More

    ಕಲ್ಲಿದ್ದಲು ಕೊರತೆಯಿಂದ 657 ಪ್ಯಾಸೆಂಜರ್ ರೈಲು ರದ್ದು, ಹಲವೆಡೆ ವಿಳಂಬ: ರೈಲ್ವೆ ಇಲಾಖೆ

    ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆ ಕಾಡಿದ್ದು, ವಿದ್ಯುತ್​ ಸಮಸ್ಯೆ ಜತೆಗೆ ಇದೀಗ ರೈಲ್ವೆ ವಲಯದ ಮೇಲೂ ಭಾರೀ ಪರಿಣಾಮ ಬೀರಿದೆ.

    ಕಲ್ಲಿದ್ದಲು ಬಿಕ್ಕಟ್ಟು ಹಿನ್ನಲೆಯಲ್ಲಿ ರಾಷ್ಟ್ರದ ಹಲವೆಡೆ ಪ್ಯಾಸೆಂಜರ್​ ರೈಲು ಸೇವೆಯನ್ನು ರದ್ದುಗೊಳಿಸಿದೆ. ದೇಶಕ್ಕೆ ಶೇ.70ರಷ್ಟು ವಿದ್ಯುತ್​ ಕಲ್ಲಿದ್ದಲಿನಿಂದ ಪೂರೈಕೆಯಾಗುತ್ತಿದೆ. ಇದೀಗ ಕಲ್ಲಿದ್ದಲು ಕೊರತೆಯಿಂದಾಗಿ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    ಕೈಗಾರಿಕಾ ವಲಯ ಸಾಕಷ್ಟು ಸಮಸ್ಯೆ ಎದುರಿಸಲಿದ್ದು, ಇದು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಉಕ್ರೇನ್​-ರಷ್ಯಾ ಆಕ್ರಮಣದಿಂದಾಗಿ ಬೆಲೆ ನಿಯಂತ್ರಣಕ್ಕೆ ಹೆಣಗಾಡುತ್ತಿರುವ ಸರ್ಕಾರಕ್ಕೆ ಹಣದುಬ್ಬರದಲ್ಲಿ ಮತ್ತಷ್ಟು ಏರಿಕೆ ಅಪಾಯವು ಇದೆ.

    ರೈಲ್ವೆ ವಲಯದ ಮೇಲೂ ಪರಿಣಾಮ ಬೀರಿದ್ದು, ಪ್ರಯಾಣಿಕ ರೈಲುಗಳ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಕೆಲವೆಡೆ ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್​ ಕೃಷ್ಣ ಬನ್ಸಾಲ್​ ತಿಳಿಸಿದ್ದಾರೆ.

    ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಇಂಧನದ ಕೊರತೆಯಿಂದಾಗಿ ದೂರದವರೆಗೆ ಸರಕು ಬೋಗಿಗಳು ತಲುಪಲು ವಿಳಂಬವಾಗಲಿದೆ ಎಂದು ತಿಳಿಸಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಸದ್ಯದಲ್ಲೇ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದಿದ್ದಾರೆ.

    ಪಿಎಸ್​ಐ ಹಗರಣದಲ್ಲಿ ಅಕ್ರಮವೆಸಗಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ: ಪ್ರತಾಪ್​ ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts