ನಂದಿ ಸೋದರಿಯರಿಗೆ ಫಿದಾ ಆಗಿದ್ಯಾಕೆ ಈ ಮಂದಿ?

blank

ಬೆಂಗಳೂರು: ಉದಯೋನ್ಮುಖ ಪ್ರತಿಭೆಗಳಿಗೆ ಇದೀಗ ಸೋಷಿಯಲ್​ ಮೀಡಿಯಾ ಒಂದೊಳ್ಳೆಯ ಲಾಂಚ್​ ಪ್ಯಾಡ್​ನಂತಾಗುತ್ತಿವೆ. ಯಾವುದೋ ಮೂಲೆಯಲ್ಲಿರುವ ಪ್ರತಿಭೆಗಳು ರಾತ್ರಿ ಬೆಳಗಾಗುವುದರೊಳಗೆ ‘ವರ್ಲ್ಡ್​ ಫೇಮಸ್​’ ಆಗುತ್ತಿದ್ದಾರೆ. ಮಾತ್ರವಲ್ಲ ಒಂದೊಳ್ಳೆಯ ಸಂಗೀತ, ಕಲೆ, ಬರವಣಿಗೆ, ವಿಡಿಯೋ ತುಣುಕುಗಳು ಕೆಲವೇ ನಿಮಿಷಗಳಲ್ಲಿ ವಿಶ್ವಾದ್ಯಾಂತ ಹರಿದಾಡಿ ಜನಪ್ರಿಯವಾಗುತ್ತಿವೆ, ಜನಪ್ರಿಯತೆ ತಂದು ಕೊಡುತ್ತಿವೆ.

ಅಂಥ ಪ್ರತಿಭೆಗಳಲ್ಲಿ ಈ ಸೋದರಿ ಜೋಡಿಯೂ ಒಂದು. ಈಗಾಗಲೇ ಜಂಟಿಯಾಗಿ ಹಾಡುವ ಮೂಲಕ ಸಾಕಷ್ಟು ಸಲ ಸಂಗೀತಪ್ರಿಯರ ಮನ ಗೆದ್ದಿರುವ ಈ ಸೋದರಿಯರು, ಈಗ ಮತ್ತೊಮ್ಮೆ ಕೇಳುಗರಿಗೆ ಸಂಗೀತದ ಖುಷಿ ನೀಡಿದ್ದಾರೆ. ಇವರು ಮತ್ಯಾರೂ ಅಲ್ಲ, ಸಹೋದರಿಯರಾಗಿರುವ ಅಂತರ ನಂದಿ ಹಾಗೂ ಅಂಕಿತ ನಂದಿ.

https://www.instagram.com/p/CFgoxuwhEXy/?utm_source=ig_web_copy_link

ಅಂತರ ನಂದಿ ಸೋದರಿ ಅಂಕಿತ ಜತೆ ಹಾಡಿರುವ ಚಿತ್ರಗೀತೆಯೊಂದರ ತುಣುಕನ್ನು ತಮ್ಮ ಇನ್​ಸ್ಟಾಗ್ರಾಮ್​ ಪ್ರೊಫೈಲ್​ನಲ್ಲಿ ನಾಲ್ಕು ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. ‘ಬೇಫಿಕ್ರೆ’ ಸಿನಿಮಾದ ‘ನಶೆ ಸಿ ಛಡ್​ ಗಯಿ’ ಗೀತೆಯನ್ನು ಇವರು ಒಂಚೂರೂ ಆಚೀಚೆ ಆಗದಂತೆ ಇಬ್ಬರೂ ಜತೆಯಾಗಿ ಹಾಡಿದ್ದು ಈ ವಿಡಿಯೋ ತುಣುಕಿನ ವಿಶೇಷ. ಈ ಪರ್​ಫೆಕ್ಟ್​ ವಾಯ್ಸ್​ ಸಿಂಕ್​ನ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕೇ ದಿನಗಳಲ್ಲಿ ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವರು ಮೆಚ್ಚುಗೆಯ ಕಮೆಂಟ್​ ಮಾಡಿದ್ದಾರೆ. ‘ಆವೊತ್ತಿಂದಿನ ನಮಗೆ ತುಂಬ ಸಮಯವಿತ್ತು, ಸಿಕ್ಕಾಪಟ್ಟೆ ವಿಡಿಯೋ ಮಾಡಿದ್ವಿ, ಅದರಲ್ಲಿ ಇದೂ ಒಂದು..’ ಎಂಬ ಸಾಲಿನೊಂದಿಗೆ ಅಂತರ ನಂದಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…