More

    ‘ಪುಷ್ಪ’ ಚಿತ್ರದ ಐಟಂ ಡಾನ್ಸ್ ಬಗ್ಗೆ ಸತ್ಯ ಬಾಯ್ಬಿಟ್ಟ ಪಾಯಲ್​ ರಜಪೂತ್

    ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಅಲ್ಲು ಅರ್ಜುನ್​ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವುದು ಒಂದೆಡೆಯಾದರೆ, ಮೊದಲ ಬಾರಿ ಅರ್ಜುನ್​ ಸಿನಿಮಾ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಪುಷ್ಪ ಸಿನಿಮಾ ಇತ್ತೀಚೆಗಷ್ಟೇ ಐಟಂ ಹಾಡಿನ ಮೂಲಕ ಸದ್ದು ಮಾಡಿತ್ತು. ಉತ್ತರದ ಬೆಡಗಿ ಪಾಯಲ್​ ರಜಪೂತ್ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಆ ಸುದ್ದಿಗೆ ಬ್ರೇಕ್​ ಬಿದ್ದಿದೆ. ಸ್ವತಃ ಪಾಯಲ್​ ಈ ಸುದ್ದಿ ಸುಳ್ಳು ಎಂದಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್​ ಠಾಕ್ರೆ

    ಹೌದು, ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಕಳೆದ ಒಂದು ವಾರದಿಂದ ಚಿತ್ರದಲ್ಲಿನ ಐಟಂ ಹಾಡಿನ ವಿಚಾರವಾಗಿ ಸುದ್ದಿಯಲ್ಲಿತ್ತು. ದೇವಿಶ್ರೀ ಪ್ರಸಾದ್​ ಕಂಪೋಸ್​ ಮಾಡಿದ ಹಾಡಿಗೆ ನಟಿ ಪಾಯಲ್​ ರಜಪೂತ್​ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿತ್ತು. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸ ಮುಗಿಸಿಕೊಂಡಿರುವ ಪುಷ್ಪ ಚಿತ್ರತಂಡ, ಶೀಘ್ರದಲ್ಲಿ ಶೂಟಿಂಗ್​ಗೆ ಚಾಲನೆ ನೀಡಲಿದೆ. ಅದರಲ್ಲಿ ಮೊದಲಿಗೆ ಐಟಂ ಹಾಡಿನ ಶೂಟಿಂಗ್​ ಮಾಡಿಕೊಳ್ಳುವ ಲೆಕ್ಕಾಚಾರ ಹಾಕಿದೆ ಎಂಬ ಎನ್ನಲಾಗಿತ್ತು.
    ಇದೀಗ ಆ ಎಲ್ಲ ಊಹಾಪೋಹಗಳಿಗೆ ಸ್ವತಃ ಪಾಯಲ್​ ಪೂರ್ಣ ವಿರಾಮ ಇಟ್ಟಿದ್ದು, ‘ನಾನು ಪುಷ್ಪ ಸಿನಿಮಾ ಒಪ್ಪಿಕೊಂಡಿಲ್ಲ. ಕಮಲ್​ ಹಾಸನ್​ ಅವರ ಇಂಡಿಯನ್​ 2 ಚಿತ್ರದಲ್ಲಿಯೂ ನಟಿಸುತ್ತಿಲ್ಲ. ಇವೆಲ್ಲ ಸುಳ್ಳು ಸುದ್ದಿ. ಸದ್ಯಕ್ಕೆ ನಾನು ಯಾವ ಚಿತ್ರದ ಶೂಟಿಂಗ್​ನಲ್ಲಿಯೂ ಭಾಗವಹಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್​ ಫಿಕ್ಸ್..

    ದೆಹಲಿ ಮೂಲದ ಪಾಯಲ್ ರಜಪೂತ್, 2012ರಲ್ಲಿ ಸೀರಿಯಲ್​ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದ್ದರು. ಅದಾದ ಬಳಿಕ ಪಂಜಾಬಿಯ ಚನ್ನಾ ಮೇರೆಯಾ ಮೂಲಕ ಪಂಜಾಬಿಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್​ಎಕ್ಸ್ 100 ಚಿತ್ರದ ಮೂಲಕ ಟಾಲಿವುಡ್​ಗೆ ಆಗಮಿಸಿ ಸಖತ್​ ಹವಾ ಸೃಷ್ಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡು ಸದ್ಯ ಸೌಥ್​ನಲ್ಲೇ ಸೆಟಲ್ ಆಗುವ ಪ್ಲ್ಯಾನ್ ಹಾಕಿದ್ದಾರೆ. ಹೀಗಿರುವಾಗ ಪುಷ್ಪ ಚಿತ್ರದಲ್ಲಿನ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಪೇಂಟಿಂಗ್​ ಮಾರಾಟ ಮಾಡಿ ಕರೆಂಟ್​ ಬಿಲ್​ ಕಟ್ತಾರಂತೆ ವಾರ್ಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts