More

    ನವಲಗುಂದದಲ್ಲಿ ಶೋಭಾಯಾತ್ರೆ, ಶ್ರೀರಾಮ ಜಪ 18ರಿಂದ

    ನವಲಗುಂದ: ಅಯೋಧ್ಯೆಯಲ್ಲಿ ಜ. 22ರಂದು ಶ್ರೀ ರಾಮಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ನೆರವೇರಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಆರ್ಯವೈಶ್ಯ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜ. 18ರಿಂದ ಜ.22ರವರೆಗೆ ಸಂಭ್ರಮ ಹಾಗೂ ಸಡಗರಗಳಿಂದ ಛತ್ರ, ಚಾಮರ ಸಹಿತ ಶೋಭಾಯಾತ್ರೆ, ಶ್ರೀರಾಮ ತಾರಕ ಹೋಮ, ಶ್ರೀ ರಾಮನಾಮ ಜಪ, ಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲು ತೀರ್ವನಿಸಲಾಗಿದೆ ಎಂದು ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷ ಲೋಕನಾಥ ಹೆಬಸೂರ ತಿಳಿಸಿದರು.

    ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜ. 18ರಿಂದ 22ರ ವರೆಗೆ ವಿವಿಧ ಪೂಜೆ ಹಾಗೂ ಭವ್ಯ ಮೂರ್ತಿಗಳ ಮೆರವಣಿಗೆ ನಡೆಯಲಿದೆ ಎಂದರು. 18ರಂದು ಪ್ರಭು ಶ್ರೀ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ಮೂರ್ತಿಗಳ ಭವ್ಯ ಮೆರವಣಿಗೆ ಹಾಗೂ ಸಂಜೆ ಗಣಪತಿ ದೇವಸ್ಥಾನದಿಂದ ಶ್ರೀರಾಮ ದೇವರ ದೇವಸ್ಥಾನದವರೆಗೆ ವಸ್ತ್ರ ಸಂಹಿತೆಯೊಂದಿಗೆ ಶ್ರೀರಾಮ ಜಪ ಹಾಗೂ ಮಹಾಮಂಗಳಾರತಿ ಜರುಗಲಿದೆ. 19ರಂದು ಸಂಜೆ ಅಮ್ಮನವರ ಪಲ್ಲಕ್ಕಿ ಸೇವೆ ಶ್ರೀರಾಮನಾಪ ಜಪ, ಶ್ರೀ ಸೀತಾರಾಮ ಕಲ್ಯಾಣ ಹಾಗೂ ಮಹಾಮಂಗಳಾರತಿ, 20 ರಂದು ಸಂಜೆ ಶ್ರೀರಾಮದೇವರ ಹಾಡುಗಳು, ಜಪ, ಹನುಮಾನ ಚಾಲಿಸಾ ಪಠಣ, ಮಕ್ಕಳಿಗೆ ರಾಮಾಯಣ ಕಥೆಯ ಚಿತ್ರಣ ಹಾಗೂ ವಿವರಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 21ರಂದು ಸಂಜೆ ಪ್ರಭು ಶ್ರೀರಾಮನ ರಥೋತ್ಸವ, ಉಯ್ಯಾಲೆ ಉತ್ಸವ ನಡೆಯಲಿದೆ. 22ರಂದು ಬೆಳಗ್ಗೆ ಶ್ರೀರಾಮನಾಮ ಜಪ, ಸಂಕಲ್ಪ, ಪೂಣ್ಯಾಹವಾಚನ, ನವಗ್ರಹ ಪೂಜಾ, ಶ್ರೀನೇಮ ತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದೆ. ಪ್ರತಿ ದಿನ ಕಾರ್ಯಕ್ರಮದ ನಂತರ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದರು.

    ಅಜಿತ ಆನೇಗುಂದಿ, ಶಂಕರ ಧಾರವಾಡ ಎಸ್.ಎನ್. ಡಂಬಳ, ಮುರಳೀಧರ ಹೆಬಸೂರ, ಉಷಾರಾಣಿ ಧಾರವಾಡ, ಶ್ರೀದೇವಿ ಆನೇಗುಂದಿ, ಸರಸ್ವತಿ ಹರಿಹರ, ಡಿ.ಜಿ. ಹೆಬಸೂರ, ಮನೋಹರ ಇಂಗಳಹಳ್ಳಿ, ಈಶ್ವರ ಹೆಬಸೂರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts