More

    ಧೋನಿಯನ್ನು ಹೊಗಳಿದ್ದಕ್ಕೆ ಸಕ್ಲೇನ್ ಮುಷ್ತಾಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಟ್ಟಾಗಿದ್ದೇಕೆ?

    ಕರಾಚಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹೊಗಳಿ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಛೀಮಾರಿ ಹಾಕಿದೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಭಾರತೀಯ ಕ್ರಿಕೆಟಿಗನನ್ನು ಸಕ್ಲೇನ್ ಪ್ರಶಂಸಿಸಿರುವುದು ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದೆ.

    ಪಿಸಿಬಿಯ ಹೈ ಪರ್ಫಾಮೆನ್ಸ್ ಸೆಂಟರ್‌ನ ಮುಖ್ಯಸ್ಥರೂ ಆಗಿರುವ ಸಕ್ಲೇನ್ ಮುಷ್ತಾಕ್, ಮಂಡಳಿಯ ಉದ್ಯೋಗಿ ಆಗಿರುವುದರಿಂದ ಈ ರೀತಿಯ ಪೋಸ್ಟ್‌ಗಳನ್ನು ಯುಟ್ಯೂಬ್‌ನಲ್ಲಿ ಪ್ರಕಟಿಸುವಂತಿಲ್ಲ ಎಂದು ಹೇಳಲಾಗಿದೆ. ‘ಧೋನಿಯನ್ನು ಹೊಗಳಿದ ಬಗ್ಗೆ ಪಿಸಿಬಿ ಅಸಮಾಧಾನಗೊಂಡಿದೆ. ಅಲ್ಲದೆ, ಧೋನಿಗೆ ವಿದಾಯ ಪಂದ್ಯ ನೀಡದ ಬಗ್ಗೆ ಸಕ್ಲೇನ್ ಮುಷ್ತಾಕ್ ಅವರು ಬಿಸಿಸಿಐಯನ್ನು ದೂರಿದ್ದರು. ಇದು ಭಾರತೀಯ ಕ್ರಿಕೆಟ್‌ನಲ್ಲಿ ಹಸ್ತಕ್ಷೇಪ ನಡೆಸಿದಂತಾಗಿದೆ’ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

    ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿರುವ ಹಾಲಿ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ಅಥವಾ ಕ್ರಿಕೆಟಿಗರ ಬಗ್ಗೆ ಹೇಳಿಕೆಗಳನ್ನು ನೀಡದಂತೆ ಪಿಸಿಬಿ, ರಾಷ್ಟ್ರೀಯ ತಂಡದ ಆಟಗಾರರಿಗೆ ಈ ಮುನ್ನ ಸೂಚಿಸಿತ್ತು. ಇದೀಗ ಸಕ್ಲೇನ್ ಹೇಳಿಕೆ ವಿವಾದದ ಬೆನ್ನಲ್ಲೇ ಪಿಸಿಬಿ, ತನ್ನ ಹೈ ಪಫಾಮೆನ್ಸ್ ಕೇಂದ್ರದ ಎಲ್ಲ ಕೋಚ್‌ಗಳಿಗೆ ಯುಟ್ಯೂಬ್ ಚಾನಲ್‌ಗಳಲ್ಲಿ ಕೆಲಸ ನಿರ್ವಹಿಸದಂತೆ ಸೂಚಿಸಿದೆ.

    ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪೂರೈಸಿದ ವಿಶ್ವದ ಮೊದಲ ವೇಗಿ ಜೇಮ್ಸ್​ ಆಂಡರ್‌ಸನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts