More

    ಪಾರ್ತೇನಿಯಂ ಕಳೆಯಿಂದ ನಾನಾ ಸಮಸ್ಯೆ

    ದೇವದುರ್ಗ: ಬೆಳೆಗಳ ನಡುವೆ ಕಂಡುಬರುವ ಪಾರ್ತೇನಿಯಂ(ಕಾಂಗ್ರೆಸ್) ಕಳೆಯಿಂದ ಬೆಳೆಗಳಿಗೆ ನಾನಾ ಸಮಸ್ಯೆ ಉಂಟಾಗಲಿದೆ ರೈತರು ಕಳೆ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ರಾಯಚೂರು ಕೃಷಿ ವಿಜ್ಞಾನ ವಿವಿ ಪ್ರಾಧ್ಯಾಪಕಿ ಡಾ.ಅನುಪಮ ಹೇಳಿದರು.

    ಇದನ್ನೂ ಓದಿ: ಡಿಸಿಎಂ ಪದ ವ್ಯಾಲ್ಯೂ ಕಳೆದುಕೊಂಡಿದೆ; ರಾಯರೆಡ್ಡಿ

    ತಾಲೂಕಿನ ಕೊಪ್ಪರ ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನ ವಿವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ನಡೆದ ಪಾರ್ತೇನಿಯಂ ಕಳೆ ನಿರ್ಮೂಲನೆ ಆಂದೋಲನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ಸುಮಾರು ಐದು ದಶಕಗಳ ಹಿಂದೆ ಭಾರತ ಅಮೇರಿಕಾದಿಂದ ಗೋಧಿ ಆಮದು ಮಾಡಿಕೊಳ್ಳುವ ವೇಳೆ ಪಾರ್ತೇನಿಯಂ ಕಳೆ ದೇಶಕ್ಕೆ ಬಂದಿದೆ. ಪಾರ್ತೇನಿಯಂ ಕಳೆ ವಿಷಕಾರಿಯಾಗಿದ್ದು ಯಾವುದೇ ಪ್ರಾಣಿಗೂ ಆಹಾರವಲ್ಲ.

    ದನಗಳು ತಿಂದರೆ ಜೊಲ್ಲು ಸೋರುವಿಕೆ, ಹುಣ್ಣು ರೋಗ ಕಂಡುಬರುತ್ತಿದೆ. ಮನುಷ್ಯರಿಗೆ ಚರ್ಮರೋಗ, ಅಸ್ತಮ ಎದುರಾಗಬಹುದು. ಅಲ್ಲದೆ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳಲಿದ್ದು ಇಳುವರಿ ಕುಸಿತಗೊಳ್ಳಲಿದೆ.

    ಈ ಹಿನ್ನೆಲೆಯಲ್ಲಿ ರೈತರು ಪಾರ್ತೇನಿಯಂ ಸಸಿ ಕಿತ್ತು ಸುಡಬೇಕಿದೆ. ಈ ಬಗ್ಗೆ ರೈತರಿಗೆ ಕೃಷಿ ವಿದ್ಯಾರ್ಥಿಗಳು ಜಮೀನಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದರು. ವಿದ್ಯಾರ್ಥಿಗಳಾದ ಅಪೂರ್ವ, ಅಭಿಷೇಕ್, ಗೋಪಾಲ್, ಗ್ರಾಮದ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts