More

    ಕೊರೊನಾ ವೈರಸ್​ ಬಗ್ಗೆ 1981ರ ಪುಸ್ತಕದಲ್ಲೇ ಭವಿಷ್ಯ ನುಡಿಯಲಾಗಿತ್ತಾ? ಅಷ್ಟಕ್ಕೂ ಇದು ಚೀನಾದ ಜೈವಿಕ ಅಸ್ತ್ರನಾ?

    ನವದೆಹಲಿ: ಅಮೆರಿಕದ ಪ್ರಖ್ಯಾತ ಲೇಖಕ ಡೀನ್​ ಕೂಂಟ್ಜ್​ 2019-2020ರ ಮಾರಕ ಕೊರೊನಾ ವೈರಸ್​ ಸ್ಫೋಟದ ಬಗ್ಗೆ 1981ರಲ್ಲೇ ಭವಿಷ್ಯ ನುಡಿದಿದ್ದ ಎಂಬ ವಾದವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಅಸಲಿಯತ್ತೇ ಬೇರೆ ಇದೆ.

    “ದಿ ಐಸ್ ಆಫ್​​ ಡಾರ್ಕ್ನೆಸ್” ಎಂಬ ಪುಸ್ತಕದ ಒಂದು ಪೇಜ್​ನಲ್ಲಿ ಕೊರೊನಾ ವೈರಸ್​ ಬಗ್ಗೆ ಕೂಂಟ್ಜ್​ ಈ ಮೊದಲೇ ವಿವರಿಸಿದ್ದಾರೆಂದು ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ಪೋಸ್ಟ್​ನಲ್ಲಿ ಹೇಳಲಾಗಿದ್ದು, ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಎಷ್ಟರಮಟ್ಟಿಗೆ ಅಂದರೆ ಈಗಾಗಲೇ ಈ ಪೋಸ್ಟ್​ 39,000 ಸಾವಿರ ಬಾರಿ ಶೇರ್​ ಆಗಿದ್ದು, ಟ್ವಿಟರ್​ನಲ್ಲಿ 2000 ರೀಟ್ವೀಟ್​ ಪಡೆದುಕೊಂಡಿದೆ.

    ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಕವರ್​ ಪೇಜ್​ ಮತ್ತು ವೈರಸ್​ ಬಗ್ಗೆ ಉಲ್ಲೇಖವಾಗಿರುವ ಒಂದು ಪೇಜ್​ ಅನ್ನು ವೈರಲ್​ ಮಾಡಲಾಗಿದೆ. ಅದರಲ್ಲಿ ವೈರಸ್​ಗೆ ವುಹಾನ್​-400 ಎಂದು ಕರೆಯಲಾಗಿದೆ.​ ಅಲ್ಲದೆ, ಕೆಲ ವಿವರಣೆಯನ್ನು ನೀಡಿದ್ದು, ಅದರ ಸಾರ ಹೀಗಿದೆ… ಅವರು ಈ ವಿಷಯವನ್ನು ವುಹಾನ್​-400 ಎಂದು ಕರೆಯುತ್ತಾರೆ. ಏಕೆಂದರೆ, ವುಹಾನ್​ನ ಹೊರಭಾಗದಲ್ಲಿರುವ ಆರ್​ಡಿಎನ್​ಎ ಲ್ಯಾಬ್​ನಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆ ಸಂಶೋಧನಾ ಕೇಂದ್ರದಲ್ಲಿ ರಚಿಸಲಾದ ಮಾನವ ನಿರ್ಮಿತ ಸೂಕ್ಷ್ಮಾಣು ಜೀವಿಗಳ ನಾಲ್ಕು ನೂರನೇ ಕಾರ್ಯ ಸಾಧ್ಯವಾದ ಒತ್ತಡ ಇದು ಎಂದು ಬರೆಯಲಾಗಿದೆ.

    ಅದೇ ಪುಸ್ತಕದ ಹೆಚ್ಚುವರಿ ಪೇಜ್​ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವುಹಾನ್​-400ನಿಂದ 2020ರಲ್ಲಿ ಶ್ವಾಸಕೋಶ ಸಮಸ್ಯೆಯಂತಹ ಗಂಭೀರ ಅನಾರೋಗ್ಯ ಹರಡುತ್ತದೆ ಎಂದು ವಾದಿಸಲಾಗಿದೆ.

    ಇದು ಭಾಗಶಃ ಸುಳ್ಳು: ಲೇಖಕ ಕೂಂಟ್ಜ್ ಚೀನಾ ನಗರವನ್ನು ಉಲ್ಲೇಖಿಸಿ​ ವುಹಾನ್-400 ಹೆಸರಿನಲ್ಲಿ ಕಾಲ್ಪನಿಕ ವೈರಸ್​ ಕತೆಯನ್ನು ಬರೆದಿರುವುದಕ್ಕೂ, ಈಗ ಚೀನಾದಲ್ಲಿ ಉದ್ಭವವಾಗಿರುವ ಸಮಸ್ಯೆಗೂ ಹೋಲಿಕೆ ಇದ್ದರು. ಪುಸ್ತಕದಲ್ಲಿ ಉಲ್ಲೇಖವಾಗಿರುವ ಅನಾರೋಗ್ಯದ ಗುಣಗಳ ಬಗ್ಗೆ ಹೆಚ್ಚು ತಿಳಿಸಿಲ್ಲ ಎಂದೂ ವಿಶ್ಲೇಷಸಲಾಗಿದೆ. ತನ್ನ ಕಾದಂಬರಿಯಲ್ಲಿ ವುಹಾನ್​-400 ಹೆಸರಿನ ಮೂಲಕ ವುಹಾನ್​ ಚೀನಾದ ಹೆಚ್ಚು ಮಹತ್ವ ಮತ್ತು ಅಪಾಯಾಕಾರಿಯಾಗಿದೆ. ಒಂದು ದಶಕದ ಹೊಸ ಜೈವಿಕ ಅಸ್ತ್ರವನ್ನು ನಗರದ ಹೊರಭಾಗದ ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.

    ಆದರೆ, ಸದ್ಯ ಹರಡಿರುವ ಕೊರೊನಾ ವೈರಸ್​ ಅನ್ನು ಲ್ಯಾಬ್​ನಲ್ಲಿ ಸೃಷ್ಟಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ವನ್ಯ ಜೀವಿಗಳನ್ನು ಅಕ್ರಮವಾಗಿ ಮಾರಾಟ ಮಾಡುವ ವುಹಾನ್​ ಆಹಾರ ಮಾರುಕಟ್ಟೆಯಲ್ಲಿ ವೈರಸ್​ ಉತ್ಪತಿಯಾಯಿತು ಎಂದು ಎಲ್ಲರೂ ನಂಬಿದ್ದಾರೆ. ಬಹುಶಃ ಬಾವಲಿಯಿಂದ ಉತ್ಪತಿಯಾಗಿ ಇತರೆ ಪ್ರಾಣಿಗಳ ಮೂಲಕ ಮಾನವನನ್ನು ತಲುಪಿರಬಹುದೆಂದು ಪರಿಣಿತರು ವಿಶ್ಲೇಷಿಸಿದ್ದಾರೆ.

    ರಾಯಿಟರ್ಸ್​ ಕೂಡ ಕೂಂಟ್ಜ್​ ಪುಸ್ತಕದ ಹೆಚ್ಚಿನ ಉಲ್ಲೇಖಗಳನ್ನು ತಿಳಿಯಲು ಅಧ್ಯಯನ ಮಾಡಿದೆ. ಕೂಂಟ್ಜ್​ ಉಲ್ಲೇಖಿಸಿರುವ ವುಹಾನ್​-400 ಮತ್ತು ಕೊರೊನಾ ವೈರಸ್​ಗೂ ರೋಗದ ಲಕ್ಷಣಗಳಿಗೂ ಭಾರಿ ವ್ಯತ್ಯಾಸವಿದೆ. ಕಾದಂಬರಿಯಲ್ಲಿರುವಂತೆ ವುಹಾನ್​-400 ಕಾಲಾವಧಿ ಕೇವಲ 4 ಗಂಟೆಗಳು ಮಾತ್ರ ಎಂದು ಉಲ್ಲೇಖಿಸಲಾಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾ ವೈರಸ್​ ಕಾಲಾವಧಿ 1ರಿಂದ 14 ದಿನಗಳಾಗಿವೆ. ಸಾಮನ್ಯಾ ಕಾಲಾವಧಿ 5 ದಿನಗಳಾಗಿರುತ್ತದೆ.

    ವುಹಾನ್​-400, ಇಲಿಗಳನ್ನು 100 ರಷ್ಟು ಕೊಲ್ಲುವ ರೋಗವಾಗಿದ್ದು, ಒಮ್ಮೆ ಈ ಸೋಂಕು ತಗುಲಿದರೆ ಯಾರೊಬ್ಬರು 24 ಗಂಟೆಗೂ ಹೆಚ್ಚು ಕಾಲ ಬದುಕುವುದಿಲ್ಲ. ಹೆಚ್ಚಿನವರು 12 ಗಂಟೆಯಲ್ಲೇ ಸಾಯುತ್ತಾರೆ ಎಂದು ಕೂಂಟ್ಜ್​ ಕಾದಂಬರಿಯಲ್ಲಿ ಬರೆಯಲಾಗಿದೆ. ಇದಕ್ಕೆ ಹೋಲಿಸಿದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾ ವೈರಸ್​ನಿಂದ ಮೃತಪಡುವ ಸಾಧ್ಯತೆ ವುಹಾನ್​ನಲ್ಲಿ ಶೇ. 2 ರಿಂದ 4 ಮತ್ತು ಹೊರಭಾಗದಲ್ಲಿ ಶೇ. 0.7 ಎಂದು ಹೇಳಲಾಗಿದೆ. ​

    ಇನ್ನು ಕೂಂಟ್ಜ್​ ಹೇಳಿರುವ ರೋಗದ ಲಕ್ಷಣಗಳಿಗೂ ಕೊರೊನಾಗೂ ತುಂಬಾನೇ ವ್ಯತ್ಯಾಸವಿದೆ. ವುಹಾನ್​-400 ಟಾಕ್ಸಿನ್​ ಅನ್ನು ಹೊರಸೂಸುವ ಪರಿಣಾಮ ಅದು ಮೆದುಳು ಅಂಗಾಂಶಗಳನ್ನು ಸಂಪೂರ್ಣ ತಿಂದುಹಾಕುತ್ತದೆ. ಇದರಿಂದ ಸಂಪೂರ್ಣವಾಗಿ ದೇಹದ ಕಾರ್ಯ ನಿಯಂತ್ರಣ ಕಳೆದುಕೊಳ್ಳುತ್ತದೆ. ನಾಡಿ ಮಿಡಿತ ನಿಲ್ಲುತ್ತದೆ. ಆಂಗಾಂಗಳು ತನ್ನ ಕಾರ್ಯವನ್ನು ನಿಲ್ಲಿಸುತ್ತದೆ ಹಾಗೂ ಉಸಿರಾಡಲು ಯಾವುದೇ ಪ್ರಚೋದನೆ ಇರುವುದಿಲ್ಲ ಎಂದು ಕೂಂಟ್ಜ್ ವಿವರಿಸಿದ್ದಾರೆ. ಆದರೆ, ಕೊರೊನಾ ವೈರಸ್​ಗೆ ಬಂದಾಗ ಜ್ವರ, ಕೆಮ್ಮು ಹಾಗೂ ಉಸಿರಾಟದಲ್ಲಿ ಕೊಂಚ ತೊಂದರೆ ಇದರ ಲಕ್ಷಣಗಳಾಗಿವೆ. ಗಂಭೀರವಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟದ ತೊಂದರೆ ಹಾಗೂ ಕಿಡ್ನಿ ವೈಫಲ್ಯ ಕಾಣಿಸಿಕೊಳ್ಳುತ್ತದೆ. ಆದರೆ, ವುಹಾನ್​-400ನಷ್ಟು ಅಪಾಯಕಾರಿಯಲ್ಲ ಎಂದು ತಿಳಿದುಬಂದಿದೆ.

    ಗಮನಿಸಬೇಕಾದ ಸಂಗತಿಯೆಂದರೆ, 1981ರಲ್ಲಿ ಹೊರಬಂದ “ದಿ ಐಸ್ ಆಫ್ ಡಾರ್ಕ್ನೆಸ್” ನ ಮೊದಲ ಆವೃತ್ತಿಯಲ್ಲಿ ಕಾಲ್ಪನಿಕ ವೈರಸ್​ಗೆ ಚೀನಾದ ನಗರದ ಹೆಸರಿಡಲಾಗಿಲ್ಲ, ಆದರೆ “ಗೋರ್ಕಿ” (ಗೋರ್ಕಿ -400) ಎಂಬ ರಷ್ಯಾ ಪ್ರದೇಶದ ಹೆಸರಿಡಲಾಗಿತ್ತು. ಕಾದಂಬರಿಯ ಮೂಲ ಆವೃತ್ತಿಯ ಪ್ರಕಾರ ವೈರಸ್ ಅನ್ನು “ಗೋರ್ಕಿ” ನಗರದ ಹೊರಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು “ದಶಕದಲ್ಲಿ ಸೋವಿಯತ್‌ನ ಅತ್ಯಂತ ಪ್ರಮುಖ, ಅಪಾಯಕಾರಿ ಹೊಸ ಜೈವಿಕ ಅಸ್ತ್ರ” ಎಂದು ಅರ್ಥೈಸಲಾಗಿತ್ತು. 1981ರ ಆವೃತ್ತಿಗೆ ಸಂಬಂಧಿಸಿದ “ವುಹಾನ್” ಪದವನ್ನು ಗೂಗಲ್​ನಲ್ಲಿ ಹುಡುಕಾಡಿದಾಗ ಈ ಆವೃತ್ತಿಯಲ್ಲಿ “ವುಹಾನ್-400” ಸಂಬಂಧಿಸಿದ ಯಾವುದೇ ಫಲಿತಾಂಶಗಳು ಬರಲಿಲ್ಲ ಎಂದು ರಾಯಿಟರ್ಸ್​ ತಿಳಿಸಿದೆ.

    ಇನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಶೀತಲ ಸಮರದ ಅಂತ್ಯದ ವೇಳೆಗೆ, 1989ರಲ್ಲಿ ಪುಸ್ತಕವನ್ನು ಮರು ಬಿಡುಗಡೆ ಮಾಡಿದಾಗ ವೈರಸ್ ಹೆಸರನ್ನು ಬದಲಾಯಿಸಲಾಯಿತು. ಅವರ ಲೇಖನವು ಹಿಂದಿನ ಆವೃತ್ತಿಯ ಛಾಯಾಚಿತ್ರಗಳನ್ನು ಒಳಗೊಂಡಿದ್ದು, ಅದು “ಗೋರ್ಕಿ -400” ಅನ್ನು ಉಲ್ಲೇಖಿಸುತ್ತದೆ. ನಂತರದ ಆವೃತ್ತಿಯಲ್ಲಿ, ಕೂಂಟ್ಜ್ ತನ್ನ ಕಾದಂಬರಿಯನ್ನು “ಲೇ ನಿಕೋಲ್ಸ್” ಎಂಬ ಗುಪ್ತನಾಮವನ್ನು ಬಳಸುವ ಬದಲು ತನ್ನ ನಿಜವಾದ ಹೆಸರಿನಲ್ಲಿ ಪ್ರಕಟಿಸಿದ್ದ ಎಂದು ತಿಳಿದುಬಂದಿದೆ.

    ಈ ಬಗ್ಗೆ ತಿಳಿದುಕೊಳ್ಳಲು ರಾಯಿಟರ್ಸ್​ ಲೇಖಕರು ಮತ್ತು ಪ್ರಕಾಶಕರನ್ನು ಸಂಪರ್ಕಿಸಿದ್ದು, ಈವರೆಗೂ ಯಾವುದೇ ಉತ್ತರ ಅವರ ಬಂದಿಲ್ಲ ಎಂದು ಹೇಳಿದೆ.

    ಜಾಲತಾಣದಲ್ಲಿ ಶೇರ್​ ಆಗಿರುವ ಕೆಲವೊಂದು ಪೋಸ್ಟ್​ನಲ್ಲಿ ಬುಕ್​ ಪೇಜ್​ಗೆ ಯಾವುದೇ ಹೆಸರನ್ನು ನೀಡದೇ, ಇದು ಕೂಡ ಅದೇ ಪುಸ್ತಕಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಬರೆಯಲಾಗಿದೆ. ಅದರಲ್ಲಿರುವಂತೆ 2020ಕ್ಕೆ ವೈರಸ್​ ಜಾಗತಿಕವಾಗಿ ಹರಡಿ ತೀವ್ರ ಪರಿಣಾಮ ಬೀರಿ ಸಾವು-ನೋವಿಗೆ ಕಾರಣವಾಗಲಿದೆ ಎಂದು ಬರೆಯಲಾಗಿದೆ. ಆದರೆ, ದಿ ಐಸ್ ಆಫ್​​ ಡಾರ್ಕ್ನೆಸ್​ಗೆ ಸಂಬಂಧಿಸಿದಲ್ಲ. ಅದು 2008ರಲ್ಲಿ ಅಮೆರಿಕ ಲೇಖಕ ಸೈಲ್ವಿಯಾ ಬ್ರೌನ್​ ಬರೆದ ಎಂಡ್​ ಆಫ್​ ಡೇಸ್ ಪುಸ್ತಕಕ್ಕೆ ಸಂಬಂಧಿಸಿದ್ದು.​

    ಒಟ್ಟಾರೆ ಸಾಮಾಜಿಕ ಜಾಲತಾಣದ ವಾದ ಭಾಗಶಃ ಸುಳ್ಳಾಗಿದೆ. ಡೀನ್ ಕೂಂಟ್ಜ್ ಅವರ 1981ರ ಕಾದಂಬರಿ “ದಿ ಐಸ್ ಆಫ್ ಡಾರ್ಕ್ನೆಸ್” ಅನ್ನು 1989ರಲ್ಲಿ ಮರು-ಬಿಡುಗಡೆ ಮಾಡಿದಾಗ “ವುಹಾನ್ -400” ಎಂಬ ಕಾಲ್ಪನಿಕ ವೈರಸ್ ಬಗ್ಗೆ ಬರೆದಿದ್ದಾರಷ್ಟೇ. ಆದರೆ, ಇಲ್ಲಿನ ವುಹಾನ್​-400 ಕ್ಕೂ ಪ್ರಸ್ತುತ ಕೊರೊನಾ ವೈರಸ್​ ರೋಗದ ಲಕ್ಷಣಗಳಿಗೂ ಸಾಮ್ಯತೆಯೇ ಇಲ್ಲ. ಅಲ್ಲದೆ, ಕೊರೊನಾ, ವುಹಾನ್​ -400ಗಿಂತ ಹೆಚ್ಚು ಅಪಾಯಕಾರಿಯೇನಲ್ಲ. ಹೀಗಾಗಿ ವುಹಾನ್​-400 ಒಂದು ಕಾಲ್ಪನಿಕ ಕತೆಯಷ್ಟೇ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts