More

    ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

    ನವದೆಹಲಿ: ಮಹಿಳೆಯರನ್ನು ಶೈಕ್ಷಣಿಕವಾಗಿ ಮುಂದುವರಿಯುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ.

    ಅದರಂತೆ, ಪದವಿ ಶಿಕ್ಷಣ ಪೂಣರ್ಗೊಳಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಪಾಸ್​ಪೋರ್ಟ್​ ಕೂಡ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ.

    ಇದನ್ನೂ ಓದಿ; ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!

    ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ಇಂಥದ್ದೊಂದು ಯೋಜನೆ ಘೋಷಿಸಿದ್ದಾರೆ. ವಿದ್ಯಾರ್ಥಿನಿಯರು ಪದವಿ ಪೂರ್ಣಗೊಳಿಸುತ್ತಿದ್ದಂತೆ ಕಾಲೇಜಿನಲ್ಲಿಯೇ ಪಾಸ್​ಪೋರ್ಟ್​ ಕೂಡ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ರಸ್ತೆ ಸಂಚಾರ ನಿಯಮಗಳು ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ 18- 25 ವಯಸ್ಸಿನವರಿಗೆ ವಾಹನ ಚಾಲನಾ ಕಲಿಕಾ ಪರವಾನಗಿ ಹಾಗೂ ಹೆಲ್ಮೆಟ್​ ವಿತರಣಾ ಸಮಾರಂಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಜತೆಗೆ, ಇನ್ನು ಮುಂದೆ ಕಾಲೇಜಿನಲ್ಲಿಯೇ ವಾಹನ ಚಾಲನಾ ಪರವಾನಗಿಯನ್ನು ವಿತರಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!

    ಪಂಜಾಬ್​, ಹರಿಯಾಣ ಸೇರಿ ಉತ್ತರ ಭಾರತದ ರಾಜ್ಯಗಳಿಂದ ವಿದೇಶಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ಉಳಿದ ರಾಜ್ಯಗಳಿಗೆ ಹೋಳಿಸಿದಲ್ಲಿ ಇಲ್ಲಿ ಪಾಸ್​ಪೋಟ್​ರ್ ಹೊಂದುವವರ ಸಂಖ್ಯೆಯೂ ಅಧಿಕ ಈ ಕಾರಣಕ್ಕಾಗಿ ಸರ್ಕಾರ ಇಂಥದ್ದೊಂದು ಯೋಜನೆಗೆ ಮುಂದಾಗಿದೆ.

    ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts