ಬೆಂಗಳೂರು: ಬೆಂಗಳೂರನ್ನು ಸೈಕಲ್ ಸವಾರಿ ಸ್ನೇಹಿ ನಗರವನ್ನಾಗಿಸಲು ಹಲವು ಕ್ರಮಕೈಗೊಳ್ಳುತ್ತಿರುವ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಇದೀಗ ‘ಪೆಡಲ್ ಪೋರ್ಟ್’ ಕೇಂದ್ರ ಸ್ಥಾಪಿಸಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳಿಂದ ಸಂಚರಿಸುವ ಮೋಟಾರು ವಾಹನಗಳ ಪ್ರಮಾಣ ಕಡಿಮೆ ಮಾಡಲು ಡಲ್ಟ್ ಹಲವು ಕ್ರಮ ಕೈಗೊಳ್ಳುತ್ತಿದೆ. ಚರ್ಚ್ ಸ್ಟ್ರೀಟ್‌ನಲ್ಲಿ ರಜಾದಿನಗಳಲ್ಲಿ ವಾಹನಗಳ ಪ್ರವೇಶ ನಿಷೇಧ, ಸ್ಟ್ರೀಟ್ ಫಾರ್ ಪೀಪಲ್ ಹೀಗೆ ಹೊಸ ಬಗೆಯ ಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಜತೆಗೆ ಸೈಕಲ್ ಸವಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸೈಕಲ್ ಪಥ ನಿರ್ಮಾಣದಂತಹ ಕ್ರಮಕ್ಕೆ ಒತ್ತು ನೀಡಲಾಗುತ್ತಿದೆ.
ಪೆಡಲ್ ಪೋರ್ಟ್: ಇದೀಗ ಸೈಕಲ್ ಸವಾರರ ಅನುಕೂಲಕ್ಕಾಗಿ ಪೆಡಲ್ ಪೋರ್ಟ್ ಹೆಸರಿನ ಸಣ್ಣ ಪ್ರಮಾಣದ ಸೈಕಲ್ ರಿಪೇರಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಸೈಕಲ್ ಸವಾರರು ತೆರಳುವಾಗ ಸೈಕಲ್‌ನಲ್ಲಿ ಸಮಸ್ಯೆಯಾದರೆ ತಾವೇ ಅದನ್ನು ದುರಸ್ತಿ ಮಾಡಿಕೊಂಡು ಮುಂದೆ ಸಾಗಬಹುದಾಗಿದೆ. ಚರ್ಚ್‌ಸ್ಟ್ರೀಟ್‌ನಲ್ಲಿ ಇದನ್ನು ಸ್ಥಾಪಿಸಲಾಗಿದೆ. ಈ ಪೆಡಲ್ ಸ್ಟ್ರೀಟ್ ಬಳಕೆ ಮಾಡಿದವರಿಂದ ಅದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಡಲ್ಟ್ ಮುಂದಾಗಿದೆ. ಅದಕ್ಕೆ ಬಳಕೆದಾರರು ಉತ್ತಮ ಪ್ರತಿಕ್ರಿಯೆ ನೀಡಿದರೆ, ಇನ್ನಷ್ಟು ಸ್ಥಳಗಳಲ್ಲಿ ಅದನ್ನು ಸ್ಥಾಪಿಸಲು ಕೂಡ ಡಲ್ಟ್ ಚಿಂತನೆ ನಡೆಸಿದೆ.
ಬಾರ್ ಡಾನ್ಸರ್ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!
ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!