More

    ಖಾಸಗಿ, ಕೈಗಡ ಸಾಲಕ್ಕೂ ಪರಿಹಾರ ನೀಡಿ

    ಬ್ಯಾಡಗಿ: ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಬ್ಯಾಂಕ್ ಸಾಲವೊಂದೇ ಮಾನದಂಡವಲ್ಲ, ಖಾಸಗಿ, ಕೈಗಡ ಸಾಲ ಮಾಡಿಕೊಂಡ ಪ್ರಕರಣಗಳಿಗೂ ಪರಿಹಾರ ವಿತರಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ರೈತರು ಕೈಗಡ ಸಾಲ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಯಾವುದೇ ಬೋಜಾ ಅಳವಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಬೆಳೆ ನಷ್ಟ, ವಿಪರೀತ ಸಾಲ ಇತ್ಯಾದಿಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಕುಟುಂಬಕ್ಕೆ ನ್ಯಾಯ ಒದಗಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.

    ಕೃಷಿ ಅಧಿಕಾರಿ ಕೆ. ವೀರಭದ್ರಪ್ಪ ಪ್ರತಿಕ್ರಿಯಿಸಿ, ಮಾರ್ಗಸೂಚಿಯಲ್ಲಿರುವ ನಿಯಮ ಪಾಲಿಸಬೇಕಿದ್ದು, ಸಭೆಯ ನಿರ್ಣಯದ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಶಿಡೇನೂರು, ಹಿರೇನಂದಿಹಳ್ಳಿ, ಅತ್ತಿಕಟ್ಟಿ, ತಿಮ್ಮಾಪುರ ರಸ್ತೆ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಂಗಲ್ ಕಟಾವು ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ಓಡಾಡುವ ಜನರಿಗೆ ಮುಳ್ಳು, ಗಿಡಗಂಟಿ ತಾಗುತ್ತಿವೆ. ಲೋಕೋಪಯೋಗಿ ಇಂಜಿನಿಯರ್ ಏನು ಮಾಡುತ್ತಿದ್ದೀರಿ ಎಂದು ಶಾಸಕರು ಹರಿಹಾಯ್ದರು. ಇಂಜಿನಿಯರ್ ಸುಧೀಂದ್ರ ದೊಡ್ಡಮನಿ, ನಾಳೆಯೇ ಗಿಡಗಂಟಿಗಳನ್ನು ತೆರವು ಮಾಡಲಾಗುವುದು ಎಂದರು.

    ಶ್ರೇಣಿಕರಾಜ ಯಳವಟ್ಟಿ ಮಾತನಾಡಿ, ತಹಸೀಲ್ದಾರ್ ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆಗಳಲ್ಲಿ ವಿವಿಧ ಯೋಜನೆ ಪ್ರಯೋಜನ ಪಡೆಯಲು ಅಧಿಕಾರಿಗಳು ಹಲವು ಕಾಗದಪತ್ರ ತರಲು ಹೇಳುತ್ತಾರೆ. ಆದರೆ, ಏಜೆಂಟರು ಎರಡು ದಿನಗಳಲ್ಲಿ ಸೌಲಭ್ಯ ಮಂಜೂರಾತಿ ಮಾಡಿಸುತ್ತಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಇಒ ಜಯಕುಮಾರ ಎ.ಟಿ. ಉತ್ತರಿಸಿ, ಇಲಾಖೆಗಳಲ್ಲಿ ಏಜೆಂಟರ ಕೆಲಸಗಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ದೂರು ನೀಡಿದಲ್ಲಿ ಅಂತಹ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ತಾಲೂಕಿನ ಮಲ್ಲೂರು, ಮಾಸಣಗಿ ಇತರ ಗ್ರಾಮಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿದೆ. ಕೂಡಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಅಬಕಾರಿ ನಿರೀಕ್ಷಕ ರಾಮು ಆರೇಣ್ಣನವರ ಮಾತನಾಡಿ, ಅಕ್ರಮ ಮದ್ಯ ಮಾರಾಟದ ಗ್ರಾಮಗಳಿಗೆ ಭೇಟಿ ನೀಡಿ, ಮಾಹಿತಿ ಪಡೆಯಲಾಗಿದೆ. ಅಕ್ರಮ ಮಾರಾಟಗಾರರ ಮೇಲೆ ದೂರು ದಾಖಲಿಸಿದ್ದೇವೆ ಎಂದರು.

    ಉಪಾಧ್ಯಕ್ಷ ಶಾಂತವ್ವ ದೇಸಾಯಿ, ಜಿ.ಪಂ. ಸದಸ್ಯರಾದ ಅಬ್ದುಲ್​ವುುನಾಫ್ ಎಲಿಗಾರ, ಅನಸೂಯಾ ಕುಳೇನೂರು, ಸುಮಂಗಲಾ ಪಟ್ಟಣಶೆಟ್ಟಿ, ತಹಸೀಲ್ದಾರ್ ರವಿ ಕೊರವರ, ಕೆಡಿಪಿ ಸದಸ್ಯರಾದ ನಂದೀಶ ನೆಲ್ಲಿಕೊಪ್ಪದ, ಜಯಣ್ಣ ಚಿಲ್ಲೂರುಮಠ, ನಾಗೇಂದ್ರಪ್ಪ ಹರಿಜನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts