ನಿರ್ಮಿಸಿ, ಅವರ ಮೂರ್ತಿಗಳಿಗೆ ಪ್ರತಿನಿತ್ಯ ಅಭಿಮಾನಿಗಳು ಪೂಜೆ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಈಗಾಗಲೇ ಸೂಪರ್​ ಸ್ಟಾರ್​ ರಜಿನಿಕಾಂತ್​, ಪ್ರಧಾನಿ ನರೇಂದ್ರ ಮೋದಿ, ಖುಷ್ಬೂ ಹಾಗೂ ಅಮಿತಾಭ್​ ಬಚ್ಚನ್​ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಿ ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಆದರೆ, ಬುಲೆಟ್​ ಗಾಡಿಗೆ ಎಂದಾದರೂ ದೇವಸ್ಥಾನ ನಿರ್ಮಿಸಿರುವ ಬಗ್ಗೆ ಕೇಳಿದ್ದೀರಾ? ಅಚ್ಚರಿ ಎನಿಸಿದರೂ ಇದು ಸತ್ಯ.

    ರಾಜಸ್ಥಾನದ ಗ್ರಾಮವೊಂದರಲ್ಲಿ ರಾಯಲ್​ ಎನ್​​ಫೀಲ್ಡ್​ ಬುಲೆಟ್​ಗೆ ದೇವಸ್ಥಾನವನ್ನು ನಿರ್ಮಿಸಿ, ನಿತ್ಯವು ಪೂಜೆ ಮಾಡಲಾಗುತ್ತಿದೆ. ಇದರ ಹಿಂದಿರುವ ಆಸಕ್ತಿಕರ ಕತೆಯನ್ನು ನಿಮಗೀಗ ನಾವು ತಿಳಿಸುತ್ತೇವೆ. ​

    ಬುಲೆಟ್​ ಬಂಡಿ ದೇವಸ್ಥಾನವು ಓಂ ಬನ್ನ ದೇವಾಲಯ ಎಂದೇ ರಾಜಸ್ಥಾನದಲ್ಲಿ ಪ್ರಖ್ಯಾತಿ ಪಡೆದಿದೆ. ಜೋಧ್​ಪುರದಿಂದ ಗುಜರಾತಿನ ಅಹಮದಾಬಾದ್​ ನಗರಕ್ಕೆ ಸಂಪರ್ಕ ಕಲ್ಪಿಸುವ ಎನ್​ಎಚ್​ 62 ಹೆದ್ದಾರಿಯಲ್ಲಿ ಬರುವ ಪಾಲಿ ನಗರದಿಂದ ಸುಮಾರು 53 ಕಿ.ಮೀ ದೂರದಲ್ಲಿರುವ ಛೋಟಿಲಾ ಗ್ರಾಮದಲ್ಲಿ ಈ ದೇವಸ್ಥಾನ ಕಂಡುಬರುತ್ತದೆ. ಈ ದೇವಾಲಯದಲ್ಲಿರುವ ದೇವರು ಯಾರೆಂದರೆ, RNJ7773 ನೋಂದಣಿಯ 350 ಸಿಸಿ ರಾಯಲ್​ ಎನ್​ಫೀಲ್ಡ್​ ಬೈಕ್​.

    ಯಾರೇ ಹೊಸದಾಗಿ ಬೈಕ್​ ಖರೀದಿ ಮಾಡಲಿ, ಈ ದೇವಸ್ಥಾನಕ್ಕೆ ಬಂದು ಮೊದಲ ಪೂಜೆ ಸಲ್ಲಿಸುತ್ತಾರೆ. ರಸ್ತೆ ಮೇಲೆ ತಮ್ಮ ಗಂಡಂದಿರುವ ಬೈಕ್​ ಓಡಿಸುವಾಗ ಅವರ ಪ್ರಾಣಕ್ಕೆ ಏನು ಆಗದಿರಲಿ ಎಂದು ಭಕ್ತಿಯಿಂದ ಕೇಳಿಕೊಳ್ಳಲು ಸಾಕಷ್ಟು ಮಹಿಳೆಯರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನ ಆವರಣದಲ್ಲಿರುವ ಮರಕ್ಕೆ ಕೆಂಪು ದಾರವನ್ನು ಕಟ್ಟಿ, ಪೂಜೆ ಸಲ್ಲಿಸುತ್ತಾರೆ. ಅಷ್ಟಕ್ಕೂ ಈ ಬುಲೆಟ್‌ಗಾಗಿ ದೇವಾಲಯವನ್ನು ಏಕೆ ನಿರ್ಮಿಸಲಾಯಿತು? ಇದೇನು ಪೂಜೆ? ಹಾಗಾದರೆ ಇದರ ಹಿಂದಿರುವ ಕುತೂಹಲಕಾರಿ ಕತೆ ಏನು ಎಂದು ತಿಳಿದುಕೊಳ್ಳೋಣ.

    1988ರಲ್ಲಿ ರಸ್ತೆ ಅಪಘಾತದಲ್ಲಿ ಓಂ ಸಿಂಗ್​ ರಾಥೋಡ್​ ಎಂಬ ವ್ಯಕ್ತಿ ತೀರಿಕೊಂಡರು. ಅಪಘಾತ ನಡೆದ ಸ್ಥಳದಲ್ಲೇ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅಂದು ಅಪಘಾತದ ಸಮಯದಲ್ಲಿ ಪೊಲೀಸರು ಬೈಕ್​ ಅನ್ನು ವಶಕ್ಕೆ ಪಡೆದು ಠಾಣೆಗೆ ತೆಗದುಕೊಂಡು ಹೋದರು. ಆದರೆ, ನಂತರದಲ್ಲಿ ನಡೆದ ನಿಗೂಢ ಘಟನೆ ಎಲ್ಲರನ್ನೂ ಅಚ್ಚರಿಗೆ ದೂಡಿತು. ಆ ನಿಗೂಢ ಏನೆಂದರೆ, ಠಾಣೆಗೆ ತೆಗೆದುಕೊಂಡು ಹೋದ ಮಾರನೇ ದಿನವೇ ಬೈಕ್​ ಠಾಣೆಯಿಂದ ನಿಗೂಢವಾಗಿ ಕಣ್ಮರೆಯಾಗಿ, ಮತ್ತೆ ಅಪಘಾತದ ಸ್ಥಳದಲ್ಲಿ ಬೈಕ್​ ಪತ್ತೆಯಾಯಿತು. ಪೊಲೀಸರು ಅಲ್ಲಿಂದ ಬೈಕ್​ ಅನ್ನು ಮತ್ತೆ ಠಾಣೆಗೆ ತೆಗೆದುಕೊಂಡು ಹೋದರು ಬೈಕ್​ ಮತ್ತೆ ಅದೇ ಸ್ಥಳದಲ್ಲಿ ಇರುತ್ತಿತ್ತು. ಈ ವಿಚಾರ ಗೊತ್ತಾದ ಬಳಿಕ ಅಲ್ಲಿನ ಗ್ರಾಮಸ್ಥರು ಬೈಕ್​ಗೆ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಇದು ರಾಯಲ್​ ಎನ್​ಫ್ರೀಲ್ಡ್​ ದೇವಸ್ಥಾನ ನಿರ್ಮಾಣದ ಹಿಂದಿನ ಕತೆ. ಅಂದಿನಿಂದ ಆ ಸ್ಥಳದಲ್ಲಿ ಅಪಘಾತಗಳನ್ನು ಸಂಪೂರ್ಣವಾಗಿ ನಿಂತು ಹೋಗಿವೆ ಎಂದು ಹೇಳಲಾಗಿದೆ. ಅಂದು ಅಪಘಾತದಿಂದ ಮರಣ ಹೊಂದಿದ ಓಂ ಸಿಂಗ್​, ಆತ್ಮವಾಗಿ ಅಪಘಾತಗಳನ್ನು ತಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಹೀಗಾಗಿ ಅಂದಿನಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

    ಛೋಟಿಲಾ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಕೆಲವರು ಹೆಲ್ಮೆಟ್​ ಕೂಡ ದೇಣಿಗೆ ನೀಡುತ್ತಾರೆ. ಇದೀಗ ಈ ದೇವಸ್ಥಾನಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದರ ಹಿಂದಿನ ಕತೆ ಕೇಳಿ ಹುಬ್ಬೇರಿಸುತ್ತಿದ್ದಾರೆ. (ಏಜೆನ್ಸೀಸ್​)

    ರಜಿನಿಕಾಂತ್​ಗೆ ದೇವಸ್ಥಾನ ನಿರ್ಮಿಸಿ 250 ಕೆಜಿ ಪ್ರತಿಮೆ ಸ್ಥಾಪನೆ! ಅಭಿಮಾನಿಯಿಂದ ನಿತ್ಯ ಪೂಜೆ, ಹಾಲಿನ ಅಭಿಷೇಕ

    ನಿವೃತ್ತಿ ನಂತ್ರ ಧೋನಿ ಪ್ಲ್ಯಾನ್​ ಏನು? ಕುಟುಂಬಕ್ಕಿಂತ ಮಾಹಿಯ ಮೊದಲ ಆದ್ಯತೆ ಕೇಳಿ ಸಲಾಂ​ ಎಂದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts