More

    ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಿ: ಶಾಸಕ ಎ.ಮಂಜುನಾಥ್ ಸೂಚನೆ

    ಬಿಡದಿ: ಪುರಸಭೆ ವ್ಯಾಪ್ತಿಯಲ್ಲಿ 107 ಕಿ.ಮೀ ಉದ್ದದ ಯುಜಿಡಿ ಕೊಳವೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಶಾಸಕ ಎ.ಮಂಜುನಾಥ್ ಸೂಚಿಸಿದರು.

    ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಎ.ಸಿ. ಸರಸ್ವತಿ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿ, ಪುರಸಭೆ ಕಚೇರಿಗೆ ಕಟ್ಟಡ ನಿರ್ವಿುಸಲು ಶಿಥಿಲಾವಸ್ಥೆಯಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವು ಮಾಡಿ ಡಿಪಿಆರ್ ಸಿದ್ಧಪಡಿಸುವ ಬಗ್ಗೆ ಸದಸ್ಯರು ಚಿಂತನೆ ನಡೆಸಿ, ಬಹುಮುಖ್ಯವಾಗಿ ಶೇಷಗಿರಿಹಳ್ಳಿ ಗ್ರಾಮದ ಸರ್ವೆ ನಂ 77ರಲ್ಲಿ ಬಿಡದಿ ಪುರಸಭೆ ಕಸ ವಿಲೇವಾರಿಗೆ ಮಂಜೂರಾಗಿರುವ ಭೂಮಿಯ ಮೌಲ್ಯ ಹೆಚ್ಚಾಗಿದ್ದು, ಮಾರ್ಗಸೂಚಿಯಂತೆ ನಿಗದಿ ಪಡಿಸಿರುವ ಹಣ ತುಂಬಲು ಪುರಸಭೆಗೆ ಕಷ್ಟವಾಗಲಿದೆ. ಹಾಗಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಗದಿಮಾಡಿರುವ ಹಣ ಕಡಿಮೆ ಮಾಡಿಸಿಕೊಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದರು.

    ಪುರಸಭೆ ವ್ಯಾಪ್ತಿಯಲ್ಲಿ ಹೋಟೆಲ್, ಚಿಕನ್, ಮಟನ್ ಸ್ಟಾಲ್ ಮತ್ತು ಖಾಸಗಿ ಆಸ್ಪತ್ರೆಗಳ ತ್ಯಾಜ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ಮತ್ತು ನೆಲ್ಲಿಗುಡ್ಡೆ ಕೆರೆ ಬಳಿ ಬಿಸಾಡುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುವಂತೆ ತಿಳಿಸಿದರು.

    ಒಳಚರಂಡಿ ವ್ಯವಸ್ಥೆ ಬಗ್ಗೆ ಸದಸ್ಯ ಸಿ. ಉಮೇಶ್ ಮಹೀಪತಿ ಮಾತನಾಡಿದರು.ಉಪಾಧ್ಯಕ್ಷ ಸಿ.ಲೋಕೇಶ್, ಸದಸ್ಯರಾದ ಮಹೀಪತಿ, ವೆಂಕಟೇಶಮ್ಮರಾಮಕೃಷ್ಣಯ್ಯ, ಪಲ್ಲವಿ, ದೇವರಾಜು, ರಮೇಶ್​ಕುಮಾರ್, ಹರೀಶ್, ವೈ.ರಮೇಶ್, ಶಿವಕುಮಾರ್, ಮುಖ್ಯಾಧಿಕಾರಿ ಎಸ್.ರಮೇಶ್, ಇಂಜಿನಿಯರ್​ಗಳಾದ ರಾಧ, ಶ್ವೇತಾ, ನವೀನ್ ಬಿಲ್​ಕಲೆಕ್ಟರ್ ನಾಗರಾಜು, ನಟರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts