More

    ಶ್ರೀರಾಮ ಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಿ

    ಜಯಪುರ: ಶ್ರೀರಾಮ ಹಿಂದುಗಳ ಆರಾಧ್ಯ ದೇವರು ಮಾತ್ರವಲ್ಲ ಮಹಾತ್ಮ ಗಾಂಧಿ ಹೇಳಿದಂತೆ ಭಾರತಕ್ಕೆ ಪರಮಾದರ್ಶ. ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಮೂರ್ತಿ ಪ್ರತಿಷ್ಠಾಪನೆ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿ, ಸರ್ವರೂ ಸಮಾನರೂ ಎಂಬ ಶ್ರೀರಾಮನ ಆದರ್ಶವನ್ನು ನಾಡಿಗೆ ಸಾರಬೇಕು ಎಂದು ಕಾಂಗ್ರೆಸ್ ಮುಖಂಡ ಕುಕ್ಕುಡಿಗೆ ರವೀಂದ್ರ ಹೇಳಿದರು.

    ಮಂಗಳವಾರ ಹೇರೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಶ್ರೀರಾಮನ ಆಡಳಿತ, ಆದರ್ಶವನ್ನು ಮಲೇಶಿಯಾದಲ್ಲೂ ಅನುಸರಿಸುತ್ತಾರೆ. ಅಲ್ಲಿ ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿ ರಾಷ್ಟ್ರಾಧ್ಯಕ್ಷ ಅಧಿಕಾರ ಸ್ವೀಕರಿಸುತ್ತಾರೆ. ಥಾಯ್‌ಲೆಂಡ್ ರಾಜಮನೆತನದಲ್ಲಿ ರಾಜರನ್ನೆಲ್ಲ ರಾಮ ಎಂದೇ ಕರೆಯುತ್ತಾರೆ. ಮಹಾತ್ಮ ಗಾಂಧಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗುವ ಕನಸು ಕಂಡಿದ್ದರು. ಇದನ್ನು ಸಾಧಿಸಬೇಕೆಂದರೆ ಗ್ರಾಮಗಳ ಸಬಲೀಕರಣವಾಗಬೇಕು ಎಂದು ತಿಳಿಸಿದ್ದರು. ಹಾಗಾಗಿ ಜನಪ್ರತಿನಿಧಿಗಳು ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಜಾತಿ, ಧರ್ಮ, ಭಾಷೆ ಮೀರಿ ನಾವೆಲ್ಲರೂ ಸಮಾನರು ಎಂಬ ಭಾವನೆ ಬೆಳೆಸಿಕೊಳ್ಳೋಣ ಎಂದರು.
    ಜ.22ರಂದು ಹೇರೂರು ಗ್ರಾಪಂ ಸೀಗೋಡಿನಲ್ಲಿ ಹೇರೂರಿನ ಶ್ರೀ ರಾಮ ಭಕ್ತ ವೃಂದದಿಂದ ಶ್ರೀರಾಮ ತಾರಕ ಹೋಮ ಪಕ್ಷಾತೀತವಾಗಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಕರೆತರಬೇಕು ಎಂದು ತಿಳಿಸಿದರು.
    ಕೆಡಿಪಿ ಸದಸ್ಯ ನಾಗೇಶ್ ಅಮೀನ್, ಪಿಎಸಿಎಸ್ ನಿರ್ದೇಶಕ ಕೆ.ಪಿ.ರಂಗಪ್ಪಗೌಡ, ಗ್ರಾಪಂ ಸದಸ್ಯ ಅಶ್ವತ್ಥ್, ಕಾಂಗ್ರೆಸ್ ಮುಖಂಡರಾದ ಸುಕುಮಾರ್, ಸಂಜೀವ, ಕೆ.ಪಿ.ಚಂದ್ರೇಗೌಡ, ಕಿಬ್ಳಿ ರಂಗಪ್ಪ ಗೌಡ, ಶಬರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts