More

    ರಾಷ್ಟ್ರಪೇಮ ಬೆಳೆಸಿಕೊಳ್ಳಿ

    ಚನ್ನಮ್ಮ ಕಿತ್ತೂರ: ಪ್ರತಿಯೊಬ್ಬರೂ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ. ಶನಿವಾರ ಪಟ್ಟಣದ ಚನ್ನಮ್ಮಾಜಿ ವೃತ್ತ
    ದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಸಮಾರಂಭದ ಅಂಗವಾಗಿ ಕರೊನಾ ಸೇನಾನಿಗಳನ್ನು ಸನ್ಮಾನಿಸಿ, ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ತಹಸೀಲ್ದಾರ್ ಪ್ರವೀಣ ಜೈನ್, ಸುಭಾಷ ಸಂಪಗಾವಿ, ಪಿ.ಬಿ.ಮಠದ, ಶಿವಾನಂದ ಮಾಸ್ತಿಹೊಳಿ, ಸಂದೀಪ ದೇಶಪಾಂಡೆ, ಡಾ.ಬಸವರಾಜ ಪರವಣ್ಣನವರ, ವಿಶ್ವನಾಥ ಬಿಕ್ಕಣ್ಣವರ, ಬಸನಗೌಡ ಸಿದ್ರಾಮನಿ, ಪಕ್ಷದ ಕಾರ್ಯಕರ್ತರು ಇತರರು ಇದ್ದರು.

    ಮೂಡಲಗಿ ವರದಿ: ಕರೊನಾ ಕಾರಣ ಸ್ಥಳೀಯ ತಾಲೂಕಾಡಳಿತ ಮತ್ತು ಪುರಸಭೆ ವತಿಯಿಂದ ಸರಳ ರೀತಿಯಲ್ಲಿ ಶನಿವಾರ ಸ್ವಾತಂತ್ರೃ ದಿನ ಆಚರಿಸಲಾಯಿತು. ತಹಸೀಲ್ದಾರ್ ಕಚೇರಿ ಹಾಗೂ ಸಾರ್ವಜನಿಕ ಗಾಂಧಿ ಚೌಕದಲ್ಲಿ ತಹಸೀಲ್ದಾರ್ ದಿಲಶಾದ್ ಮಹಾತ ಪುರಸಭೆಯಲ್ಲಿ ಮುಖ್ಯಾಧಿಕಾರಿ ದೀಪಕ ಹರ್ದಿ ಧ್ವಜಾರೋಹಣ ನೆರವೇರಿಸಿದರು. ನಂತರ ಕರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು. ಬಿಇಒ ಅಜಿತ ಮನ್ನಿಕೇರಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಸೋನವಾಲಕರ, ಡಾ.ಭಾರತಿ ಕೋಣಿ, ದೀಪಕ ಹರ್ದಿ, ವೆಂಕಟೇಶ ಮುರನಾಳ, ಕೆ.ಟಿ.ಗಾಣಿಗೇರ ಮತ್ತಿತರರು ಇದ್ದರು.

    ಬೈಲಹೊಂಗಲ ವರದಿ: ಪ್ರತಿಯೊಬ್ಬರೂ ಸ್ವಾತಂತ್ರೃ ಹೋರಾಟಗಾರರ ಸೇವೆ, ತ್ಯಾಗ, ಬಲಿದಾನವನ್ನು ಸ್ಮರಿಸಬೇಕು ಎಂದು ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಿ.ಬಿ.ಮಲ್ಲೂರ ಹೇಳಿದ್ದಾರೆ. ಸಮೀಪದ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವ ವಿಜ್ಞಾನಿಗಳು ಹೊಸ ಅನ್ವೇಷಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಎಸ್.ಎಂ.ರಾಹುತನವರ, ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎನ್.ಕೊಳ್ಳಿ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಟಿ.ಕಾಂಬಳೆ ಸ್ವಾಗತಿಸಿದರು. ಎಂ.ಎನ್.ಹಾವೇರಿ ನಿರೂಪಿಸಿ, ವಂದಿಸಿದರು.

    ಅಂಕಲಗಿ ವರದಿ: ಸಂಸ್ಥೆಗಳ ಗಟ್ಟಿತನಕ್ಕೆ ಸಹೃದಯರ ಸಹಕಾರ ಅತೀ ಅವಶ್ಯವಾಗಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ ಹೇಳಿದ್ದಾರೆ. ಸ್ಥಳೀಯ ಕೆಜೆಎಸ್‌ಸಂಸ್ಥೆಯ ಅಂಗ ವಿದ್ಯಾ ಸಂಸ್ಥೆಗಳಿಂದ ಜರುಗಿದ ಸ್ವಾತಂತ್ರೃ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಎಸ್.ಎ.ಹುಕ್ಕೇರಿ, ಎಲ್.ಕೆ.ಪೂಜೇರಿ, ಬಸವರಾಜ ಪಟ್ಟಣಶೆಟ್ಟಿ, ಎಂ.ಎನ್.ಮಾವಿನಕಟ್ಟಿ ಇದ್ದರು.

    ದೊಡವಾಡ ವರದಿ: ಗ್ರಾಮದ ಶಾಲೆ-ಕಾಲೇಜು ಹಾಗೂ ಸಂಘ ಸಂಸ್ಥೆಗಳ ಆವರಣದಲ್ಲಿ ಸ್ವಾತಂತ್ರೃ ದಿನ ಆಚರಿಸಲಾಯಿತು. ಜಿಪಂ ಸದಸ್ಯ ಶಂಕರ ಮಾಡಲಗಿ, ಸುರೇಶಗೌಡ್ರ ಪಾಟೀಲ, ನಿಂಗಪ್ಪ ಚೌಡಣ್ಣವರ, ಸಕ್ಕುಬಾಯಿ ಕಾಳಿ, ಸಿ.ಸಿ.ಬೆಳವಡಿ, ಜಿ.ಐ.ಅಂಗಡಿ, ಸಂಗಯ್ಯ ದಾಭಿಮಠ, ಸುರೇಶ ಧಾರವಾಡ, ಗಂಗಪ್ಪ ಕಂಬಾರ, ಸಿದ್ದಪ್ಪ ಕರಿಗಾರ, ಮುಖಂಡರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts