More

    ಪಾಠ ಬೋಧನೆಗೆ ಕೊಠಡಿ ಕೊರತೆ: ಕಮಾಲಪುರದ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳ ಅಳಲು

    ದಾಬಸ್‌ಪೇಟೆ: ಅಗಳಕುಪ್ಪೆ ಸರ್ಕಾರಿ ಶಾಲೆಯಲ್ಲಿ ಕಾಂಪೌಂಡ್ ಇಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದರೂ ಪಾಠ ಬೋಧನೆಗೆ ಕೊಠಡಿಗಳಿಲ್ಲ… ಹೀಗೆ ಸಾಕಷ್ಟು ಸಮಸ್ಯೆ ಬಗ್ಗೆ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯಲಾಯಿತು.

    ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಪಂಚಾಯಿತಿಯ ಕಮಾಲಪುರದಲ್ಲಿ ಗ್ರಾಪಂ ಹಾಗೂ ವಿಕಾಸ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯಿಂದ ಗುರುವಾರ ಏರ್ಪಡಿಸಿದ್ದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಗಮನ ಸೆಳೆದರು.

    ಹೋಬಳಿಯ ವಿವಿಧ ಶಾಲೆಗಳಲ್ಲಿ ಕಾಂಪೌಂಡ್, ಗೇಟ್ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವುದು, ಶಿಥಿಲಗೊಂಡ ಕೊಠಡಿ ದುರಸ್ತಿ ಬಗ್ಗೆ ಹಲವು ಶಾಲೆಯ ವಿದ್ಯಾರ್ಥಿಗಳು ಸಭೆ ಗಮನ ಸೆಳೆದರು.

    ಶಾಲೆಯಲ್ಲಿ 16 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ.ಆದರೆ ಪಾಠ ಬೋಧನೆಗೆ ಪ್ರತ್ಯೇಕ ಕೊಠಡಿಯ ಅವಶ್ಯಕತೆ ಇದೆ. ಈ ಬಗ್ಗೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಾಪುರ ಶಾಲೆ ವಿದ್ಯಾರ್ಥಿ ಕಿಶೋರ್ ಮನವಿ ಮಾಡಿದರು.

    ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಹಾಗೆಯೇ ಶಾಲೆಯಲ್ಲಿನ ಇನ್ನಿತರ ಸಮಸ್ಯೆಗಳಿದ್ದರೂ ಗಮನಕ್ಕೆ ತರಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ ತಿಳಿಸಿದರು.

    ಸರ್ಕಾರದ ವಿವಿಧ ಅನುದಾನ ಹಾಗೂ ಸ್ಥಳೀಯರ ಸಂಸ್ಥೆಗಳ ನೆರವಿನೊಂದಿಗೆ ಕಟ್ಟಡ ದುರಸ್ತಿ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಹಂತಹಂತವಾಗಿ ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸಲಾಗುವುದು. ಅಗತ್ಯವಿದ್ದಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷೆ ಶಿವಗಂಗಮ್ಮ ತಿಳಿಸಿದರು.

    ವಿಕಾಸ ಕೇಂದ್ರದ ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ಪ್ರತಿಯೊಬ್ಬರೂ ಮಕ್ಕಳಿಗೆ ವಿಶೇಷ ಹಕ್ಕು ನೀಡಲಾಗಿದೆ. ಆದರೆ ಮಕ್ಕಳನ್ನು ಪ್ರಿತಿಸಿ ಗೌರವಿಸಿ ಅವರನ್ನು ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

    ಅಗಳಕುಪ್ಪೆ ವಿದ್ಯಾರ್ಥಿಗಳಿಗೆ ಗಣಿತ ಪರಿಕ್ಷೆ ಮಾಡಲಾಯಿತು. ಪಂಚಾಯಿತಿಯಿಂದ ನಗದು ಬಹುಮಾನ ನೀಡಲಾಯಿತು.
    ವಿದ್ಯಾರ್ಥಿಗಳಾದ ಅನುಷ್ಕಾ ಹಾಗೂ ಧನುಷ್ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ ಸ್ವಾತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ, ಸದಸ್ಯರಾದ ಲಲಿತಮ್ಮ, ಬಿ.ಎಲ್.ಸಿದ್ದಪ್ಪ, ಜಗದೀಶ್, ಜಯಲಕ್ಷ್ಮಮ್ಮ,ನರಸಿಂಹಯ್ಯ, ವಿ.ಶ್ವೇತಾ ಕುಮಾರ್, ಎಚ್.ವೈ. ಮೇನಕಾ, ರಾಜಣ್ಣ , ಕಾರ್ಯದರ್ಶಿ ಎಸ್.ವಿಶ್ವರಾಧ್ಯ, ಲೆಕ್ಕ ಸಹಾಯಕ ಬಿ.ವಿಶ್ವನಾಥ, ಬಿಲ್ ಕಲೆಕ್ಟರ್ ಎಚ್. ಶ್ರೀನಿವಾಸ್, ಕೆ.ರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts