More

    ಗಣರಾಜ್ಯೋತ್ಸವ ದಿನದ ಹಿಂಸಾಚಾರ ಖಂಡಿಸಿ, ಬುದ್ಧಿಮಾತು ಹೇಳಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​

    ನವದೆಹಲಿ: ಮಹಾಮಾರಿ ಕರೊನಾ ಸಂಕಷ್ಟ ನಡುವಿನ ಸಂಸತ್ತಿನ ಜಂಟಿ ಅಧಿವೇಶನವೂ ತುಂಬಾ ಮುಖ್ಯವಾಗಿದೆ. ಈ ಹೊಸ ವರ್ಷ, ಹೊಸ ದಶಕ ಮತ್ತು ಇದೇ ವರ್ಷ ನಾವು 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿದ್ದೇವೆ. ಇಂದು ಎಲ್ಲ ಸಂಸದರು ಹಾಜರಾಗುವ ಮೂಲಕ ಯಾವುದೇ ಕಠಿಣ ಸಮಯದಲ್ಲಿ ನಾವು ಮತ್ತು ಭಾರತ ಎಂದಿಗೂ ನಿಲ್ಲುವುದಿಲ್ಲ ಎಂಬ ಸಂದೇಶ ಮತ್ತು ನಂಬಿಕೆಯನ್ನು ನೀವಿಂದು ಸಾರಿದ್ದೀರಿ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹೇಳಿದರು.

    ಬಜೆಟ್​ ಅಧಿವೇಶನ ಆರಂಭಕ್ಕೂ ಮುನ್ನ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಿದರು. ಕರೊನಾ ವಿರುದ್ಧ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಕರೊನಾ ಸಮಯದಲ್ಲೇ ಮಾಜಿ ರಾಷ್ಟ್ರಪತಿ ಪ್ರಣಾಬ್​ ಮುಖರ್ಜಿ ತೀರಿಕೊಂಡರು. ಕೋವಿಡ್​ನಿಂದ 6 ಸಂಸದರು ನಮ್ಮನ್ನು ಬಿಟ್ಟು ಹೋದರು. ಆ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆಂದರು.

    ನಮ್ಮ ಸರ್ಕಾರ ಸರಿಯಾದ ಸಮಯಕ್ಕೆ ತೆಗೆದುಕೊಂಡ ನಿರ್ಧಾರಗಳಿಂದ ಲಕ್ಷಾಂತರ ನಾಗರಿಕರ ಜೀವವನ್ನು ಉಳಿಸಿರುವುದರ ಬಗ್ಗೆ ನನಗೆ ಸಮಾಧಾನವಿದೆ. ಇಂದು ಕರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಇಳಿಮುಖವಾಗುತ್ತದೆ. ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಭಾರತ, ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಾನವಕುಲದ ಜವಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಭಾರತ ಬೇರೆ ದೇಶಗಳ ಲಕ್ಷಾಂತರ ಲಸಿಕೆಗಳನ್ನು ಒದಗಿಸಿದೆ ಎಂದು ಹೆಮ್ಮೆಪಟ್ಟರು.

    ದೇಶಾದ್ಯಂತ ಇರುವ 24 ಸಾವಿರದ ಆಸ್ಪತ್ರೆಗಳಲ್ಲಿ ಆಯುಷ್ಮಾನ್​ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಅಡಿಯಲ್ಲಿ ದೇಶಾದ್ಯಂತ 7 ಸಾವಿರ ಕೇಂದ್ರಗಳಲ್ಲಿ ಬಡವರು ಅತಿ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಇದೇ ವೇಳೆ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಗಲಭೆ ಬಗ್ಗೆ ಮಾತನಾಡಿ, ಗಣರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಯಿತು. ಸಂವಿಧಾನದಲ್ಲಿ ಎಲ್ಲರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹಾಗೆಯೇ ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಅನುಸರಿಸಬೇಕೆಂದು ಅದೇ ಸಂವಿಧಾನ ನಮಗೆಲ್ಲ ತಿಳಿಸಿಕೊಟ್ಟಿದೆ ಎಂದು ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆಯಿಂದಾಗ ಗಲಭೆಯನ್ನು ಖಂಡಿಸಿದರು. (ಏಜೆನ್ಸೀಸ್​)

    ವಿತ್ತಸಂಕಷ್ಟಕ್ಕೆ ಸಿಗುವುದೇ ಪರಿಹಾರ?

    ಈ ದಶಕದ ಮೊದಲ ಅಧಿವೇಶನವು ಭಾರತದ ಉಜ್ವಲ ಭವಿಷ್ಯಕ್ಕೆ ತುಂಬಾ ಮುಖ್ಯ: ಪ್ರಧಾನಿ ಮೋದಿ

    ಇನ್ನಷ್ಟು ಮೇಡ್ ಇನ್ ಇಂಡಿಯಾ ಲಸಿಕೆ ಉತ್ಪಾದನೆ; ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts