ಬಿಜೆಪಿ ಕಾರ್ಯಕರ್ತರಿಂದ ಗೋ ಪೂಜೆ

blank

ಚಿಕ್ಕಮಗಳೂರು: ಗೋಹತ್ಯಾ ನಿಷೇಧ ವಿಧೇಯಕಕ್ಕೆ ಅನುಮೋದನೆ ಪಡೆದಿರುವುದರಿಂದ ಗೋವುಗಳ ರಕ್ಷಣೆಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಹೇಳಿದರು.

ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಗೋ ಪೂಜೆ ನೆರವೇಸಿದ ಬಳಿಕ ಮಾತನಾಡಿದರು.

ಗೋಮಾತೆ ಪೂಜಿಸುವ ರೈತರು ಹೈನುಗಾರಿಕೆ ಮಾತ್ರವಲ್ಲದೆ ಕೃಷಿ ಸಂಬಂಧಿತ ಚಟುವಟಿಕೆಗೆ ಗೋವುಗಳನ್ನು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳಸಾಗಣೆ ನಡೆಯುತ್ತಿರುವುದನ್ನು ಕಂಡು ರೈತರು, ಗೋ ರಕ್ಷಕರು ಮತ್ತು ಹೈನುಗಾರಿಕೆಯಲ್ಲಿ ತೊಡಗಿದವರು ಆತಂಕಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಸಾಮರಸ್ಯಕ್ಕೂ ಧಕ್ಕೆ ಉಂಟಾಗುತ್ತಿತ್ತು. ಈ ಕಾಯ್ದೆ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.

ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ಸಂವಿಧಾನದ ಪರಿಚ್ಛೇದ 48ರಂತೆ ಗೋತಳಿ ಸಂವರ್ಧನೆ ಮತ್ತು ಸಂರಕ್ಷಣೆ ಸಂವಿಧಾನದ ಆಶಯವಾಗಿದ್ದು ರಾಜ್ಯ ಸರ್ಕಾರ ಗೋಹತ್ಯಾ ನಿಷೇಧದ ಕಠಿಣ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗುವ ಮೂಲಕ ಮಹಾತ್ಮ ಗಾಂಧೀ, ಡಾ. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯ ಗೌರವಿಸಿದೆ. ಗೋಹತ್ಯಾ ನಿಷೇಧ ಕುರಿತ ರೈತರ ಮನವಿ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಧ್ವನಿ ಮನಗಂಡ ಬಿಜೆಪಿ ಕೆಲವು ದಶಕಗಳಿಂದ ಗೋಹತ್ಯಾ ನಿಷೇಧದ ಆಂದೋಲನವನ್ನು ನಡೆಸುತ್ತ ಬಂದಿದ್ದು ಗೋಪಾಲಕರಲ್ಲಿ ಸಮಭ್ರಮ ಮನೆಡಮಾಡಿದೆ ಎಂದರು.

ಮುಖಂಡರಾದ ಸೀತಾರಾಂ ಭರಣ್ಯ, ಜಯರಾಮ್ ಎಸ್​ಡಿಎಂ ಮಂಜು, ಬಸವರಾಜು, ಧನಂಜಯ್, ಜಗದೀಶ್, ಪ್ರದೀಪ್, ರಾಜೇಶ್, ಸಚಿನ್, ಮಣಿ ಇತರರಿದ್ದರು.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…