More

    ಪೀರನವಾಡಿಯಲ್ಲಿ ಶಿವಾಜಿ ಚೌಕ್ ಅನಾವರಣ

    ಬೆಳಗಾವಿ: ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಗುರುವಾರ ಶಿವಾಜಿ ಮಹಾರಾಜ ಚೌಕ್(ಚಿನ್ನಪಟ್ಟಣ) ಎಂದು ನಾಮಕರಣ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶಿವಾಜಿ ಅಭಿಮಾನಿಗಳು ನಾಮಲಕ ಅನಾವರಣಗೊಳಿಸಿದರು. ಈ ನಾಮಲಕದಲ್ಲಿ ಮರಾಠಿ ಹಾಗೂ ಕನ್ನಡದಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಪೀರನವಾಡಿ (ಚಿನ್ನಪಟ್ಟಣ) ಎಂದು ಬರೆಯಲಾಗಿದೆ.

    ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಪರವಾಗಿ ೋಷಣೆ ಕೂಗಿದರು. ಸಂಧಾನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಯಣ್ಣನ ಮೂರ್ತಿ ಬಳಿ ನಾಡಧ್ವಜ ಹಾಗೂ ಶಿವಾಜಿ ಪ್ರತಿಮೆ ಬಳಿ ಭಗವಾ ಧ್ವಜ ಅಳವಡಿಸಲಾಯಿತು.

    ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಪರ-ವಿರೋಧ ಅಭಿಪ್ರಾಯ ಉಂಟಾಗಿ ಪ್ರತಿಭಟನೆಗಳೂ ನಡೆದಿದ್ದವು. ಬಳಿಕ ನಡೆದ ಸಂಧಾನ ಸಭೆಯಲ್ಲಿ ರಾಯನ್ಣ ಮೂರ್ತಿಯಿರುವ ಸ್ಥಳಕ್ಕೆ ಶಿವಾಜಿ ಸರ್ಕಲ್ ಎಂದು ಹೆಸರಿಡಲು ತೀರ್ಮಾನಿಸಲಾಗಿತ್ತು.

    ಹೊಸ ಫಲಕ ಅಳವಡಿಸಲು ಸಿಎಂಗೆ ಪತ್ರ: ಪೀರನವಾಡಿಯಲ್ಲಿ ಅಳವಡಿಸಿರುವ ನಾಮಲಕದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡದ ಶಿವಾಜಿ ಅಭಿಮಾನಿಗಳ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ನಾಮಲಕದ ಆರಂಭದಲ್ಲಿ ಮರಾಠಿಯಲ್ಲಿ ವೃತ್ತದ ಹೆಸರು ಬರೆಯಲಾಗಿದೆ. ಕೆಳಗೆ ಕನ್ನಡ ಭಾಷೆ ಬಳಸಲಾಗಿದೆ. ಇದು ಕನ್ನಡಕ್ಕೆ ಮಾಡಿರುವ ಅಪಮಾನ. ಹಾಗಾಗಿ, ಈ ನಾಮಲಕ ತೆರವುಗೊಳಿಸಿ, ಸರ್ಕಾರವೇ ಹೊಸದಾಗಿ ನಾಮಲಕ ಅಳವಡಿಸಿ ನಾಡಪ್ರೇಮ ಮೆರೆಯಬೇಕು. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದ್ದಾರೆ.

    ನಾಮಲಕ ಅಳವಡಿಕೆ ವಿಷಯದಲ್ಲಿ ಭಾಷಾ ಗೊಂದಲ ಉಂಟಾಗಿರುವ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಇಲ್ಲ. ಈ ಸಂಬಂಧ ಪರಿಶೀಲಿಸಿ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು.
    |ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts