More

    ‘ಯಾರಾದರೂ ಸತ್ತರೆ ನಿಮಗೆ ಅವರ ಬೆಡ್​…ಅಲ್ಲಿಯವರೆಗೂ ನೆಲದ ಮೇಲೆ ಮಲಗಿ’

    ಹೈದರಾಬಾದ್: ಭಾರತದಲ್ಲಿ ಕರೊನಾ ವೈರಸ್​ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಮಧ್ಯೆ ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ.

    ಅದರಲ್ಲೂ ಹೈದರಾಬಾದ್​ನ ಅಫ್ಜಲ್​ಗಂಜ್​ನಲ್ಲಿರುವ ಒಸ್ಮಾನಿಯಾ ಜನರಲ್​ ಆಸ್ಪತ್ರೆಯಲ್ಲಿ ಪರಿಸ್ಥಿತಿ ತುಸು ಗಂಭೀರವಾಗಿಯೇ ಇದೆ. ಬೆಡ್​ಗಳ ಕೊರತೆಯೊಂದಿಗೆ, ರೋಗಿಗಳ ಬಗ್ಗೆ ತುಂಬ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
    ಬೆಡ್​ಗಳು ಇಲ್ಲ..ಆದರೆ ರೋಗಿಗಳಿಗೆ ಚಿಕಿತ್ಸೆ ನೀಡದೆ ವಾಪಸ್ ಕಳಿಸುವಂತಿಲ್ಲ. ಹೀಗಾಗಿ ಕರೊನಾ ರೋಗಿಗಳನ್ನು ನೆಲದ ಮೇಲೆ ಮಲಗುವಂತೆ ಹೇಳಲಾಗುತ್ತಿದೆ ಎಂದು ಅಲ್ಲಿನ ಹಲವು ಕರೊನಾ ರೋಗಿಗಳು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮ ಮೃತಪಟ್ಟಿದ್ದಕ್ಕೆ ವೈದ್ಯನ ಎದೆಗೆ ಇರಿದ ಮಗ…

    ಒಂದು ದಿನ ಒಟ್ಟು 30 ಕರೊನಾ ರೋಗಿಗಳು ಇಲ್ಲಿ ದಾಖಲಾಗಿದ್ದಾರೆ. ಆದರೆ ನಮಗೆ ಬೆಡ್​ ಇರಲಿಲ್ಲ. ಯಾರಾದರೂ ಸತ್ತರೆ ನಿಮ್ಮಲ್ಲೊಬ್ಬರಿಗೆ ಆ ಬೆಡ್​ ಸಿಗುತ್ತದೆ, ಅಲ್ಲಿಯವರೆಗೆ ನೆಲದ ಮೇಲೆ ಮಲಗಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು ಎಂದು ಅಲ್ಲಿನ ರೋಗಿಯೊಬ್ಬ ತನ್ನ ಸಂಬಂಧಿಯ ಬಳಿ ಹೇಳಿಕೊಂಡಿದ್ದು ಇದೀಗ ಸುದ್ದಿಯಾಗಿದೆ. ಬರೀ ಇದೊಂದೇ ಪ್ರಕರಣವಲ್ಲ. ಇನ್ನೂ ಹಲವರು ಇದೇ ರೀತಿ ದೂರು ನೀಡಿದ್ದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.

    ನಾವು ಎಲ್ಲ ರೋಗಿಗಳನ್ನೂ ಅಡ್ಮಿಟ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇರುವ ಸೌಲಭ್ಯ, ಸಿಬ್ಬಂದಿ ಸಾಕಾಗುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್​)

    ಇಲ್ಲಿದೆ ನೋಡಿ ಹಾಲು ಕೊಡುವ ಗಂಡು ಮೇಕೆ, ಕೆಚ್ಚಲೂ ಇದೆ !..ವೈದ್ಯರು ಹೇಳ್ತಿರೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts