More

    ಶಾಂತಿಯಿಂದ ಜಾತ್ರೆ ನಡೆಸಲು ಸಹಕರಿಸಿ: ಡಿವೈಎಸ್ಪಿ ವೇಣುಗೋಪಾಲ್ ಮನವಿ


    ದೇವದುರ್ಗ: ಮಾನಸಗಲ್ ಗ್ರಾಮದಲ್ಲಿ ಮೇ 5ರಂದು ನಡೆಯಲಿರುವ ಶ್ರೀ ಲಕ್ಷ್ಮೀರಂಗನಾಥ ಜಾತ್ರೆಯನ್ನು ಶಾಂತತೆಯಿಂದ ನಡೆಸಲು ಭಕ್ತರು ಸಹಕಾರ ನೀಡಬೇಕು ಎಂದು ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ವೇಣುಗೋಪಲ್ ಹೇಳಿದರು.

    ಸುತ್ತಮುತ್ತಲಿನ ಗ್ರಾಮಸ್ಥರು ಕಾನೂನು ಪಾಲನೆ ಮಾಡಬೇಕು

    ತಾಲೂಕಿನ ಮಾನಸಗಲ್‌ನಲ್ಲಿ ಶ್ರೀ ಲಕ್ಷ್ಮೀರಂಗನಾಥ ಜಾತ್ರೆ ನಿಮಿತ್ತ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಸೋಮವಾರ ಮಾತನಾಡಿದರು. ಜಾತ್ರೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಭಕ್ತರ ಪಾತ್ರ ಪ್ರಾಮುಖವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಕಾನೂನು ಪಾಲನೆ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆದರೆೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವಘಡ ತಡೆಯಬೇಕು ಎಂದು ಸೂಚನೆ ನೀಡಿದರು.

    ಇದನ್ನೂ ಓದಿ: Food Poisoning | ಜಾತ್ರೆಯಲ್ಲಿ ಊಟ ಮಾಡಿ 80 ಮಂದಿ ಅಸ್ವಸ್ಥ!

    ಜಾತ್ರೆಗೆ ಪೊಲೀಸ್ ಸೂಕ್ತ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ

    ಪಿಐ ಕೆ.ಹೊಸಕೇರಪ್ಪ ಮಾತನಾಡಿ, ಶ್ರೀ ಲಕ್ಷ್ಮೀರಂಗನಾಥ ಜಾತ್ರೆಗೆ ಇರಬಗೇರಾ, ಕೋತಿಗುಡ್ಡ, ಹೇಮನೂರು ಸೇರಿ ಸುತ್ತಲಿನ ಹತ್ತಾರು ಹಳ್ಳಿಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೆ ನಂತರ ದನದ ಜಾತ್ರೆ ಕೂಡ ನಡೆಯಲಿದೆ. ಎರಡೂ ಜಾತ್ರೆಗೆ ಪೊಲೀಸ್ ಸೂಕ್ತ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

    ದೇವಸ್ಥಾನದ ಅರ್ಚಕರಾದ ಗಂಗಪ್ಪಯ್ಯ ಪೂಜಾರಿ, ರಾಜ ಚಂದ್ರಹಾಸ್ ನಾಯಕ ದೊರೆ ಹಾಗೂ ಮಾನಸಗಲ್, ಇರಬಗೇರಾ, ಕೋತಿಗುಡ್ಡ ಗ್ರಾಮದ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts