More

    ಕೋವಿಡ್​ ಆಸ್ಪತ್ರೆಯಲ್ಲಿ ದುರಂತ ಅಂತ್ಯಕಂಡ ವೃದ್ಧೆ

    ಬೆಂಗಳೂರು: ಇತ್ತೀಚೆಗೆಷ್ಟೇ ಕರೊನಾ ಸೋಂಕಿತ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಸೋಂಕಿತ ವೃದ್ಧೆಯೊಬ್ಬರು ಇಂದು ಕೆ.ಸಿ.ಜನರಲ್​ ಆಸ್ಪತ್ರೆಯ ಟಾಯ್ಲೆಟ್​ನಲ್ಲಿ ನೇಣು ಬಿಗಿದುಕೊಂಡು ಸತ್ತಿದ್ದಾರೆ.

    ಕುಣಿಗಲ್​ ಮೂಲದ ರಾಜಗೋಪಾಲನಗರ ನಿವಾಸಿ ಶುಕ್ರವಾರ ಬೆಳಗಿನಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 60 ವರ್ಷ ವಯಸ್ಸಾಗಿತ್ತು. ಜೂ.18ರಂದು ಜ್ವರ, ನೆಗಡೆಯಿಂದ ಕೆ.ಸಿ. ಜನರಲ್​ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲ ದ್ರವ ಮಾದರಿ ಪಡೆದು ಕೋವಿಡ್​ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್​ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿತ್ತು. ವೃದ್ಧೆಯ ಸೊಸೆ ಮತ್ತು ಮೊಮ್ಮಗ ಸೇರಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡು ಇತ್ತೀಚೆಗೆ ಕೆ.ಸಿ.ಜನರಲ್​ ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿರಿ ಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!

    ವೃದ್ಧೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆರೋಗ್ಯ ಸಾಕಷ್ಟು ಸುಧಾರಿಸಿತ್ತು. ಈ ನಡುವೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೃದ್ಧೆಗೆ 4 ಬಾರಿ ಮಾನಸಿಕ ತಜ್ಞರಿಂದ ಕೌನ್ಸಲಿಂಗ್​ ಮಾಡಿಸಲಾಗಿತ್ತು. ಇಷ್ಟಾದರೂ ಈ ವೃದ್ಧೆ ನೇಣುಬಿಗಿದುಕೊಂಡು ಸತ್ತಿದ್ದಾರೆ.

    ಜೂ.22ರಂದು ರಾಜ್ಯ ಪೊಲೀಸ್​ ಮೀಸಲು ಪಡೆಯ ಮಂಡ್ಯ ಮೂಲದ 50 ವರ್ಷದ ಮುಖ್ಯಪೇದೆಯೊಬ್ಬರು ಆಸ್ಪತ್ರೆಗೆ ಬರುವ ಮಾರ್ಗದಲ್ಲಿ ಬಸ್​ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು.

    ಇನ್ನು ಬೀದರ್​, ಹುಬ್ಬಳ್ಳಿ, ಶಿವಮೊಗ್ಗ… ಇತರೆಡೆ ಕ್ವಾರಂಟೈನ್​ ಕೇಂದ್ರದಲ್ಲೇ ಹಲವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡಿದ್ದಾರೆ. ಈಗ ಕೋವಿಡ್​ ಸೋಂಕಿತರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಕಳವಳಕಾರಿ ವಿಷಯ.

    ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts