More

    ಸಮುದಾಯ ಭವನದಿಂದ ಜನರಿಗೆ ಅನುಕೂಲ

    ಅಥಣಿ: ಇಲ್ಲಿನ ಕನಕ ನಗರದಲ್ಲಿ ಅಥಣಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಮುದಾಯ ಭವನದ ಭೂಮಿ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ಜರುಗಿತು.

    ಭೂಮಿಪೂಜೆ ನೆರವೇರಿಸಿ ಮಾತನಾಡಿದ ನೆಲೋಗಿ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ಎಲ್ಲರಿಗೂ ಅನುಕೂಲವಾಗಲಿದೆ. ಅದರಂತೆ ಕಕಮರಿಯ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕಾಗಿರುವುದು ಅವಶ್ಯಕ. ಈ ಕುರಿತು ಈ ಭಾಗದ ಸ್ವಾಮೀಜಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು.

    ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ವರ್ಗಕ್ಕೆ ಸೇರ್ಪಡೆಯಾಗಬೇಕು. ಮೀಸಲಾತಿ ಪಡೆಯಲು ಸಮಾಜದವರ ಸಹಕಾರ ಅಗತ್ಯ. ಆದಷ್ಟು ಬೇಗ ಸುಸಜ್ಜಿತ ಸಮುದಾಯ ಭವನ ನಿರ್ಮಾಣವಾದರೆ ಎಲ್ಲರಿಗೂ ಸಹಕಾರಿ ಆಗಲಿದೆ ಎಂದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಕಕಮರಿಯ ಅಭಿನವ ಗುರುಲಿಂಗ ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಸೇವೆಯಲ್ಲಿ ಪಂಚಮಸಾಲಿ ಸಮಾಜ ಸದಾ ಮುಂದಿದೆ ಎಂದರು. ಬಿ.ಎಲ್.ಪಾಟೀಲ ಮಾತನಾಡಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ರಮೇಶಗೌಡ ಪಾಟೀಲ, ಪ್ರಕಾಶ ಕುಮಠಳ್ಳಿ, ಶ್ರೀಶೈಲ ಸಂಕ, ಮಾಜಿ ಶಾಸಕ ಷಹಜಹಾನ ಡೊಂಗರಗಾಂವ, ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣವರ, ಶಿವಗೌಡ ಜಗದೇವ, ಬಿ.ಬಿಹೊನಗೌಡರ, ಪಿ.ಜಿ.ಬಿಸಗುಪ್ಪಿ, ಈರಣ್ಣ ಕುಮಠಳ್ಳಿ, ಚಿದಾನಂದ ಪಾಟೀಲ ಇದ್ದರು.

    ಸಾಧಕರರು, ವಿದ್ಯಾರ್ಥಿಗಳು, ಹಿರಿಯರನ್ನು ಸತ್ಕರಿಸಲಾಯಿತು. ಪಂಚಮಸಾಲಿ ಸಮಾಜದ ನೂತನ ಪದಾಧಿಕಾರಿಗಳಾಗಿ ಅವಿನಾಶ ನಾಯಿಕ, ಪರಶುರಾಮ ನಂದೇಶ್ವರ, ರೋಹಿಣಿ ವಾಂಗಿ, ಸುನೀಲಗೌಡ ಪಾಟೀಲ ನೇಮಕಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts