More

    ‘ಫ್ಯಾಮಿಲಿ’ಯಿಂದ ಸ್ಫೂರ್ತಿ ಪಡೆದ ‘ಕ್ಲೈಮ್ಯಾಕ್ಸ್​’; ನಮ್ದೂ ಒಂದ್​ ಇರಲಿ ಅಂದ್ರು ಪವನ್ ಒಡೆಯರ್​

    ಬೆಂಗಳೂರು: ಮೊನ್ನೆಯಷ್ಟೇ ಭಾರತೀಯ ಚಿತ್ರರಂಗದ ಘಟಾನುಘಟಿಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್​, ಶಿವರಾಜ್ ಕುಮಾರ್​, ಚಿರಂಜೀವಿ, ಮಮಮೂಟ್ಟಿ, ಮೋಹನ್​ಲಾಲ್, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್​, ಆಲಿಯಾ ಭಟ್​ ಸೇರಿ ಹಲವರು ತಾವಿದ್ದಲ್ಲಿಂದಲೇ ವಿಡಿಯೋ ಮಾಡಿ ಅದಕ್ಕೆ ಫ್ಯಾಮಿಲಿ ಎಂಬ ಶೀರ್ಷಿಕೆ ನೀಡಿ ಯೂಟ್ಯೂಬ್​ನಲ್ಲಿ ಹರಿಬಿಟ್ಟಿದ್ದರು. ಆ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಆ ಪ್ರಯತ್ನದ ಸ್ಫೂರ್ತಿಯಿಂದ ಕನ್ನಡದಲ್ಲೂ ಒಂದು ಕಿರು ಚಿತ್ರ ಮೂಡಿಬಂದಿದೆ. ಅದರ ಹೆಸರು ಹೊಸ ಕ್ಲೈಮ್ಯಾಕ್ಸ್ ಎಲ್ಲಿ.. ಹೌದು, ಈ ಕ್ಲೈಮ್ಯಾಕ್ಸ್ ನ ಸೃಷ್ಟಿಕರ್ತ ಪವನ್​ ಒಡೆಯರ್​. ಈ ಕಿರುಚಿತ್ರಕ್ಕೆ ಅವರು ಬಳಸಿಕೊಂಡಿದ್ದು ತಮ್ಮದೆ ರೇಮೋ ಚಿತ್ರತಂಡವನ್ನು ಎಂಬುದಿಲ್ಲಿ ವಿಶೇಷ.
    ರೇಮೋ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ಪ್ರಹಸನವೇ ಈ ಚಿತ್ರದ ಕಥೆ. ರಾಜೇಶ್​ ನಟರಂಗ ಅವರಿಂದ ಶುರುವಾಗುವ ಈ ಕಿರುಚಿತ್ರದಲ್ಲಿ ಪವನ್​ ಒಡೆಯರ್ ಯಥಾ ಪ್ರಕಾರ ನಿರ್ದೇಶರಾಗಿಯೇ ಕಾಣಿಸಿಕೊಂಡಿದ್ದಾರೆ. ​ಅವರ ಜತೆ ಅಚ್ಯುತ್ ಕುಮಾರ್​, ನಿರ್ಮಾಪಕ ಮನೋಹರ್​, ಚಿತ್ರದ ನಾಯಕ ಇಶಾನ್​, ಇಮ್ರಾನ್​ ಸರ್ದಾರಿಯಾ, ಅಪೇಕ್ಷಾ ಪುರೋಹಿತ್​, ಆಶಿಕಾ ರಂಗನಾಥ್​ ಸೇರಿ ಹಲವರು ಈ ಕ್ಲೈಮ್ಯಾಕ್ಸ್ ನಲ್ಲಿ ಬಂದು ಹೋಗುತ್ತಾರೆ. ಬ್ಲ್ಯಾಂಕ್ ಆ್ಯಂಡ್​ ವೈಟ್​ನಲ್ಲಿಯೇ ಕ್ಲೈಮ್ಯಾಕ್ಸ್ ಮೂಡಿಬಂದಿದೆ. ಪವನ್ ಒಡೆಯರ್​ ಯೂಟ್ಯೂಬ್ ಚಾನೆಲ್​ನಲ್ಲಿ ಈ ವಿಡಿಯೋ ಲಭ್ಯವಿದೆ.

    ಶಾರೂಖ್ ಖಾನ್ ಎಷ್ಟು ಬಾರಿ ಮದುವೆಯಾಗಿದ್ದಾರೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts