More

    ಪರಿಸರ ರಕ್ಷಣೆಗೆ ಕಾಳಜಿ ಅಗತ್ಯ, ಬೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನ ಇಕೋ ಕ್ಲಬ್ ಸ್ಥಾಪನೆ

    ಸೂಲಿಬೆಲೆ: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಶಾಲಾ ಹಂತದಿಂದಲೇ ಹಸಿರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪರಿಸರ ಕಾಳಜಿ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮುಖ್ಯಶಿಕ್ಷಕ ಬಿ.ಶ್ರೀನಿವಾಸ್ ತಿಳಿಸಿದರು.

    ಬೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಾಲುಮರದ ತಿಮ್ಮಕ್ಕ ಹೆಸರಿನ ಇಕೋ ಕ್ಲಬ್ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಷ್ಟ್ರೀಯ ಹಸಿರುಪಡೆ ಕಾರ್ಯಕ್ರಮದಲ್ಲಿ ಬೆಟ್ಟಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಹಸಿರುಪಡೆಯನ್ನು ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್ ಹೆಸರಿನಲ್ಲಿ ಸ್ಥಾಪಿಸಿ, ಶಾಲೆ ಆವರಣದಲ್ಲಿ ಸ್ವಚ್ಛ ಪರಿಸರ ಅಭಿಯಾನ ಯೋಜನೆ ಪ್ರಾರಂಭಿಸಿದೆ ಎಂದು ತಿಳಿಸಿದರು.

    ಸೌರ ಶಕ್ತಿ, ಮಳೆ ನೀರು ಕೊಯ್ಲು, ಇಂಗು ಗುಂಡಿ ನಿರ್ಮಾಣ, ಪ್ಲಾಸ್ಟಿಕ್‌ಮುಕ್ತ ಶಾಲಾ ಆವರಣ ಹಾಗೂ ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಹಸಿರುಪಡೆ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿ, ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಹಾಗೂ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಈ ಮೂಲಕ ಹಮ್ಮಿಕೊಳ್ಳಲಾಗಿದೆ.ಎಂದರು.

    ಸಹ ಶಿಕ್ಷಕಿ ಶೋಭಾ ಮಾತನಾಡಿ, ವಿದ್ಯಾರ್ಥಿಗಳು ಊಟದ ತಟ್ಟೆ ತೊಳೆದ ನೀರು ಗಿಡಗಳಿಗೆ ತಲುಪುವ ಹಾಗೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಗಿಡವನ್ನು ದತ್ತು ನೀಡಿ ಅದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದು, ಉತ್ತಮ ರೀತಿಯಲ್ಲಿ ಪೋಷಣೆ ಮಾಡಿದ ವಿದ್ಯಾರ್ಥಿಗೆ ಬಹುಮಾನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

    ನಮ್ಮ ಪರಿಸರ ಶೀರ್ಷಿಕೆಯಲ್ಲಿ ಚಿತ್ರ ಕಲೆ ಸ್ಪರ್ಧೆ, ಇಕೋ ಕ್ಲಬ್ ಹಸಿರುಪಡೆ ಗಿಡ ನೆಡುವಿಕೆ, ಗಿಡ ಪೋಷಣೆ ಮಾಡುವುದು, ನಮ್ಮ ಪರಿಸರ ನಮ್ಮ ಹೆಮ್ಮೆ, ಮನೆಗೊಂದು ಮರ ಊರಿಗೊಂದು ವನ, ಎಂಬ ವಾಕ್ಯಗಳೊಂದಿಗೆ ಮಕ್ಕಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಲಾಯಿತು. ಸಹ ಶಿಕ್ಷಕಿ ಮಮತಾ ಹಾಗೂ ಶಶಿಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts