More

    ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆಯೇ ಈ ಸಲ?

    ನವದೆಹಲಿ: ಕರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದ್ದು, ಒಟ್ಟಾರೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಇದು ಸಂಸತ್ ಅಧಿವೇಶನವನ್ನೂ ಬಿಡುವ ಲಕ್ಷಣವಿಲ್ಲ. ಈ ಸಲದ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆಯೇ ಎಂಬ ಸಂದೇಹ ಉಂಟಾಗಿದೆ. ಸಾಮಾನ್ಯವಾಗಿ ಇಷ್ಟು ಹೊತ್ತಿಗಾಗಲೇ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ ನಡೆಯಬೇಕಾಗಿತ್ತು. ಆದರೆ, ಇದುವರೆಗೂ ಚಳಿಗಾಲದ ಅಧಿವೇಶನದ ಬಗ್ಗೆ ಕೇಂದ್ರ ಸರ್ಕಾರವೂ ಚಕಾರವೆತ್ತಿಲ್ಲ.

    ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗುವ ಅಧಿವೇಶನ ಮೂರು ವಾರ ಕಾಲ ನಡೆಯುತ್ತಿತ್ತು. ದೆಹಲಿಯಲ್ಲಿ ಕರೊನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿರುವ ಕಾರಣ ಚಳಿಗಾಲದ ಅಧಿವೇಶನವನ್ನು ಕರೆಯದಿರಲು ಹಾಗೂ ನೇರವಾಗಿ ಜನವರಿ ಅಂತ್ಯಕ್ಕೆ ಬಜೆಟ್ ಅಧಿವೇಶನಕ್ಕೆ ಹೋಗಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ.

    ಇದನ್ನೂ ಓದಿ: ಲಕ್ಷ್ಮೀ ವಿಲಾಸ್ ಬ್ಯಾಂಕ್ ಗ್ರಾಹಕರ ಗಮನಕ್ಕೆ- ಡಿಸೆಂಬರ್ 16ರ ತನಕ ನಗದೀಕರಣಕ್ಕೆ 25,000 ರೂಪಾಯಿ ಮಿತಿ

    ಸಂಸತ್ ಅಧಿವೇಶನದ ಇತಿಹಾಸದ ಪುಟಗಳನ್ನು ತಿರುವಿದರೆ, 1975, 1979 ಹಾಗೂ 1984ರಲ್ಲಿ ಚಳಿಗಾಲದ ಅಧಿವೇಶನ ನಡೆದಿಲ್ಲ ಎಂಬ ಅಂಶ ಗಮನಸೆಳೆಯುತ್ತದೆ. ಸಂಸತ್​ನಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದರಿಂದ ಮಾರ್ಚ್​ನಲ್ಲಿನ ಬಜೆಟ್ ಅಧಿವೇಶನವನ್ನು ಹಾಗೂ ಮುಂಗಾರು ಅಧಿವೇಶನವನ್ನು ಅವಧಿಗೂ ಮೊದಲೇ ಮೊಟಕುಗೊಳಿಸಲಾಗಿತ್ತು. (ಏಜೆನ್ಸೀಸ್)

    ದಾರುಲ್ ಉಲೂಮ್ ಹಕ್ಕಾನಿಯಾ ಪಾಕಿಸ್ತಾನದ ಜಿಹಾದಿಗಳ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts