More

    ಪೋಷಕಾಂಶಯುಕ್ತ ಕೈ ತೋಟ ಬೆಳೆಸುವ ಕಡೆ ಗಮನ ನೀಡಿ

    ಶೃಂಗೇರಿ: ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು , ಪ್ರತಿಯೊಬ್ಬರೂ ಪೋಷಕಾಂಶಯುಕ್ತ ಕೈತೋಟ ಬೆಳೆಸುವ ಕಡೆ ಚಿತ್ತ ಹರಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತಜ್ಞ ಡಾ. ಸಂಜೀವ್ ಜಕಾತಿಮಠ್ ತಿಳಿಸಿದರು.
    ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಬುಕುಡಿಬೈಲ್‌ನಲ್ಲಿ ಗುರುವಾರ ತೋಟಗಾರಿಕೆ ಇಲಾಖೆ, ಜಿಪಂ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಪೋಷಕಾಂಶ ಕೈ ತೋಟ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಪ್ರಕೃತಿ ನಮಗೆ ಹೇರಳವಾದ ಸಂಪತ್ತುಗಳನ್ನು ನೀಡಿದ್ದು ಅಲ್ಲಿರುವ ಹಲವಾರು ಸಸ್ಯಗಳಲ್ಲಿ ಉಪಯುಕ್ತವಾದ ಪೌಷ್ಟಿಕತೆ ಹೆಚ್ಚಿಸುವಂತಹ ಸಸ್ಯಗಳು ವಿಫುಲವಾಗಿದೆ. ನೆಲ್ಲಿಕಾಯಿ, ಲಿಂಬೆ ಗಿಡ, ನುಗ್ಗೆ, ಬೇವು, ಕರಿಬೇವು, ಸೀಬೆ,ದಾಳಿಂಬೆ ಇತ್ಯಾದಿ ಗಿಡಗಳಲ್ಲಿ ದೇಹಕ್ಕೆ ಬೇಕಾಗುವ ವಿಟಮಿನ್ಸ್ ಹಾಗೂ ಕ್ಯಾಲ್ಸಲಿಯಂ ದೊರೆಯುತ್ತದೆ. ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ಇಂತಹ ಸಸ್ಯಗಳ ಬೆಳೆಸಿ ಇದರ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಿದರೆ ಅವರ ಶಾರೀರಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದರು.
    ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಕಾಂಪೌಂಡ್ ವ್ಯವಸ್ಥೆ ಇದ್ದು ಆರೋಗ್ಯಕ್ಕೆ ಉಪಯುಕ್ತವಾದ ಸಸಿಗಳನ್ನು ನೆಟ್ಟು ಅದರ ಸದುಪಯೋಗ ಪಡೆಯಬಹುದು. ಕಡಿಮೆ ವೆಚ್ಚದಲ್ಲಿ ಪೋಷಕಾಂಶ ಭರಿತ ಸಸ್ಯಗಳಿಂದ ಸಿಗುವ ತಾಜ ಹಣ್ಣುಗಳು ಮನುಷ್ಯನ ಆರೋಗ್ಯವನ್ನು ಸಮತೋಲನವಾಗಿಡಲು ಸಹಕಾರಿಯಾಗಿದೆ. ಜತೆಗೆ ಔಷಧಿಯ ಸಸ್ಯಗಳನ್ನು ಬೆಳೆಸಿದ್ದರೆ ಅದರಿಂದಲೂ ಅತ್ಯುತ್ತಮ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
    ನೆಮ್ಮಾರ್ ಗ್ರಾಪಂ ಸದಸ್ಯ ಜನಾರ್ಧನ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸದಸ್ಯ ಗಿರೀಶ್, ಒಕ್ಕೂಟದ ಕಾರ್ಯದರ್ಶಿ ಶೋಭಾ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಸಿಬ್ಬಂದಿ ಶುಭ, ಸುಮಾ, ರೇಣುಕಾ, ಪೂಜಾ, ಸೇವಾ ಪ್ರತಿನಿಧಿ ಶೋಭಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts