More

    ಶಾಂತಿಯುತ ಮತದಾನಕ್ಕೆ ಎಲ್ಲರ ಸಹಕಾರ ಅಗತ್ಯ

    ಕೊಪ್ಪ: ಏ.26ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲರ ಸಹಕಾರ ಆಗತ್ಯ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಶಂಕರ್ ಮನವಿ ಮಾಡಿದರು.
    ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊಪ್ಪ ತಾಲೂಕಿನ 109, ಎನ್.ಆರ್ ಪುರ ತಾಲೂಕಿನ 76, ಶೃಂಗೇರಿ ತಾಲೂಕಿನ 49 ಹಾಗೂ ಖಾಂಡ್ಯ ಹೋಬಳಿಯ 22 ಮತಗಟ್ಟೆಗಳಲ್ಲಿ ಸಿದ್ದತೆ ನಡೆಸಲಾಗಿದೆ.
    85 ವರ್ಷ ದಾಟಿದ 1881ವೃದ್ಧರು, 1816 ವಿಕಲ ಚೇತನ ಮತದಾರರಿಗೆ ಮನೆ ಬಾಗಿಲಿನಲ್ಲಿ ಮತದಾನ ಮಾಡುವ ಬಗ್ಗೆ ಮತ್ತು 61 ಸರ್ವಿಸ್ ಪೋಟರ್ಸ್ ಮತ್ತು ಚುನಾವನಾಣೆ ಕಾರ್ಯನಿರತ ಅಧಿಕಾರಿಗಳಿಗೆ ಅಂಚೆ ಮತ್ತು ಮತ ಪತ್ರದ ಮೂಲಕ ಮತ ಚಲಾಯಿಸುವ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ಹಿನ್ನಲೆಯಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಸೂಕ್ತ ಬಂದೋಬಸ್ತ್‌ಗಾಗಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
    ಬಿಜೆಪಿ ಮುಖಂಡರಾದ ಅರುಣ್ ಶಿವಪುರ, ಕಾಂಗ್ರೆಸ್ ಮುಖಂಡರಾದ ಎಚ್.ಎಸ್ ಇನೇಶ್, ಅಬೂಬಕರ್ , ಕೊಪ್ಪ ತಹಸೀಲ್ದಾರ್ ಮಂಜುಳ ಬಿ ಹೆಗಡಾಳ, ಶೃಂಗೇರಿ ತಹಸೀಲ್ದಾರ್ ಗೌರಮ್ಮ, ಎನ್.ಆರ್.ಪುರ ತಹಸೀಲ್ದಾರ್ ರಮೆಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts