More

    ಜುಲೈ 10ರಿಂದ 16ವರೆಗೆ ಪಟನಾ ಲಾಕ್​ಡೌನ್

    ಪಟನಾ: ಕೋವಿಡ್​-19 ಪ್ರಕರಣಗಳು ಸ್ಥಿರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ರಾಜಧಾನಿ ಪಟನಾವನ್ನು ಲಾಕ್​ಡೌನ್​ ಮಾಡಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಅದರಂತೆ ಜುಲೈ 10ರಿಂದ ಆರಂಭವಾಗಿ ಜುಲೈ 16ರವರೆಗೆ ಪಟನಾ ಲಾಕ್​ಡೌನ್​ ಆಗಲಿದೆ.

    ಈ ಬಗ್ಗೆ ಆದೇಶ ಬಿಡುಗಡೆ ಮಾಡಿರುವ ಅವರು, ಲಾಕ್​ಡೌನ್​ ಅವಧಿಯಲ್ಲಿ ಅಗತ್ಯವಸ್ತುಗಳ ಮಾರಾಟ ಅಂಗಡಿಗಳು ಬಿಟ್ಟು ಬೇರಾವುದೇ ಅಂಗಡಿಗಳು ತೆರೆದಿರುವುದಿಲ್ಲ. ಪ್ರಾರ್ಥನಾ ಮಂದಿರ, ದೇಗುಲಗಳು ಕೂಡ ಬಂದ್​ ಆಗಿರಲಿವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಶ್ವ ಹೂಡಿಕೆದಾರರ ಸೆಳೆಯಲಿದೆ ಬೆಂಗಳೂರಿನ ಚಿಂಗಾರಿ; ಸಂಗೀತ ಸಂಯೋಜಕರಿಗೂ ಆದಾಯ

    ಮಂಗಳವಾರ ಹೊಸದಾಗಿ 385 ಮಂದಿ ಕೋವಿಡ್​ ಪರೀಕ್ಷೆ ವರದಿ ಪಾಸಿಟಿವ್​ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,525 ತಲುಪಿದೆ. ಇದುವರೆಗೆ 97 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಟನಾವನ್ನು ಒಂದು ವಾರ ಲಾಕ್​ಡೌನ್​ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

    ಪಟನಾ ಜಿಲ್ಲೆಯಲ್ಲಿ ಇದುವರೆಗೆ 12 ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ದರ್ಭಾಂಗಾ (7), ಸಮಷ್ಟಿಪುರ (6), ಭಾಗಲ್ಪುರ, ಮುಜಾಫರಪುರ್​, ನಳಂದಾ, ಪೂರ್ವ ಚಂಪಾರಣ್​, ರೋಹಟಾಸ್​ ಮತ್ತು ಸರನ್​ನಲ್ಲಿ ತಲಾ ಐವರು ಮೃತಪಟ್ಟಿದ್ದಾರೆ.

    ವಿಶ್ವ ಹೂಡಿಕೆದಾರರ ಸೆಳೆಯಲಿದೆ ಬೆಂಗಳೂರಿನ ಚಿಂಗಾರಿ; ಸಂಗೀತ ಸಂಯೋಜಕರಿಗೂ ಆದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts