More

    ಮತ್ತೆ ಲೋವರ್​ ಸರ್ಕ್ಯೂಟ್​ ತಲುಪಿದ ಪೇಟಿಎಂ ಷೇರು: ಎರಡು ದಿನ ಏರಿಕೆ ಕಂಡಿದ್ದ ಸ್ಟಾಕ್​ ಬೆಲೆ 10% ಕುಸಿತ

    ನವದೆಹಲಿ: ಪೇಟಿಎಂ ಬ್ರಾಂಡ್‌ನ ಮಾಲೀಕತ್ವ ಹೊಂದಿರುವ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳ ಬೆಲೆ ಗುರುವಾರ 10 ಪ್ರತಿಶತದಷ್ಟು ಕುಸಿದು ಲೋವರ್ ಸರ್ಕ್ಯೂಟ್ ಮಿತಿಯನ್ನು ತಲುಪಿತು. ಅಂದರೆ, ಈ ಷೇರಿನ ಬೆಲೆ ವಿಧಿಸಲಾದ ಗರಿಷ್ಠ ಕುಸಿತದ ಮಿತಿಯನ್ನು ತಲುಪಿತು.

    ಗುರುವಾರ ದೃಢವಾದ ಆರಂಭದ ಹೊರತಾಗಿಯೂ ಬಿಎಸ್ಇಯಲ್ಲಿ ಈ ಷೇರು ಶೇಕಡಾ 10ರಷ್ಟು ಕುಸಿದು 447.10 ರೂಪಾಯಿಗೆ ತಲುಪಿತು. ಎನ್​ಎಸ್​ಇಯಲ್ಲಿ ಈ ಷೇರು ಕುಸಿತ ಕಂಡು 446.65 ರೂ.ಗೆ ಮುಟ್ಟಿತು.
    ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯವು 3,153.18 ಕೋಟಿ ರೂಪಾಯಿಗಳಿಂದ 28,394.44 ಕೋಟಿ ರೂಪಾಯಿಗಳಿಗೆ ಕುಸಿದಿದೆ.

    ವಹಿವಾಟಿನ ಪರಿಮಾಣದ ಪ್ರಕಾರ, ಈ ಕಂಪನಿಯ 22.79 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ ಮತ್ತು 2.12 ಕೋಟಿ ಷೇರುಗಳು ಎನ್‌ಎಸ್‌ಇಯಲ್ಲಿ ಗುರುವಾರ ವಹಿವಾಟು ನಡೆಸಿವೆ.

    ಹಿಂದಿನ ಎರಡು ದಿನಗಳವಾದ ಮಂಗಳವಾರ ಮತ್ತು ಬುಧವಾರ ಈ ಷೇರುಗಳ ಬೆಲೆಯಲ್ಲಿ ಚೇತರಿಕೆ ಕಂಡುಬಂದಿತ್ತು. ಈ ಷೇರುಗಳ ಬೆಲೆ ಬುಧವಾರ 10 ಪ್ರತಿಶತದಷ್ಟು ಏರಿತ್ತು. ಮಂಗಳವಾರ ಕೂಡ 3 ಪ್ರತಿಶತದಷ್ಟು ಹೆಚ್ಚಾಗಿತ್ತು. ಆದರೆ, ಅದಕ್ಕೂ ಮೊದಲಿನ 3 ದಿನಗಳ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿತ್ತು.

    ಫೆಬ್ರವರಿ 1 ರಿಂದ5 ರ ನಡುವೆ (ಮೂರು ದಿನಗಳ ವಹಿವಾಟು) ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 42 ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು.

    ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ನಿರ್ಬಂಧದ ಹಿನ್ನೆಲೆಯಲ್ಲಿ ಈ ಕುಸಿತ ಉಂಟಾಗಿತ್ತು. ಜನವರಿ 31 ರಂದು, ಆರ್‌ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮೇಲೆ ಯಾವುದೇ ಹೆಚ್ಚಿನ ಠೇವಣಿಗಳನ್ನು ತೆಗೆದುಕೊಳ್ಳದಂತೆ, ಕ್ರೆಡಿಟ್ ವಹಿವಾಟುಗಳನ್ನು ನಡೆಸದಂತೆ, ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು ಮತ್ತು ಟಾಪ್-ಅಪ್‌ಗಳನ್ನು ಕೈಗೊಳ್ಳುವುದನ್ನು ನಿರ್ಬಂಧಿಸಿ ಆರ್​ಬಿಐ ಆದೇಶಿಸಿತ್ತು.

    Paytm ನಲ್ಲಿ “ಅನುಸರಣೆಯ ಕೊರತೆ” ಯಿಂದ Paytm ಮೇಲಿನ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಗುರುವಾರ ಹೇಳಿದ್ದಾರೆ.

    ಅನಿಲ್ ಅಂಬಾನಿ ಷೇರಿಗೆ ಮತ್ತೆ ಬೇಡಿಕೆ: 1.13 ತಲುಪಿದ್ದ ಷೇರು ಈಗ 28.44 ರೂಪಾಯಿಗೆ ಏರಿಕೆ: 99 % ಕುಸಿದಿದ್ದ ಸ್ಟಾಕ್​ ಬೆಲೆಯಲ್ಲಿ 25000% ಹೆಚ್ಚಳ

    ಗ್ರೇ ಮಾರ್ಕೆಟ್​ನಲ್ಲಿ 100 ರೂ. ಷೇರಿಗೆ 300 ರೂ.: ಐಪಿಒಗೆ ಮೊದಲ ದಿನವೇ 20 ಪಟ್ಟು ಬೇಡಿಕೆ; ನೀವು ಹೂಡಿಕೆ ಮಾಡಿದರೆ ದೊಡ್ಡ ಲಾಭ

    ನಷ್ಟದಲ್ಲಿದ್ದ ಕಂಪನಿಯ ಲಾಭ ಈಗ 283% ಹೆಚ್ಚಳ: ಝೊಮ್ಯಾಟೊ ಷೇರುಗಳಿಗೆ ಬೇಡಿಕೆ, ಬೆಲೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts