More

    ಪ್ರಶ್ನೆಪತ್ರಿಕೆ ಸೋರಿಕೆ: ಯುಪಿಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು..

    ಲಖನೌ: ಉತ್ತರ ಪ್ರದೇಶ ಸರ್ಕಾರವು ಸಿವಿಲ್ ಮತ್ತು ರಿಸರ್ವ್ ಪೊಲೀಸ್ ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲು ಆದೇಶಿಸಿದೆ. ಮುಂದಿನ ಆರು ತಿಂಗಳೊಳಗೆ ಹೊಸ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.
    ಫೆಬ್ರವರಿ 17 ಮತ್ತು 18 ರಂದು ಪರೀಕ್ಷೆ ನಡೆದಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಮರು ಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದರು.

    ಇದನ್ನೂ ಓದಿ: Gmail: ಆಗಸ್ಟ್ 1 ರಿಂದ ಜಿಮೇಲ್ ಸೇವೆ ಸ್ಥಗಿತ?! ಇದಕ್ಕೆ ಗೂಗಲ್​ ಕೊಟ್ಟ ಸ್ಪಷ್ಟನೆ ಏನು? ವಿವರ ಇಲ್ಲಿದೆ ನೋಡಿ..

    ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಮಾಧ್ಯಮ ‘X'(ಎಕ್ಸ್‌)ನಲ್ಲಿ ಪೋಸ್ಟ್‌ ಮಾಡಿ ಪರೀಕ್ಷೆ ರದ್ದುಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ. ಪರೀಕ್ಷೆಗಳ ಪಾವಿತ್ರ್ಯತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

    ಪರೀಕ್ಷೆ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಹಲವರು ಕಠಿಣ ಶ್ರಮ ಹಾಕಿರುತ್ತಾರೆ. ಅಂತಹವರ ಪ್ರಯತ್ನಗಳನ್ನು ಹಾಳುಮಾಡುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗದು. ಪ್ರಶ್ನೆ ಪತ್ರಿಕೆ ಲೀಕ್​ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇಂತಹ ದುಷ್ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಮುಖ್ಯಮಂತ್ರಿಯವರು ನೀಡಿದ್ದಾರೆ.

    ಇನ್ನು ಸರ್ಕಾರವು ಪರಿಶೀಲನಾ ಅಧಿಕಾರಿ/ಸಹಾಯಕ ಪರಿಶೀಲನಾ ಅಧಿಕಾರಿ (ಆರ್​ಒ/ಎಆರ್​ಒ) ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಟ್ಯಾಂಪರಿಂಗ್ ನಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದೆ.

    ಪೊಲೀಸ್ ನೇಮಕಾತಿ ಮಂಡಳಿಯು ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಒಟ್ಟು 60,244 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿತ್ತು.

    ರಣಬೀರ್ – ಪಾಕ್​ ನಟಿ ಮಹಿರಾ ‘X ‘ನಲ್ಲಿ ಮೋಜು..ಸೀಕ್ರೇಟ್​ ಪತ್ತೆ ಹಚ್ಚಿದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts