More

    ಏಪ್ರಿಲ್​ 7ಕ್ಕೆ ಬಿಡುಗಡೆಯಾಗಲಿದೆ ಐದು ಕಥೆಗಳ ಆಂಥಾಲಜಿ ಚಿತ್ರ ‘ಪೆಂಟಗನ್’ …

    ಬೆಂಗಳೂರು: ರಿಷಭ್​ ಶೆಟ್ಟಿ ನಿರ್ಮಾಣದ ‘ಕಥಾ ಸಂಗಮ’ ಚಿತ್ರದ ನಂತರ ಕನ್ನಡದಲ್ಲಿ ಎರಡ್ಮೂರು ಆಂಥಾಲಜಿ (ಸಣ್ಣ ಚಿತ್ರಗಳ ಗುಚ್ಛ) ಚಿತ್ರಗಳು ಘೋಷಣೆಯಾದವು. ಈ ಪೈಕಿ ಗುರು ದೇಶಪಾಂಡೆ ನಿರ್ಮಾಣದ ‘ಪೆಂಟಗನ್​’ ಚಿತ್ರ ಸಹ ಒಂದು. ಈಗ ಈ ಚಿತ್ರವು ಏಪ್ರಿಲ್​ 07ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಫಿಲಂ ಚೇಂಬರ್​ನಲ್ಲಿ ‘ಉರಿಗೌಡ-ನಂಜೇಗೌಡ’ ಹೆಸರು ನೋಂದಾಯಿಸಿದ ಮುನಿರತ್ನ

    ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ‘ಪೆಂಟಗನ್’ ಚಿತ್ರದ ಹಾಡುಗಳು ಮತ್ತು ಟೀಸರ್​ ಈಗಾಗಲೇ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ. ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ.

    ಇತ್ತೀಚೆಗಷ್ಟೇ, ಈ ಚಿತ್ರದ ‘ಕಾಮನಬಿಲ್ಲು ಮೂಡುತಿದೆ ‘ ಎಂಬ ಹಾಡಿನ ಲಿರಿಕಲ್​ ವಿಡಿಯೋ ಇತ್ತೀಚೆಗೆ ಜಂಕಾರ್ ಮ್ಯೂಸಿಕ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂತೋಷ ವೆಂಕಿ ಮತ್ತು ಇಂಚರ ರಾವ್ ಅವರ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ. ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಡೆಯುವ ಮೋಸ, ಅಪರಾಧ ಜಗತ್ತು, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲಲಾಗಿದೆ.

    ‘ಪೆಂಟಗನ್​’ನ ಐದು ಚಿತ್ರಗಳಲ್ಲಿ ರವಿಶಂಕರ್​, ಪ್ರಕಾಶ್​ ಬೆಳವಾಡಿ, ಕಿಶೋರ್​, ಪ್ರಮೋದ್​ ಶೆಟ್ಟಿ, ಬಿರಾದಾರ್​ ಮುಂತಾದ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.

    ಇದನ್ನೂ ಓದಿ: ಸಲ್ಮಾನ್ ಖಾನ್ ಕಥೆ ಮುಗಿಸೋದೇ ನನ್ನ ಜೀವನದ ಗುರಿ: ಜೈಲಿನಿಂದಲೇ ಗುಡುಗಿದ ಗ್ಯಾಂಗ್​ಸ್ಟರ್​!

    ಈ ಚಿತ್ರಕ್ಕೆ ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ, ಕಿರಣ್​ ಹಂಪಾಪುರ ಅವರ ಛಾಯಾಗ್ರಹಣವಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತವಿದೆ. ಜಿ ಸಿನಿಮಾಸ್ ಸಂಸ್ಥೆಯಡಿ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದ್ದಾರೆ.

    ‘ಕಬ್ಜ’ ಚಿತ್ರದ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts