More

    ಮನೆ ಮುಂದೆ ಕಾರು ನಿಲ್ಲಿಸಲು ಇನ್ನು ಮುಂದೆ ಬೇಕು ‘ಪಾರ್ಕಿಂಗ್ ಪರ್ಮಿಟ್’ !

    ಬೆಂಗಳೂರು: ಬೆಂಗಳೂರಲ್ಲಿ ವಾಹನ ಕೊಳ್ಳೋದು ಸುಲಭ, ಪಾರ್ಕಿಂಗ್ ಸಿಗೋದು ಕಷ್ಟ ಅಂತಾರೆ! ಮುಂಬರುವ ದಿನಗಳಲ್ಲಿ ಕಷ್ಟವಾಗಿ ಸಿಗುವ ಜೊತೆಗೆ ಪಾರ್ಕಿಂಗ್ ದುಬಾರಿ ಕೂಡ ಆಗಲಿರುವ ಸೂಚನೆಗಳಿವೆ. ಏಕೆಂದರೆ ನಗರದ ಬಹುತೇಕ ಪ್ರದೇಶಗಳನ್ನು ಪೇ ಅಂಡ್ ಪಾರ್ಕ್​ ವ್ಯವಸ್ಥೆಯಡಿ ತಂದು, ರಸ್ತೆ ಬದಿಯ ಪಾರ್ಕಿಂಗ್​ಅನ್ನು ದುಬಾರಿಗೊಳಿಸುವ ಹೊಸ ಪಾರ್ಕಿಂಗ್ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲಿದೆ.

    ಡೈರೆಕ್ಟೊರೇಟ್​ ಆಫ್ ಅರ್ಬನ್ ಲ್ಯಾಂಡ್ ಟ್ರ್ಯಾನ್ಸ್​ಪೋರ್ಟ್​ (ಡಿಯುಎಲ್​ಟಿ) ಬೆಂಗಳೂರಿಗಾಗಿ ರೂಪಿಸಿರುವ ‘ಪಾರ್ಕಿಂಗ್ ಪಾಲಿಸಿ 2.0’ ಅನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಅನುಮೋದಿಸಿದೆ. ಅನುಮೋದನೆಯ ನಂತರ ಮೊದಲನೆಯ ಹೆಜ್ಜೆಯಾಗಿ ಡಿಯುಎಲ್​ಟಿ, ಸದ್ಯದಲ್ಲೇ ನಗರದ ವಿವಿಧ ಜೋನ್​ಗಳಿಗೆ ಡ್ರಾಫ್ಟ್​ ಏರಿಯಾ ಪಾರ್ಕಿಂಗ್ ಪ್ಲಾನ್​ಗಳನ್ನು ರಚಿಸಲಿದೆ. ಇದನ್ನು ಬಿಬಿಎಂಪಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು. ಈ ಯೋಜನೆಯಲ್ಲಿ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್, ಪಾರ್ಕ್ ಅಂಡ್ ರೈಡ್, ರೆಸಿಡೆನ್ಷಿಯಲ್ ಪಾರ್ಕಿಂಗ್ – ಹೀಗೆ ವಿವಿಧ ರೀತಿಯ ಪಾರ್ಕಿಂಗ್ ವ್ಯವಸ್ಥೆಗಳು ಇರಲಿವೆ.

    ಇದನ್ನೂ ಓದಿ: ಬಂಧನ ವಾರಂಟ್​ ಜಾರಿಯಾಗುತ್ತಿದ್ದಂತೆ ಕೋರ್ಟ್​ಗೆ ದೌಡಾಯಿಸಿದ ನಟಿ ಪದ್ಮಜಾ ರಾವ್​

    ಹೊಸ ನೀತಿಯ ಅನುಸಾರವಾಗಿ ಮನೆಯ ಮುಂದೆ ವಾಹನ ನಿಲ್ಲಿಸಬೇಕೆಂದರೆ ಪಾರ್ಕಿಂಗ್ ಪರ್ಮಿಟ್​ಅನ್ನು ಪಡೆದುಕೊಳ್ಳಬೇಕು. ಸಣ್ಣ ಕಾರುಗಳಿಗೆ ವರ್ಷಕ್ಕೆ 1,000 ರೂ, ಮಧ್ಯಮ ಕಾರುಗಳಿಗೆ 3,000 ರೂ ಮತ್ತು ಎಂಯುವಿ ಮತ್ತು ಎಸ್​ಯುವಿಗಳಿಗೆ 4,000 ರೂಪಾಯಿ ನಿಗದಿಪಡಿಸಲಾಗಿದ್ದು, ರೆಸಿಡೆನ್ಷಿಯಲ್ ಪಾರ್ಕಿಂಗ್ ಪರ್ಮಿಟ್​ಗಳಿಗೆ 5,000 ರೂಪಾಯಿ ನಿಗದಿಪಡಿಸಲಾಗಿದೆ. ನಿವಾಸಿಗಳು ಪಾರ್ಕಿಂಗ್ ಪರ್ಮಿಟ್​ಗಳನ್ನು ಮೂರು ತಿಂಗಳು ಅಥವಾ ವರ್ಷಕ್ಕೊಮ್ಮೆ ನವೀಕರಿಸಬಹುದಾದ ಆಧಾರದಲ್ಲಿ ಪಡೆಯಬಹುದು.

    ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಎರಡೂ ಸೇರಿದಂತೆ ಬೆಂಗಳೂರು ನಗರದ ಬಹುತೇಕ ಪ್ರದೇಶಗಳು ಪೇ ಅಂಡ್ ಪಾರ್ಕ್ ಪದ್ಧತಿಯ ಕೆಳಗೆ ಬರಲಿವೆ. ರಸ್ತೆ ಬದಿಯ ಕಮರ್ಷಿಯಲ್ ಪಾರ್ಕಿಂಗ್​​ಗೆ ಆಯಾ ಪ್ರದೇಶದ ಬೇಸ್ ಪಾರ್ಕಿಂಗ್ ಫೀನ 1.5 ರಿಂದ 3 ಪಟ್ಟು ಪಾರ್ಕಿಂಗ್ ಫೀ ನಿಗದಿಪಡಿಸಲಾಗುವುದು. ಬಿಸಿ ಕಮರ್ಷಿಯಲ್ ಏರಿಯಾಗಳಲ್ಲಿ ಒಂದು ಗಂಟೆಗೂ ಮೀರಿ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ಹೆಚ್ಚಿನ ಫೀ ತೆರಬೇಕಾಗುವುದು.

    ಇದನ್ನೂ ಓದಿ: ಹಿಟ್​ ಆ್ಯಂಡ್​​ ರನ್​ ಕೇಸ್​: ಕಾರು ಮಾಹಿತಿ ಬೆನ್ನತ್ತಿದ್ದ ಬೆಂಗ್ಳೂರ್​ ಪೊಲೀಸ್ರಿಗೆ ಸಿಕ್ಕಿದ್ದು ಶಿಲ್ಪಾ ಶೆಟ್ಟಿ ದಂಪತಿ ಪರಿಚಯ!

    ಶಾಲಾ ವಾಹನಗಳಿಗೆ, ನಿರ್ಮಾಣ ಕಾಮಗಾರಿಗೆ ಬಳಸುವ ವಾಹನಗಳಿಗೆ, ಇಂಟರ್​ಸಿಟಿ ವಾಹನಗಳಿಗೆ ಮತ್ತು ಸಾಗಣೆ ವಾಹನಗಳಿಗೆ ವಿವಿಧ ಮಾರ್ಗಸೂಚಿಗಳನ್ನು ಈ ನೀತಿಯಲ್ಲಿ ರೂಪಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಬೈಸಿಕಲ್ ಪಾರ್ಕ್ ಮಾಡಿದರೆ ಯಾವುದೇ ಚಾರ್ಜ್ ಕಟ್ಟಬೇಕಾಗಿಲ್ಲ.(ಏಜೆನ್ಸೀಸ್)

    ಸಂಗೀತ ಕಲಾವಿದನಿಗೆ ಕಚ್ಚಿದ ರಸ್ಸೆಲ್ಸ್ ವೈಪರ್…. ಈ ಹಾವಿನಿಂದ ಎಚ್ಚರವಾಗಿರಿ !

     

    ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts