ಸಂಗೀತ ಕಲಾವಿದನಿಗೆ ಕಚ್ಚಿದ ರಸ್ಸೆಲ್ಸ್ ವೈಪರ್…. ಈ ಹಾವಿನಿಂದ ಎಚ್ಚರವಾಗಿರಿ !

ಬೆಂಗಳೂರು: ಬೆಂಗಳೂರಿನ ನಿವಾಸಿ ಗಾಯಕ, ಗಿಟಾರಿಸ್ಟ್ ಮತ್ತು ಸ್ಟಾಂಡ್ಅಪ್ ಕಾಮೆಡಿಯನ್ ಆದ ಹರ್ಬರ್ಟ್ ಪೌಲ್ ಅವರಿಗೆ ಇತ್ತೀಚೆಗೆ ರಸ್ತೆಯಲ್ಲಿ ಹಾವು ಕಚ್ಚಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಹಾವುಗಳ ಹ್ಯಾಚಿಂಗ್ ಸೀಸನ್ ಆಗಿರುವುದರಿಂದ ನಾಗರೀಕರು ಎಚ್ಚರಿಕೆಯಿಂದ ಇರಬೇಕಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ಬಿಗ್ ಬ್ರೂಸ್ಕಿ ಪಬ್​ನಲ್ಲಿ ಲೀಡ್ ಗಿಟಾರಿಸ್ಟ್ ಆಗಿರುವ ಪೌಲ್ ಮಂಗಳವಾರ ರಾತ್ರಿ ಮನೆಗೆ ಹಿಂತಿರುಗುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ … Continue reading ಸಂಗೀತ ಕಲಾವಿದನಿಗೆ ಕಚ್ಚಿದ ರಸ್ಸೆಲ್ಸ್ ವೈಪರ್…. ಈ ಹಾವಿನಿಂದ ಎಚ್ಚರವಾಗಿರಿ !