More

    ಕಿಚ್ಚನಿಗೆ ಕನ್ನಡದಲ್ಲಿಯೇ ಶುಭಾಶಯ ಕೋರಿದ ಪವನ್​ ಕಲ್ಯಾಣ್!

    ಬುಧವಾರ ಕಿಚ್ಚ ಸುದೀಪ್​ ಮತ್ತು ಟಾಲಿವುಡ್​ ಸ್ಟಾರ್ ನಟ ಪವನ್​ ಕಲ್ಯಾಣ್​ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಬದಿಗಿಟ್ಟು, ಸರಳ ಹುಟ್ಟುಹಬ್ಬ ಸೆಲೆಬ್ರೆಟ್​ ಮಾಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಜನ್ಮದಿನ ಆಚರಣೆ ಬೇಡ ಎಂದು ಮೊದಲೇ ಹೇಳಿಕೊಂಡಿದ್ದರಿಂದ, ಸೋಷಿಯಲ್​ ಮೀಡಿಯಾ ಮೂಲಕವೇ ಶುಭಾಶಯಗಳ ಸುರಿಮಳೆಯನ್ನೇ ಅಭಿಮಾನಿಗಳು ಈ ಇಬ್ಬರು ನಟರಿಗೆ ಸುರಿಸಿದ್ದರು.

    ಇದನ್ನೂ ಓದಿ: ಜಮೀರ್​ ಅಹ್ಮದ್​ಗೆ ಅಂಟಿಕೊಳ್ಳುತ್ತದಾ ಡ್ರಗ್ಸ್​ ನಂಟು?

    ಹೀಗೀರುವಾಗಲೇ ಪವನ್​ ಕಲ್ಯಾಣ್​ ಜನ್ಮದಿನಕ್ಕೆ ಕಿಚ್ಚ ಸುದೀಪ್​ ಸಹ ಶುಭಾಶಯ ಕೋರಿದ್ದರು. ಅದರಕ್ಕೆ ಪ್ರತಿಯಾಗಿ ಪ್ರೀತಿಯ ಕಿಚ್ಚನಿಗೆ ಕನ್ನಡದಲ್ಲಿಯೇ ಶುಭಾಶಯ ಹೇಳಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ‘ಜನ್ಮ ದಿನದ ಶುಭಾಶಯಗಳು ಪವನ್ ಕಲ್ಯಾಣ್​ ಸರ್​. ಇನ್ನೂ ಎತ್ತರಕ್ಕೆ ಬೆಳೆಯಿರಿ. ಆರೋಗ್ಯ ಮತ್ತು ಯಶಸ್ಸು ನಿಮ್ಮದಾಗಲಿ’ ಎಂದು ಪವನ್​ಕಲ್ಯಾಣ್​ಗೆ ಸುದೀಪ್​ ಟ್ವಿಟ್​ ಮೂಲಕ ಶುಭಾಶಯ ತಲುಪಿಸಿದ್ದರು. ಅದಕ್ಕೆ ಪ್ರತಿಯಾಗಿ, ‘ಪ್ರಿಯ ಕಿಚ್ಚ ಸುದೀಪ್​ ಜೀ. ನಿಮ್ಮ ಬೆಚ್ಚಗಿನ ಹುಟ್ಟುಹಬ್ಬದ ಶುಭಾಶಯಗಳಿಗಾಗಿ ತುಂಬಾ ಧನ್ಯವಾದಗಳು. ‘ಪೈಲ್ವಾನ್’ ನಲ್ಲಿ ನಿಮ್ಮ ಅಭಿನಯವನ್ನು ನಾನು ನಿಜವಾಗಿಯೂ ಆನಂದಿಸಿದೆ. ನಿಮಗೆ ಜನ್ಮದಿನದ ಶುಭಾಶಯಗಳು’ ಎಂದಿದ್ದಾರೆ.

    ಕರೊನಾ: ಎರಡು ತಿಂಗಳಲ್ಲಿ ಇಬ್ಬರು ಸಹೋದರರನ್ನು ಕಳೆದುಕೊಂಡ ನಟ ದಿಲೀಪ್‌ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts