More

    ವಿಎಸ್ಸೆಸ್ಸೆನ್ ಮತದಾರರ ಪಟ್ಟಿಯಲ್ಲಿ ಲೋಪ, ದೇವರಹೊಸಹಳ್ಳಿ ಸಂಘದ ಕಚೇರಿ ಎದುರು ರೈತರ ಹೋರಾಟ ಚುನಾವಣಿ ಮುಂದೂಡಲು ಪಟ್ಟು

    ದಾಬಸ್‌ಪೇಟೆ: ಸೋಂಪುರ ಹೋಬಳಿಯ ದೇವರಹೊಸಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಹಲವು ರೈತರ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಬುಧವಾರ ಸಹಕಾರ ಸಂಘದ ಎದುರು ರೈತರು ಪ್ರತಿಭಟನೆ ನಡೆಸಿದರು.

    ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರನ್ನು ಚುನಾಯಿಸಲು ಮೇ 8ರಂದು ಚುನಾವಣೆ ಘೋಷಣೆಯಾಗಿದೆ. ಸಾಲಗಾರರ ಕ್ಷೇತ್ರದಿಂದ 11 ನಿರ್ದೇಶಕರು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಆದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಬಹುತೇಕ ರೈತರ ಹೆಸರು ಕೈಬಿಡಲಾಗಿದೆ ಎಂದು ರೈತರು ದೂರಿದರು.

    ಸಾಲಗಾರರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ ಈ ಹಿಂದೆ 900ಕ್ಕೂ ಅಧಿಕ ಮತದಾರರಿದ್ದರು. ಈಗ ಈ ಸಂಖ್ಯೆಯನ್ನು 93ಕ್ಕೆ ಇಳಿಸಲಾಗಿದೆ. ಸಾಲಗಾರರಲ್ಲದ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ 31 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದ್ದರಿಂದ ಈ ಚುನಾವಣೆ ಪ್ರಕ್ರಿಯೆ ಮುಂದೂಡಿ, ಎಲ್ಲರಿಗೂ ಮತದಾನದ ಹಕ್ಕು ನೀಡಬೇಕೆಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಣಿ ಅವರಿಗೆ ಮನವಿ ಸಲ್ಲಿಸಿದರು.

    ಕಳೆದೆರಡು ವರ್ಷಗಳಿಂದ ಕರೊನಾ ಕಾರಣದಿಂದ ಸಭೆ-ಸಮಾರಂಭಗಳಿಗೆ ತಡೆ ಹಾಕಲಾಗಿತ್ತು. ಆದ್ದರಿಂದ ಕೆಲ ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗಿಲ್ಲ. ಹಾಗೆಯೇ ಸಭೆಗೆ ಹಾಜರಾದವರ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಆದ್ದರಿಂದ ಈ ಚುನಾವಣೆ ತಡೆಹಿಡಿಯಬೇಕು ಎಂದು ಮುಖಂಡ ವೆಂಕಟಾಚಲಯ್ಯ ಆಗ್ರಹಿಸಿದರು.

    ಷೇರುದಾರರು ಕನಿಷ್ಠ ಎರಡು ಸಾಮಾನ್ಯ ಸಭೆಗೆ ಹಾಜರಾಗಿ ಸಹಿ ಹಾಕಿರಬೇಕು. ಕನಿಷ್ಠ ಹತ್ತು ಸಾವಿರ ರೂ. ವ್ಯವಹಾರ, ಇಲ್ಲವೇ ಸಾಲವನ್ನು ಪಡೆದಿರಬೇಕು ಎಂಬ ನಿಯಮವಿದೆ. ಈ ನಿಯಮ ಉಲ್ಲಂಘನೆ ಮಾಡಿರುವವರ ಹೆಸರನ್ನು ಸರ್ಕಾರದ ನಿಯಮದ ಪ್ರಕಾರವೇ ಮತದಾರರ ಪಟ್ಟಿಯಲ್ಲಿ ಕೈ ಬಿಡಲಾಗಿದೆ.
    ಜಿ.ವಿ ವಾಣಿ
    ಮುಖ್ಯಕಾರ್ಯನಿರ್ವಾಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts