More

    ಪೆನ್​ಡ್ರೈವ್​ ಪ್ರಕರಣ ತನಿಖೆ ನ್ಯಾಯಾಧೀಶರಿಗೆ ಒಪ್ಪಿಸಿ

    ಕೋಲಾರ: ಪೆನ್​ಡ್ರೈವ್ ಪ್ರಕರಣದ ಸತ್ಯಾಸತ್ಯತೆ ಹೊರ ಬರಲು ರಾಜ್ಯ ಸರ್ಕಾರ ಹೈಕೋರ್ಟ್​ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಒತ್ತಾಯಿಸಿದರು.

    ನಗರದ ಸಿಬಿಐಟಿ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಚಿವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿ, ತನಿಖೆಯ ದಿಕ್ಕು ತಪ್ಪುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಕೈ ಸಾರ್ಕರದ ಒಂದು ವರ್ಷದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, 7-8 ಕೊಲೆಗಳಾಗಿವೆ. ಕೇಂದ್ರ ಸರ್ಕಾರವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಕಾಂಗ್ರೆಸ್​ನವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
    ಪೆನ್​ಡ್ರೈವ್​ ತನಿಖೆ ನಡೆಯುತ್ತಿರುವಾಗ ಮಾತನಾಡುವುದು ತಪ್ಪಾಗುತ್ತದೆ. ವರದಿ ನೀಡಿದ ನಂತರ ಅದನ್ನು ಪ್ರಶ್ನಿಸಲು ದೇಶದ ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಇದೆ. ಅದು ಬಿಟ್ಟು ತನಿಖೆಗೆ ಸಹಕಾರ ನೀಡದಿದ್ದರೆ ಮತ್ತಷ್ಟು ಸಂಶಯಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು.
    ಕುಟುಂಬದವರ ವಿರುದ್ಧವೇ ಪ್ರಕರಣವಿದ್ದರೂ ತಪ್ಪಿದ್ದರೆ ಶಿಕ್ಷೆಗೆ ಒಳಪಡಿಸಲಿ ಎನ್ನುವ ಮೂಲಕ ಸಮಾಜಕ್ಕೆ ದೇವೇಗೌಡರು ಮೇಲ್ಪಂಕ್ತಿ ಹಾಕಿದ್ದಾರೆ. ಪ್ರಜ್ವಲ್​ ಎಲ್ಲೇ ಇದ್ದರೂ ಕೂಡಲೇ ತನಿಖೆಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸಂಶಯಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಕುಟುಂಬಕ್ಕೂ ಮುಜುಗರ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
    ಉಚಿತ ಗ್ಯಾರಂಟಿಗಳ ಮೂಲಕ ಜನರನ್ನು ಮರಳು ಮಾಡಿ ಮತ ಪಡೆಯಲು ಕಾಂಗ್ರೆಸ್​ ಪ್ರಯತ್ನಿಸಿದೆ. ಸರ್ಕಾರ ವರ್ಷಾಚರಣೆಯಲ್ಲಿದೆ. ರಸ್ತೆಗಳಲ್ಲಿ ನಾಟಿ ಮಾಡುವಷ್ಟರ ಮಟ್ಟಿಗೆ ಅಭಿವೃದ್ಧಿ ಇದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲು ಮೆಡಿಸಿನ್​ ಇಲ್ಲ, ವೈದ್ಯರ ಹುದ್ದೆ ಖಾಲಿ ಇದ್ದರೂ ತುಂಬಲು ಸಾಧ್ಯವಾಗುತ್ತಿಲ್ಲ. ಇದು ಒಂದು ವರ್ಷದಿಂದ ನಡೆದಿರುವ ಅಭಿವೃದ್ಧಿ ಎಂದು ಲೇವಡಿ ಮಾಡಿದರು.

    • ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳಿಲ್ಲ
      ರಾಹುಲ್​ ಗಾಂಧಿಯದ್ದು ಒಂದು ಮತವಷ್ಟೇ. ದೇಶದಲ್ಲಿ 85 ಕೋಟಿ ಮತದಾರರಿದ್ದಾರೆ. ಹೀಗಿರುವಾಗ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಲು ಅವರ್ಯಾರು..?, ಅದು ಬಾಲಿಶ ಹೇಳಿಕೆಯಷ್ಟೇ. ಅವರು ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಿದ್ದಾರೆ ಎಂಬುದನ್ನು ಅರಿತು ಮಾತನಾಡಲಿ, ಮೋದಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ದೇಶದಲ್ಲಿ 5ನೇ ಹಂತದ ಮತದಾನ ಮುಗಿದಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಸ್ಪರ್ಧೆ ಮಾಡಿಲ್ಲ, ಹೀಗಿದ್ದಾಗ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಸದಾನಂದಗೌಡ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts