More

    ಕರೊನಾ ಸಂಕಷ್ಟದ ನಡುವೆಯೇ ಮುಂಗಾರು ಅಧಿವೇಶನ; ಸಂಸತ್​ ಕಲಾಪಕ್ಕೆ ನಡೆಯುತ್ತಿರುವ ಸಿದ್ಧತೆ ಹೇಗಿದೆ ಗೊತ್ತೆ?

    ನವದೆಹಲಿ: ಕರೊನಾ ಸಂಕಷ್ಟ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್​ ಕಲಾಪಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇದು ಹಲವು ಪ್ರಥಮ ಹಾಗೂ ವಿಶೇಷತೆಗಳಿಗೆ ಕಾರಣವಾಗಲಿದೆ.

    ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಕ್ಕಾಗಿ ಸದನದ ಗ್ಯಾಲರಿ ಹಾಗೂ ಚೇಂಬರ್​ಗಳನ್ನು ಕೂಡ ಬಳಸಲಾಗುತ್ತಿದೆ. ಜತೆಗೆ, ಸದಸ್ಯರಿಗಾಗಿ ಎರಡೂ ಕಡೆಗಳಲ್ಲಿ 85 ಅಂಗುಲದ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ. ವೈರಸ್​ ಹಾಗೂ ಇತರ ಸೋಂಕು ನಿವಾರಣೆಗಾಗಿ ಏರ್​ ಕಂಡೀಷನರ್​ಗಳಲ್ಲಿ ನೇರಳಾತೀತ ವಿಕಿರಣಗಳನ್ನು ಬಳಸಲಾಗುತ್ತಿದೆ.

    ಇದನ್ನೂ ಓದಿ; ಮತ್ತೆ ಸಂಪೂರ್ಣ ಲಾಕ್​ಡೌನ್​; ತುರ್ತು ಸಂಪುಟ ಸಭೆಯಲ್ಲಿ ನಿರ್ಣಯ; ಆಗಸ್ಟ್​ 31ರವರೆಗೆ ನಿರ್ಬಂಧ ವಿಧಿಸಿದ್ದೆಲ್ಲಿ?

    ಇದಲ್ಲದೇ, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಅಧಿಕಾರಿಗಳು ಸಂಸತ್​ ಭವನವನ್ನು ಸಜ್ಜುಗೊಳಿಸಲು ಹಗಳಿರುಳು ಶ್ರಮಿಸುತ್ತಿದ್ದಾರೆ. ಅಧಿವೇಶನ ದಿನಾಂಕ ಪ್ರಕಟವಾಗುತ್ತಿದ್ದಂತೆ ಕಲಾಪಕ್ಕೆ ಸಿದ್ಧವಾಗಿರುವಂತೆ ಸಜ್ಜುಗೊಳಿಸಿದ್ದಾರೆ.

    ವಿವಿಧ ಪಕ್ಷಗಳ ಸಂಖ್ಯಾಬಲ ಆಧರಿಸಿ ಅವರಿಗೆ ಗ್ಯಾಲರಿ ಅಥವಾ ಚೇಂಬರ್​ಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸಭಾ ನಾಯಕರು, ವಿಪಕ್ಷಗಳ ನಾಯಕರಿಗೆ ರಾಜ್ಯಸಭೆಯ ಚೇಂಬರ್​ನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಜತೆಗೆ ಮಾಜಿ ಪ್ರಧಾನಿಗಳಾದ ಮನ್​ನೋಹನ್​ಸಿಂಗ್​ ಹಾಗೂ ಎಚ್.ಡಿ. ದೇವೇಗೌಡ ಅವರಿಗೂ ಚೇಂಬರ್​ನಲ್ಲಿಯೇ ಆಸನ ವ್ಯವಸ್ಥೆ ಇರಲಿದೆ.

    ಇದನ್ನೂ ಓದಿ; ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ 

    ಲೋಕಸಭೆ ಹಾಗೂ ರಾಜ್ಯಸಭೆಗಳ ಕಲಾಪ ನಾಲ್ಕು ತಾಸಿಗಷ್ಟೇ ಸೀಮಿತವಾಗಲಿದೆ. ಮೊದಲು ಲೋಕಸಭೆ ಕಲಾಪ ಆರಂಭವಾದರೆ, ನಂತರ ರಾಜ್ಯಸಭೆ ಕಲಾಪಕ್ಕೆ ಚಾಲನೆ ಸಿಗಲಿದೆ.

    ಅಧಿಕಾರಿಗಳ ಗ್ಯಾಲರಿ ಹಾಗೂ ಪ್ರೆಸ್​ ಗ್ಯಾಲರಿಯಲ್ಲೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ 15 ಜನರಿಗಷ್ಟೇ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.  ಮಾರ್ಚ್​ 23 ರಂದು ಬಜೆಟ್​ ಅಧೀವೇಶನ ಮುಕ್ತಾಯಗೊಂಡಿತ್ತು. ಇದಾದ ಆರು ತಿಂಗಳ ಒಳಗೆ ಮತ್ತೆ ಅಧಿವೇಶನ ನಡೆಸಲೇಬೇಕಾಗುತ್ತದೆ. ಈ ಕಾರಣದಿಂದಾಗಿ ಸೆ.23ರೊಳಗಾಗಿ ಕಲಾಪ ಆರಂಭಿಸಬೇಕಾದ ಅನಿವಾರ್ಯತೆ ಇದೆ.

    ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts